ಮಾರುತಿ ಸುಜುಕಿ ಬಲೆನೊ ಮೇ ತಿಂಗಳಲ್ಲಿ ದೇಶದಲ್ಲಿ ಹೆಚ್ಚು ಮಾರಾಟವಾದ ಕಾರು. ಮಾರುತಿ ಸ್ವಿಫ್ಟ್ ಎರಡನೇ ಸ್ಥಾನದಲ್ಲಿದೆ. ವ್ಯಾಗನಾರ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಹ್ಯಾಚ್‌ಬ್ಯಾಕ್‌ಗಳು ಮತ್ತು ಎಸ್‌ಯುವಿಗಳ ಹೊರತಾಗಿ, 7 ಆಸನಗಳ ಕಾರುಗಳು ದೇಶದಲ್ಲಿ ಅತಿ ಹೆಚ್ಚು ಬಿಕರಿಯಾಗುತ್ತಿವೆ. ಮಾರುತಿ ಎರಿಟಿಗಾ ದೀರ್ಘಕಾಲದಿಂದಲೂ ಉತ್ತಮ ಮಾರಾಟವನ್ನು ಕಾಣುತ್ತಲೇ ಇತ್ತು. ಆದರೆ 2023ರ ಮೇ ತಿಂಗಳಲ್ಲಿ ಅಗ್ಗದ 7 ಸೀಟರ್ ಕಾರೊಂದು ಎರಿಟಿಗಾವನ್ನು ಹಿಂದಿಕ್ಕಿದೆ.
ಅತಿ ಹೆಚ್ಚು ಮಾರಾಟವಾದ ಕಾರುಗಳ ಪೈಕಿ ಮೊದಲ ಸ್ಥಾನವನ್ನು ಅಲಂಕರಿಸಿದೆ. ಈ ಕಾರಿನ ಬೆಲೆ 5.5 ಲಕ್ಷಕ್ಕಿಂತಲೂ ಕಡಿಮೆ. ಮಾರುತಿ ಸುಜುಕಿ ಇಕೊ ಮೇ ತಿಂಗಳಲ್ಲಿ ದೇಶದಲ್ಲಿ ಅತಿ ಹೆಚ್ಚು ಮಾರಾಟವಾದ 7 ಆಸನಗಳ ಕಾರು ಎನಿಸಿಕೊಂಡಿದೆ. ಕಳೆದ ತಿಂಗಳು 12,800 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಒಟ್ಟಾರೆ ಕಾರು ಮಾರಾಟದಲ್ಲಿ ಇದು 7ನೇ ಸ್ಥಾನದಲ್ಲಿದೆ. ಎರಡನೇ ಅತಿ ಹೆಚ್ಚು ಮಾರಾಟವಾದ 7 ಆಸನಗಳ ಕಾರು ಮಾರುತಿ ಎರ್ಟಿಗಾ. ಮೇ ತಿಂಗಳಲ್ಲಿ 10,500 ಯುನಿಟ್ ಎರಿಟಿಗಾ ಕಾರುಗಳು ಮಾರಾಟವಾಗಿವೆ.
ನಂಬರ್ ವನ್ ಸ್ಥಾನದಲ್ಲಿರೋ ಮಾರುತಿ ಇಕೋ ಬೆಲೆ 5.27 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. ಇದು 6 ಮತ್ತು 7 ಸೀಟರ್ ಆಯ್ಕೆಗಳು ಈ ಕಾರಿನಲ್ಲಿವೆ. ಮಾರುತಿ ಸುಜುಕಿ Eeco 1.2L K-ಸರಣಿ ಡ್ಯುಯಲ್ ಜೆಟ್, ಡ್ಯುಯಲ್ VVT ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು 80.76 PS ಪವರ್ ಮತ್ತು 104.4 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೊಸ ಪವರ್‌ಟ್ರೇನ್ ಹಿಂದಿನ ಮಾದರಿಗಿಂತ 10 ಪ್ರತಿಶತದಷ್ಟು ಹೆಚ್ಚಿನ ಶಕ್ತಿಯನ್ನು ಉತ್ಪಾದಿಸುತ್ತದೆ.
ಇದರೊಂದಿಗೆ CNG ಆಯ್ಕೆಯೂ ಲಭ್ಯವಿದೆ. CNG ಯೊಂದಿಗೆ, ಎಂಜಿನ್ 71.65 PS ಪವರ್ ಮತ್ತು 95 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 5-ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ.ಟೂರ್ ರೂಪಾಂತರವು ಪೆಟ್ರೋಲ್ ಮತ್ತು CNG ಎರಡರಲ್ಲೂ 20.20 ಕಿಮೀ 27.05 ಕಿಮೀ ಮೈಲೇಜ್ ನೀಡುತ್ತದೆ. ಪ್ಯಾಸೆಂಜರ್ ರೂಪಾಂತರವು ಪೆಟ್ರೋಲ್ ಮತ್ತು CNG ಎರಡರಲ್ಲೂ 19.71 ಕಿಮೀ ಮತ್ತು 26.78 ಕಿಮೀ ಮೈಲೇಜ್ ನೀಡುತ್ತದೆ. ಇದರ ಬೆಲೆ 5.21 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ.
ಮೇ 2023ರಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳು
ಮಾರುತಿ ಸುಜುಕಿ ಬಲೆನೊ – 18,700
ಮಾರುತಿ ಸುಜುಕಿ ಸ್ವಿಫ್ಟ್ – 17,300
ಮಾರುತಿ ಸುಜುಕಿ ವ್ಯಾಗನಾರ್ – 16,300
ಹುಂಡೈ ಕ್ರೆಟಾ – 14,449
ಟಾಟಾ ನೆಕ್ಸಾನ್ – 14,423
ಮಾರುತಿ ಸುಜುಕಿ ಬ್ರೆಝಾ – 13,398
ಮಾರುತಿ ಸುಜುಕಿ ಇಕೋ – 12,800
ಮಾರುತಿ ಸುಜುಕಿ ಡಿಜೈರ್ – 11,300
ಟಾಟಾ ಪಂಚ್ – 11,100
ಮಾರುತಿ ಸುಜುಕಿ ಎರ್ಟಿಗಾ – 10,500