ಮಳೆಗಾಲದಲ್ಲಿ ಏನಾದರೂ ತಿನ್ನಬೇಕೆನಿಸಿದರೆ ಇಲ್ಲಿದೆ ನೋಡಿ ಕುರುಂ ಕುರುಂ ಅವಲಕ್ಕಿ. ಇಂಥ ತಿನಿಸು ಬಾಯಿಗೆ ರುಚಿ, ಜೊತೆಗೆ ಮಾಡಲು ಸುಲಭ.
ಬೇಕಾಗುವ ಸಾಮಗ್ರಿಗಳು : ಅಗತ್ಯಕ್ಕೆ ತಕ್ಕಂತೆ ಅವಲಕ್ಕಿ, ಹುರಿದ ಕರಿಬೇವು, ಕಡಲೆಬೀಜ, ಬೆಳ್ಳುಳ್ಳಿ, ಕೊಬ್ಬರಿ ತುಂಡು, ಉಪ್ಪು, ಅರಿಶಿನ ಹಾಗೂ ಖಾರದ ಪುಡಿ.
ತಯಾರಿಸುವುದು ಹೀಗೆ : ಗಟ್ಟಿಯಾಗಿರುವ ಅವಲಕ್ಕಿಯನ್ನು ಮೊದಲಿಗೆ ಎಣ್ಣೆಯಲ್ಲಿ ಕರಿಯಿರಿ. ಅದನ್ನು ಪೇಪರ್ ಮೇಲೆ ಹರಡಿ, ಎಣ್ಣೆ ಅಂಶ ತೆಗೆಯಿರಿ, ಬಾಣಲೆಗೆ ಅವಲಕ್ಕಿ ಹಾಕಿ, ಹುರಿದ ಕರಿಬೇವು, ಹುರಿಗಡಲೆ, ಕಡಲೆ ಬೀಜ, ಬೆಳ್ಳುಳ್ಳಿ, ಕೊಬ್ಬರಿ ತುಂಡು, ಉಪ್ಪು, ಅರಿಶಿನ, ಖಾರದ ಪುಡಿ ಹಾಕಿ ಮಿಶ್ರಣ ಮಾಡಿ. ನಂತರ ಅದನ್ನು ಡಬ್ಬಿಯಲ್ಲಿ ಹಾಕಿ ಇಡಿ. ಬೇಕೆಂದಾಗ ತಿನ್ನಿ, ಅದು ತಿಂಗಳವರೆಗೂ ಕೆಡುವುದಿಲ್ಲ.