ನಮ್ಮ ಪೋಷಕರು ನಮಗೆ ಬಾಲ್ಯದಲ್ಲಿ ಕಲಿಸುವ ಮೊದಲ ವಿಷಯವೆಂದರೆ ಇತರರ ಬಗ್ಗೆ ಕರುಣೆ ತೋರಿಸುವುದು. ಇನ್ನೊಬ್ಬರ ಕಷ್ಟ ಏನೆಂದು ತಮಗೆ ತಿಳಿದಿರುವುದಿಲ್ಲ. ಸಣ್ಣ-ಪುಟ್ಟದೇನಾದ್ರೂ ಸಹಾಯ ಮಾಡಿದ್ರೆ ಅವರಿಗೆ ಖಂಡಿತಾ ಖುಷಿಯಾಗದೆ ಇರಲಾರದು.
ಇದೇ ರೀತಿಯ ಘಟನೆಯಲ್ಲಿ, ಮಹಿಳೆಯೊಬ್ಬಳು ತನ್ನ ದಿನಸಿ ಸಾಮಾನುಗಳನ್ನು ತನ್ನ ಕಾರಿನಲ್ಲಿ ಲೋಡ್ ಮಾಡುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಸಹಾಯ ಮಾಡಿದ್ದಾನೆ. ಮಹಿಳೆಯು ಸಂತೋಷದಿಂದ ಆನಂದಭಾಷ್ಪ ಸುರಿಸಿದ್ದು, ಆತನಿಗೆ ಬೆಚ್ಚಗಿನ ಅಪ್ಪುಗೆ ನೀಡಿದ್ದಾಳೆ. ಗುಡ್ ನ್ಯೂ ಮೂವ್‌ಮೆಂಟ್ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಒಂದು ಗಂಟೆಯೊಳಗೆ ಈ ವಿಡಿಯೋ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಈ ವಿಡಿಯೋ ಎಲ್ಲರ ಕಣ್ಣಲ್ಲಿ ನೀರು ತರಿಸಿದೆ.
ವಿಡಿಯೊದಲ್ಲಿ, ವ್ಯಕ್ತಿಯೊಬ್ಬ ಮಹಿಳೆಗೆ ದಿನಸಿ ಸಾಮಾನುಗಳನ್ನು ಕಾರಿಗೆ ಲೋಡ್ ಮಾಡಲು ಸಹಾಯ ಮಾಡುವುದನ್ನು ಕಾಣಬಹುದು. ಶಾಪಿಂಗ್ ಮಾಡಿದ ನಂತರ ತನ್ನ ದಿನಸಿ ಸಾಮಾನುಗಳನ್ನು ಕಾರಿಗೆ ಲೋಡ್ ಮಾಡಲು ಆ ವ್ಯಕ್ತಿ ಸಹಾಯ ಮಾಡುತ್ತಿದ್ದ. ಮಹಿಳೆಯು ಇತ್ತೀಚೆಗಷ್ಟೇ ತನ್ನ ಮಗನನ್ನು ಕಳೆದುಕೊಂಡಿದ್ದಾಳೆ. ಆಕೆ ತನ್ನ ಅಳಲು ತೋಡಿಕೊಂಡಾಗ ಆ ವ್ಯಕ್ತಿಯಿಂದ ಅಪ್ಪಿಕೊಳ್ಳದೆ ಇರಲಾಗಲಿಲ್ಲ.
ಈ ವಿಡಿಯೋ ಎಲ್ಲರ ಕಣ್ಣಲ್ಲಿ ನೀರು ತರಿಸಿದೆ. ಅಪರಿಚಿತ ವ್ಯಕ್ತಿಯ ಸಹಾಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾನವೀಯತೆ ಜೀವಂತವಿದೆ ಅನ್ನೋದಕ್ಕೆ ಇದು ಸಾಕ್ಷಿಯಾಗಿದೆ ಅಂತೆಲ್ಲಾ ಪ್ರತಿಕ್ರಿಯಿಸಿದ್ದಾರೆ.