ಮಕ್ಕಳ ಪೌಡರ್ ಸುವಾಸನೆಯುಕ್ತವಾಗಿರುತ್ತದೆ. ಅದು ಮಕ್ಕಳನ್ನು ಸಂತೋಷವಾಗಿಡುವ ಜೊತೆಗೆ ಆರೋಗ್ಯವನ್ನು ಕಾಪಾಡುತ್ತದೆ. ವಯಸ್ಕರು ಕೂಡ ಇದನ್ನು ಬಳಸಬಹುದು.
ಇದು ಶುಷ್ಕ ಶಾಂಪೂ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ಬಟ್ಟೆ ಮೇಲಿರುವ ಕಲೆಯನ್ನೂ ಇದು ತೆಗೆಯುತ್ತದೆ. ಬೇಬಿ ಪೌಡರ್ ಮಕ್ಕಳಿಗೆ ಮಾತ್ರ ಸೀಮಿತವಲ್ಲ. ಅದ್ರಿಂದ ಅನೇಕ ಸಮಸ್ಯೆಗಳನ್ನು ದೂರ ಮಾಡಬಹುದು.
ಸಮುದ್ರ ತೀರದಲ್ಲಿ ಆಟ ಆಡಿಬಂದ ನಂತ್ರ ಕೈ, ಕಾಲಿಗೆ ಅಂಟಿಕೊಂಡ ಮರಳನ್ನು ತೆಗೆಯುವುದು ಸುಲಭದ ಕೆಲಸವಲ್ಲ. ಮುಂದಿನ ಬಾರಿ ಬೇಬಿ ಪೌಡರ್ ಜೊತೆಗೆ ತೆಗೆದುಕೊಂಡು ಹೋಗಿ. ಇದನ್ನು ಕೈ ಕಾಲಿಗೆ ಹಾಕಿಕೊಂಡು ಮರಳನ್ನು ಸುಲಭವಾಗಿ ಸ್ವಚ್ಛಗೊಳಿಸಿಕೊಳ್ಳಬಹುದು.
ಕೆಲವರ ಪಾದ ಸದಾ ಒದ್ದೆಯಾಗಿರುತ್ತದೆ. ಪಾದದಿಂದ ಬರುವ ಅತಿಯಾದ ಬೆವರು ಕಿರಿಕಿರಿಯುಂಟು ಮಾಡುತ್ತದೆ. ಅಂತವರು ಬೂಟ್ ಅಥವಾ ಸಾಕ್ಸ್ ಗೆ ಬೇಬಿ ಪೌಡರ್ ಹಾಕಿ ನಂತ್ರ ಬೂಟ್ ಧರಿಸಿ. ಇದ್ರಿಂದ ಬೆವರು ಕಡಿಮೆಯಾಗಿ ವಾಸನೆ ದೂರವಾಗುತ್ತದೆ.
ಕೂದಲಿಗೆ ಶಾಂಪೂ ಹಾಕಿ ಸ್ವಚ್ಛಗೊಳಿಸುವಷ್ಟು ಸಮಯವಿಲ್ಲವೆಂದಾದ್ರೆ ಬೇಬಿ ಪೌಡರ್ ಬಳಸಿ. ಕೂದಲಿಗೆ ಬೇಬಿ ಪೌಡರ್ ಹಾಕಿ ಸ್ವಲ್ಪ ಮಸಾಜ್ ಮಾಡಿದ್ರೆ ಸಾಕು, ಶಾಂಪೂ ಹಾಕಿ ಕೂದಲು ಸ್ವಚ್ಛಗೊಳಿಸಿದಷ್ಟೇ ಕೂದಲು ಹೊಳಪು ಪಡೆಯುತ್ತದೆ.
ಹೊಸ ಬಟ್ಟೆಗೆ ಎಣ್ಣೆ ಬಿದ್ದು ಕಲೆಯಾದ್ರೆ ಯಾರಿಗೆ ಬೇಸರವಾಗಲ್ಲ. ಇನ್ಮುಂದೆ ಕಲೆಯಾದ್ರೆ ಚಿಂತೆ ಬೇಡ. ಎಣ್ಣೆ ಬಿದ್ದಿರುವ ಜಾಗಕ್ಕೆ ಪೌಡರ್ ಹಾಕಿ ಸ್ವಲ್ಪ ಸಮಯ ಹಾಗೆ ಬಿಡಿ. ನಂತ್ರ ಸ್ವಚ್ಛಗೊಳಿಸಿ.
ಹಾಸಿಗೆ ವಾಸನೆ ಬರ್ತಿದ್ದರೆ ಬೇಬಿ ಪೌಡರ್ ಬಳಸಿ. ಹಾಸಿಗೆ ಹಾಗೂ ರಗ್ಗಿಗೆ ಪೌಡರ್ ಸಿಂಪಡಿಸಿ. ಸುಖ ನಿದ್ರೆ ಬರುವುದರಲ್ಲಿ ಎರಡು ಮಾತಿಲ್ಲ.
ಗ್ಲೌಸ್ ತೆಗೆಯೋದು ಹಾಗೂ ಹಾಕಿಕೊಳ್ಳೋದು ಕಿರಿಕಿರಿ ಕೆಲಸ. ಗ್ಲೌಸ್ ಹಾಕಿಕೊಳ್ಳುವ ಮೊದಲು ಕೈಗೆ ಬೇಬಿ ಪೌಡರ್ ಸವರಿಕೊಂಡ್ರೆ ಕಿರಿಕಿರಿ ತಪ್ಪುತ್ತೆ.