ಮೊದಲು ಅಂಗಾತ ಕಾಲು ಚಾಚಿ ಮಲಗಿ, ಕೈಗಳನ್ನು ದೇಹದ ಬದಿ ಇಡಿ. ಕಾಲು ಬೆರಳುಗಳನ್ನು ಬಿಗಿಮಾಡಿ. ನಿಧಾನವಾಗಿ ಉಸಿರೆಳೆದುಕೊಳ್ಳುತ್ತ ಕಾಲುಗಳು 30 ಡಿಗ್ರಿ ಕೋನಕ್ಕೆ ಎತ್ತಿ. ಆಮೇಲೆ 60 ಡಿಗ್ರಿ ಕೋನಕ್ಕೆ ಎತ್ತಿರಿ. ನಂತರ ಅಂಗೈಗಳು ಬೆನ್ನ ಹಿಂದೆಯೇ ಆಧಾರವಾಗಿರಲಿ. ನಿಮ್ಮ ಗದ್ದ ಎದೆಯನ್ನು ತಾಕಿರಲಿ. ಇದೇ ಸ್ಥಿತಿಯಲ್ಲಿ ಎಷ್ಟು ಸಮಯ ಮಾಡಲು ಸಾಧ್ಯವೋ ಅಷ್ಟು ಹೊತ್ತು ಮಾಡಿ.
ನಿಧಾನವಾಗಿ ಉಸಿರಾಡಿ. ತದನಂತರ ಕಾಲುಗಳನ್ನು ಮಂಡಿಯ ಮೇಲೆ ಮಡಚಿಟ್ಟು ಕೊಳ್ಳಿ. ಈಗ ಕೈಗಳನ್ನು ಸೊಂಟದ ಕಡೆಗೆ ಸರಿಸಿ ದೇಹ ನಿಧಾನವಾಗಿ ಕೆಳಗಿಳಿಯುವಂತೆ ಮಾಡಿ. ನಿತಂಬ ನೆಲ ಮುಟ್ಟಿದಾಗ ಹಿಮ್ಮಡಿಗಳು ಅವನ್ನು ತಾಗಲಿ. ನಂತರ ನಿಧಾನವಾಗಿ ಕಾಲುಗಳನ್ನು ಉದ್ದ ಮಾಡಿ. ಈ ಆಸನವನ್ನು ದಿನಕ್ಕೊಮ್ಮೆ ಮಾಡಿದರೆ ಸಾಕು.