ಜಿಟಿ ಜಿಟಿ ಮಳೆಯಲ್ಲಿ , ಜೊತೆಯಾಗಿ ಪ್ರವಾಸ ಮಾಡುವ ಖುಷಿಯೇ ಬೇರೆ. ಮುಂಗಾರಿನಲ್ಲಿ ನೀವು ಎಲ್ಲಿಗಾದ್ರೂ ಟ್ರಿಪ್ ಹೋಗಬೇಕು ಅಂದ್ಕೊಂಡ್ರೆ ಕಡಲನಗರಿ ಗೋವಾವನ್ನೇ ಆಯ್ಕೆ ಮಾಡಿಕೊಳ್ಳಿ. ಯಾಕಂದ್ರೆ ಮಾನ್ಸೂನ್ ನಲ್ಲಿ ಪ್ರವಾಸ ಹೋಗಲು ಇದು ಬೆಸ್ಟ್ ಪ್ಲೇಸ್.
ಆನ್ ಲೈನ್ ಹೋಟೆಲ್ ಬುಕ್ಕಿಂಗ್ ವೆಬ್ ಸೈಟ್ ಒಂದು ನಡೆಸಿದ ಸಮೀಕ್ಷೆಯಲ್ಲಿ ಗೋವಾ, ಮಾನ್ಸೂನ್ ಋತುವಿನ ಬೆಸ್ಟ್ ಹಾಲಿಡೇ ಸ್ಪಾಟ್ ಎನಿಸಿಕೊಂಡಿದೆ. ಅಂತರಾಷ್ಟ್ರೀಯ ಪಟ್ಟದಲ್ಲಿ ಈ ಸ್ಥಾನ ಬಾಲಿಗೆ ದಕ್ಕಿದೆ. ಜೂನ್ ನಿಂದ ಸೆಪ್ಟೆಂಬರ್ ತಿಂಗಳವರೆಗೆ ಅತ್ಯಧಿಕ ಪ್ರವಾಸಿಗರು ಎಲ್ಲಿಗೆ ತೆರಳಿದ್ದಾರೆ ಅನ್ನೋದನ್ನು ಸಮೀಕ್ಷೆಯಲ್ಲಿ ಪತ್ತೆ ಮಾಡಲಾಗಿದೆ.
ಗೋವಾದ ಬಾಗಾ, ಕಲಂಗುಟೆ, ಅರ್ಪೋರಾದ ಹೋಟೆಲ್ ಗಳಲ್ಲಿ ಮಳೆಗಾಲದಲ್ಲಿ ಪ್ರವಾಸಿಗರ ಸಂಖ್ಯೆ ಅಧಿಕವಾಗಿರುತ್ತದೆ. ಗೋವಾದ ಸಮುದ್ರ ಕಿನಾರೆಯಲ್ಲಿ ರಜೆಯ ಮಜಾ ಕಳೆಯಲು ಜನ ಇಷ್ಟಪಡ್ತಾರೆ. ನಂತರದ ಸ್ಥಾನ ದೆಹಲಿ, ಉದಯ್ಪುರ, ಬೆಂಗಳೂರು ಮತ್ತು ಜೈಪುರಕ್ಕೆ ದೊರೆತಿದೆ.
ಮಾನ್ಸೂನ್ ಋತುವಿನಲ್ಲಿ ಅಂತರಾಷ್ಟ್ರೀಯ ಪ್ರವಾಸಕ್ಕಾಗಿ ಅತಿ ಹೆಚ್ಚು ಜನರು ಬಾಲಿಗೆ ತೆರಳಿದ್ದಾರೆ. ಸಿಂಗಾಪುರ, ಬ್ಯಾಂಕಾಕ್, ಪಟ್ಟಾಯಾ ಮತ್ತು ದುಬೈಗೂ ಮಳೆಗಾಲದಲ್ಲೇ ತೆರಳಲು ಪ್ರವಾಸಿಗರು ಹೆಚ್ಚು ಒಲವು ತೋರಿರೋದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.