ಮೀನಿನ ಎಣ್ಣೆಯನ್ನು ಮೀನಿನ ಅಂಗಾಂಶದಿಂದ ಹೊರತೆಗೆಯಲಾಗುತ್ತದೆ. ಇದರಲ್ಲಿ ಒಮೆಗಾ 3 ಕೊಬ್ಬಿನಾಮ್ಲದ ಜೊತೆಗೆ ವಿಟಮಿನ್ ಎ, ಡಿ ಕೂಡ ಹೊಂದಿದೆ. ಇದನ್ನು ಸೇವಿಸುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.
* ಮಾನವನ ಮೆದುಳು 60% ಒಮೆಗಾ3 ಕೊಬ್ಬಿನಾಮ್ಲಗಳಿಂದ ಕೂಡಿದೆ. ಇದು ಮೆದುಳು ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಹಕಾರಿಯಾಗಿದೆ. ಹಾಗಾಗಿ ಇದನ್ನು ಸೇವಿಸುವುದರಿಂದ ಮಾನಸಿಕ ಅಸ್ವಸ್ಥ ಸಮಸ್ಯೆಗಳನ್ನು ನಿವಾರಿಸಬಹುದು.
* ಮೀನಿನ ಎಣ್ಣೆ ನಮ್ಮ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಬೊಜ್ಜಿನ ಸಮಸ್ಯೆಯನ್ನು ನಿವಾರಿಸುತ್ತದೆ. ಹಾಗಾಗಿ ತೂಕ ನಷ್ಟಕ್ಕೆ ಇದು ತುಂಬಾ ಸಹಕಾರಿಯಾಗಿದೆ.
ಇದು ಉರಿಯೂತದ ಗುಣಗಳನ್ನು ಹೊಂದಿದ್ದು, ಶ್ವಾಸನಾಳಗಳನ್ನು ಸ್ವಚ್ಛಗೊಳಿಸಿ ಉಸಿರಾಟದ ಸಮಸ್ಯೆಯನ್ನು ನಿವಾರಿಸುತ್ತದೆ.
*ಇದು ಕಣ್ಣಿನ ಸಮಸ್ಯೆಯನ್ನು ನಿವಾರಿಸುತ್ತದೆ ಮತ್ತು ಮೂಳೆಗಳನ್ನು ಬಲಪಡಿಸಿ ಕೀಲುನೋವು, ಸಂಧಿವಾತ ಸಮಸ್ಯೆಗಳನ್ನು ದೂರ ಮಾಡುತ್ತದೆ.