ಎಷ್ಟು ಹಣ ನೀಡಿದ್ರೂ ಆರೋಗ್ಯ ಸಿಗುವುದಿಲ್ಲ. ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬೇಕು. ಪುರುಷ ಇರಲಿ ಮಹಿಳೆ ಎಲ್ಲರೂ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ.
ಅದ್ರಲ್ಲೂ ಮಹಿಳೆಯರ ಅಂಗಗಳು ಸಂವೇದನಾಶೀಲವಾಗಿರುತ್ತವೆ. ಅನೇಕ ಸಮಸ್ಯೆಗಳು ಮಹಿಳೆಯರನ್ನು ಕಾಡುತ್ತವೆ. ಬೆಳಿಗ್ಗೆ ಎದ್ದ ತಕ್ಷಣ ಮಹಿಳೆಯರು ಈ ಕೆಲಸ ಮಾಡಿದ್ರೆ ಕೆಲವೊಂದು ರೋಗಗಳಿಂದ ಮುಕ್ತಿ ಹೊಂದಬಹುದಾಗಿದೆ.
ಬೆಳಿಗ್ಗೆ ಎದ್ದ ತಕ್ಷಣ ಮಹಿಳೆಯರು ತಮ್ಮ ಖಾಸಗಿ ಅಂಗವನ್ನು ನೋಡಿಕೊಳ್ಳಬೇಕು. ಬಹುತೇಕ ಮಹಿಳೆಯರು ಖಾಸಗಿ ಅಂಗವನ್ನು ನೋಡಿಕೊಳ್ಳುವುದಿಲ್ಲ. ಈ ನಿರ್ಲಕ್ಷ್ಯ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸೋಂಕು, ತುರಿಕೆ, ಉರಿಯಂತಹ ಸಮಸ್ಯೆ ಕಾಡಲು ಶುರುವಾಗುತ್ತದೆ. ಪ್ರತಿ ದಿನ ಖಾಸಗಿ ಅಂಗವನ್ನು ನೋಡಿಕೊಳ್ತಿದ್ದರೆ ಅದ್ರಲ್ಲಿ ಏನಾದ್ರೂ ಬದಲಾವಣೆಯಾದ್ರೆ ತಕ್ಷಣ ಗೊತ್ತಾಗುತ್ತದೆ. ಆಗ ವೈದ್ಯರನ್ನು ಭೇಟಿಯಾಗಿ ಆರಂಭದಲ್ಲಿಯೇ ಸಮಸ್ಯೆಯಿಂದ ಹೊರಬರಬಹುದು.
ಬೇಸಿಗೆಯಲ್ಲಿ ಹುಡುಗಿಯರು ಜೀನ್ಸ್ ಧರಿಸುವುದ್ರಿಂದ ಖಾಸಗಿ ಅಂಗದ ಬಳಿ ತುರಿಕೆ ಕಾಣಿಸಿಕೊಳ್ಳುತ್ತದೆ. ಕೆಟ್ಟ ವಾಸನೆ ಬರುವ ಸಾಧ್ಯತೆಯೂ ಹೆಚ್ಚಿರುತ್ತದೆ. ಆರಂಭದಲ್ಲಿಯೇ ತುರಿಕೆಗೆ ಪರಿಹಾರ ಕಂಡುಕೊಂಡ್ರೆ ಸೋಂಕು ಹರಡುವುದನ್ನು ತಪ್ಪಿಸಬಹುದಾಗಿದೆ.