ಬೊಜ್ಜು ಸಾಮಾನ್ಯ ಸಮಸ್ಯೆಯಾಗಿ ಎಲ್ಲರನ್ನು ಕಾಡ್ತಿದೆ. ಜಂಕ್ ಫುಡ್ ಸೇರಿದಂತೆ ಜೀವನ ಶೈಲಿಯಲ್ಲಾಗಿರುವ ಬದಲಾವಣೆ ಇದಕ್ಕೆ ಕಾರಣ. ಬೊಜ್ಜು ಕರಗಿಸಲು ಜನರು ಇನ್ನಿಲ್ಲದ ಪ್ರಯತ್ನ ನಡೆಸ್ತಾರೆ. ಫಲಿತಾಂಶ ಮಾತ್ರ ತಕ್ಷಣ ಸಿಗೋದಿಲ್ಲ. ನಿಮಗೆ ಆಶ್ಚರ್ಯವಾಗಬಹುದು, ಜ್ಯೋತಿಷ್ಯ ಶಾಸ್ತ್ರದಲ್ಲಿ ಕೂಡ ಬೊಜ್ಜು ಕರಗಿಸುವ ವಿಧಾನವನ್ನು ಹೇಳಲಾಗಿದೆ.
ಸಾಮಾನ್ಯವಾಗಿ ಸ್ಥೂಲ ಕಾಯ ಕರ್ಕ, ವೃಶ್ಚಿಕ ಹಾಗೂ ಮೀನ ರಾಶಿಯವರನ್ನು ಹೆಚ್ಚಾಗಿ ಕಾಡುತ್ತದೆಯಂತೆ. ಗುರು, ಶುಕ್ರ, ಚಂದ್ರ, ರಾಹು ಸರಿಯಾದ ಸ್ಥಾನದಲ್ಲಿಲ್ಲದೆ ಹೋದಲ್ಲಿ ಇದು ಬೊಜ್ಜಿಗೆ ಕಾರಣವಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಜಾತಕದ ಮೇಲೆ ಗುರು, ಚಂದ್ರ, ರಾಹುವಿನ ವಕ್ರದೃಷ್ಟಿ ನೆಟ್ಟಿದ್ದರೂ ಸ್ಥೂಲಕಾಯದ ಸಮಸ್ಯೆ ಕಾಡುತ್ತದೆ.
ಅಂಕಿ ಜ್ಯೋತಿಷ್ಯದ ಪ್ರಕಾರ 3, 12, 21, 30, 6, 15, 24, 4, 13 ಮತ್ತು 22 ನೇ ದಿನಾಂಕದಂದು ಹುಟ್ಟಿದವರಲ್ಲಿ ಹೆಚ್ಚಾಗಿ ಈ ಬೊಜ್ಜು ಕಾಡುತ್ತದೆಯಂತೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಬೊಜ್ಜು ಕರಗಿಸುವ ವಿಧಾನವನ್ನೂ ಹೇಳಲಾಗಿದೆ. ನೀಲಿ ಬಣ್ಣದ ಅಪಟೈಟ್ ಕ್ರಿಸ್ಟಲ್ ಇದಕ್ಕೆ ಸರಳ ಉಪಾಯ. ಇದನ್ನು ಧರಿಸುವುದ್ರಿಂದ ಜಂಕ್ ಫುಡ್, ಸಿಹಿ ತಿನ್ನಲು ಮನಸ್ಸು ಬಯಸುವುದಿಲ್ಲ.
ಕೆಂಪು ಬಣ್ಣದ ಬಟ್ಟೆಯಲ್ಲಿ ಸೋಂಪು ಹಾಗೂ ಸಕ್ಕರೆಯನ್ನು ಸೇರಿಸಿ ಮಲಗುವ ವೇಳೆ ದಿಂಬಿನ ಕೆಳಗಿಟ್ಟು ಮಲಗಬೇಕು. ಕೆಲವೇ ದಿನಗಳಲ್ಲಿ ಬೊಜ್ಜು ಮಾಯವಾಗುತ್ತದೆ. ಮಲಗುವಾಗ ಕೆಂಪು ಬಣ್ಣದ ಬಟ್ಟೆ ಧರಿಸಬೇಕು. ಹಣೆಗೆ ಕುಂಕುಮದ ತಿಲಕವಿಟ್ಟು ಮಲಗಬೇಕು.