ಪ್ರೀತಿಯೇ ಉಸಿರು, ಪ್ರೀತಿಯೇ ಜಗತ್ತು ಅಂತೆಲ್ಲ ಕೈಕೈ ಹಿಡಿದುಕೊಂಡು ಓಡಾಡೋ ಪ್ರೇಮಿಗಳಿಗೆ ಬ್ರೇಕ್ಅಪ್ ಅನ್ನೋದು ಆಘಾತಕಾರಿ ವಿಷಯವೇ ಸರಿ. ಅತ್ಯಮೂಲ್ಯ ಕ್ಷಣ ಮತ್ತು ನಂಬಿಕೆಯ ಮೇಲೆ ಹುಟ್ಟಿಕೊಂಡಿರುವ ಒಂದು ಸಂಬಂಧ ಕಣ್ಣ ಮುಂದೆಯೇ ಚೂರುಚೂರಾಗಿ ಹೋದ್ರೆ ಅಂತಹ ಪ್ರೇಮಿಗಳಿಗೆ ಜೀವನವೇ ಮುಗಿದಂತೆ. ಇಂತಹ ಸ್ಥಿತಿಯಲ್ಲಿ ಕಳೆದು ಹೋದ ಪ್ರೀತಿಯನ್ನ ಪಡೆದುಕೊಳ್ಳೊಕೆ ಅವರೆಲ್ಲ ಮಾಡುವ ಕಸರತ್ತು ಒಂದೆರಡಲ್ಲ.
ಅಪ್ಪಿ ತಪ್ಪಿಯೂ ಮಾಡದಿರಿ ಬ್ಲಾಕ್ : ಕೆಲವೊಮ್ಮೆ ಬ್ರೇಕ್ಅಪ್ ನಂತರ ಸಿಟ್ಟಿನಲ್ಲಿ ನೀವು ಇಷ್ಟಪಡುವವರನ್ನೇ ಬ್ಲಾಕ್ ಮಾಡಿ ಬಿಡ್ತಿರಾ. ಆದರೆ ನೀವು ಒಂದು ವಿಷ್ಯವನ್ನ ಮರೆತು ಬಿಡ್ತಿರಾ. ಅದೇನಂದ್ರೆ ನಿಮ್ಮ ಇದೇ ಒಂದು ವರ್ತನೆಯಿಂದ ನೀವು ಇಷ್ಟಪಡುವವರು ನಿಮ್ಮಿಂದ ಇನ್ನಷ್ಟು ದೂರವಾಗ್ತಾರೆ.
BIG BREAKING: ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ, ಭಾರತ ಬ್ಯಾಟಿಂಗ್
ಇದರಿಂದ ಮುಂದೆಂದಾದರೂ ನೀವು ಒಂದಾಗುವ ಸಾಧ್ಯತೆ ಇದ್ದರೂ ಕೂಡಾ ಈ ಒಂದು ಕಾರಣದಿಂದ ಅವರು ನಿಮ್ಮಿಂದ ಶಾಶ್ವತವಾಗಿ ದೂರವಾಗಿ ಬಿಟ್ಟಿರ್ತಾರೆ.
ವಾಟ್ಸಾಪ್ ನಲ್ಲಿ ಸದಾ ಇಟ್ಟಿರಿ ಲಾಸ್ಟ್ ಸೀನ್ ಓಪನ್ : ಬ್ರೇಕ್ಅಪ್ ಸಮಯದಲ್ಲಿ ನೀವು ಲಾಸ್ಟ್ ಸೀನ್ ಯಾವಾಗಲೂ ಹೈಡ್ ಮಾಡದಿರಿ. ಹೀಗೆ ಮಾಡಿದ್ದೇ ಆದ್ರೆ ಇದು ನೀವು ಮಾಡುವ ಅತಿ ದೊಡ್ಡ ತಪ್ಪಾಗಬಹುದು. ಆದ್ದರಿಂದ ನೀವು ಸದಾ ಲಾಸ್ಟ್ ಸೀನ್ ಸದಾ ಕಾಣುವಂತೆಯೇ ಇಟ್ಟಿರಿ. ಇದರಿಂದ ನಿಮ್ಮವರು ನೀವು ಅವರ ಕಡೆ ಗಮನ ಇಟ್ಟಿರುವುದನ್ನ ಗಮನಿಸಿ, ಅವರು ಮತ್ತೆ ನಿಮಗೆ ಮೆಸ್ಸೇಜ್ ಮಾಡುವ ಸಾಧ್ಯತೆಯೂ ಇರಬಹುದು.
ಮೆಮೋರಿಯಿಂದ ತೆಗೆದು ಹಾಕಿ ಹಳೆಯ ನೆನಪು : ಅನೇಕರು ತಮ್ಮ ಫೋನ್ ನಲ್ಲಿರುವ ಹಳೆ ಫೋಟೋಗಳನ್ನು ಡಿಲಿಟ್ ಮಾಡುವುದಿಲ್ಲ. ಪದೇ ಪದೇ ಆ ಫೋಟೋಗಳನ್ನು ನೋಡುತ್ತಿರುತ್ತಾರೆ. ಹಳೆಯ ನೆನಪುಗಳು ನೋವು ಹೆಚ್ಚಿಸುತ್ತದೆ. ಮನಸ್ಸು ಗಟ್ಟಿ ಮಾಡಿ ನೋವು ನೀಡುವ ಹಳೆ ನೆನಪು ತರಿಸುವ ವಸ್ತುಗಳಿಂದ ದೂರವೇ ಇರಲು ಪ್ರಯತ್ನಿಸಬೇಕು.
ʼಸಾಸಿವೆ ಎಣ್ಣೆʼ ದೀಪವನ್ನು ಮನೆಯಲ್ಲಿ ಹಚ್ಚಬಾರದು ಏಕೆ ಗೊತ್ತಾ……?
ಡಿಜಿಟಲ್ ಮಿಡಿಯಾದಲ್ಲಿ ಮಾಡದಿರಿ ಸ್ಟಾಕ್ : ಬ್ರೇಕ್ಅಪ್ ನಂತರ ಯಾರು ತಮ್ಮ ಎಕ್ಸ್ನ್ನು ಸ್ಪ್ಪ ಮಿಡಿಯಾನಲ್ಲಿ ಸ್ಟಾಕ್ ಮಾಡೋಕೆ ಪ್ರಯತ್ನ ಪಡ್ತಾರೋ ಅಂತಹವರು ತಮ್ಮ ಸಮಯವನ್ನ ವ್ಯರ್ಥ ಮಾಡ್ತಿರ್ತಾರೆ. ಇಂತಹ ಸಮಯದಲ್ಲಿ ಇನ್ಸ್ಟಾಗ್ರಾಮ್, ಫೇಸ್ಬುಕ್ ನಲ್ಲಿ ತಮ್ಮ ಎಕ್ಸ್ನ್ನು ಸ್ಟಾಕ್ ಮಾಡುವ ಬದಲು ತಾವು ಯಶಸ್ವಿಯಾಗುವತ್ತ ಗಮನ ಹರಿಸಿದರೆ ತುಂಬಾ ಒಳ್ಳೆಯದು.