ಲೈಂಗಿಕ ಕ್ರಿಯೆಯ ಬಳಿಕ ಕೆಲವರಿಗೆ ಗುಪ್ತಾಂಗದಲ್ಲಿ ವಾಸನೆ ಬರುತ್ತದೆ. ಇದರಿಂದ ತೀರಾ ಮುಜುಗರವಾಗುತ್ತದೆ. ಲೈಂಗಿಕತೆ ಹೊಂದುವ ವೇಳೆ ಲ್ಯೂಬ್ರಿಕೆಂಟ್ ಸ್ರಾವವಾಗುತ್ತದೆ. ಇದು ಕೂಡ ಈ ವಾಸನೆಗೆ ಕಾರಣವಾಗುತ್ತದೆ. ಯಾವ ಕಾರಣದಿಂದ ಗುಪ್ತಾಂಗದ ವಾಸನೆ ಬರುತ್ತದೆ ಎಂಬುದಕ್ಕೆ ಇಲ್ಲಿದೆ ನೋಡಿ ಒಂದಷ್ಟು ಮಾಹಿತಿ.
ಗುಪ್ತಾಂಗದಲ್ಲಿರುವ ಬ್ಯಾಕ್ಟೀರಿಯಾ ಈ ವಾಸನೆಗೆ ಮುಖ್ಯ ಕಾರಣವೆನ್ನಬಹುದು. ಲೈಂಗಿಕ ಕ್ರಿಯೆ ವೇಳೆ ಬಿಳಿ ಬಣ್ಣದ ಸ್ರಾವ ಬಿಡುಗಡೆಯಾಗುತ್ತದೆ. ಇದರಲ್ಲಿ ಬ್ಯಾಕ್ಟೀರಿಯಾಗಳು ಸೇರಿಕೊಂಡು ಕೆಟ್ಟ ವಾಸನೆ ಬರುತ್ತದೆ.
*ಲೈಂಗಿಕವಾಗಿ ಹರಡುವ ರೋಗಗಳಿಂದಲೂ ಕೂಡ ಗುಪ್ತಾಂಗದ ವಾಸನೆಗೆ ಕಾರಣವಾಗುತ್ತದೆ. ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಟ್ರೈಕೊಮೋನಿಯಾಸಿಸ್ ಈ ರೋಗ ಮಹಿಳೆಯರಲ್ಲಿ ಕಂಡು ಬರುತ್ತದೆ. ಇದು ಲೈಂಗಿಕತೆಯ ನಂತರ ಗುಪ್ತಾಂಗದ ವಾಸನೆಗೆ ಮುಖ್ಯ ಕಾರಣವಾಗುತ್ತದೆ.
* ಗುಪ್ತಾಂಗದ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಆದ್ಯತೆ ನೀಡಿದರೆ ಈ ವಾಸನೆಯನ್ನು ಕಡಿಮೆ ಮಾಡಿಕೊಳ್ಳಬಹುದು.
* ಮೊಸರು, ಹಾಗೂ ನೀರು ಸೇವನೆಯಿಂದ ಈ ವಾಸನೆಯನ್ನು ನಿಯಂತ್ರಿಸಬಹುದು.
*ಅಸುರಕ್ಷಿತ ಲೈಂಗಿಕ ಸಂಬಂಧ ಹೊಂದುವುದರಿಂದ ಕೆಲವೊಮ್ಮೆ ಈ ಸಮಸ್ಯೆ ಕಾಡುತ್ತದೆ. ಹಾಗಾಗಿ ಎಚ್ಚರ ವಹಿಸಿ.