ದಳಪತಿ ವಿಜಯ್ ಮತ್ತು ಪೂಜಾ ಹೆಗ್ಡೆ ಅಭಿನಯದ ಬೀಸ್ಟ್ ಸಿನಿಮಾ ʼಕೆಜಿಎಫ್-2ʼ ಎದುರು ಮಕಾಡೆ ಮಲಗಿದ್ರೂ, ಚಿತ್ರದ ಹಾಡು ಮಾತ್ರ ಜನಪ್ರಿಯವಾಗಿದೆ. ಅರೇಬಿಕ್ ಕುತ್ತು ಹಾಡು ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಿದ್ದು, ಹಲವಾರು ಮಂದಿ ಈ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ. ಇದೀಗ, ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಕೂಡ ಈ ಟ್ರೆಂಡ್‌ಗೆ ಸೇರ್ಪಡೆಗೊಂಡಿದ್ದಾರೆ.
ಹೌದು, ಅರೇಬಿಕ್ ಕುತ್ತು ಹಾಡಿಗೆ ಪಿ.ವಿ.ಸಿಂಧೂ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ವಿಡಿಯೋದಲ್ಲಿ, ಸಿಂಧು ಬಿಳಿ ಟಿ-ಶರ್ಟ್ ಮತ್ತು ನೀಲಿ ಬಣ್ಣದ ಜೀನ್ಸ್ ಧರಿಸಿ ಹಾಡಿಗೆ ಬೊಂಬಾಟ್ ಆಗಿ ಸ್ಟೆಪ್ಸ್ ಹಾಕಿದ್ದಾರೆ. ಹಾಡಿಗೆ ಮುಖದಲ್ಲಿ ನಗುವನ್ನು ತುಂಬಿ ನೃತ್ಯ ಮಾಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಲಕ್ಷಕ್ಕೂ ಅಧಿಕ ಮಂದಿ ಸಿಂಧು ಅವರ ಡಾನ್ಸ್ ಅನ್ನು ಮೆಚ್ಚಿದ್ದಾರೆ. ಕಾಮೆಂಟ್‌ಗಳ ವಿಭಾಗದಲ್ಲಿ ಪ್ರಶಂಸೆಯ ಸುರಿಮಳೆಗೈದಿದ್ದಾರೆ.
ಪಿ.ವಿ. ಸಿಂಧು ಇನ್‌ಸ್ಟಾಗ್ರಾಮ್‌ನ ವೈರಲ್ ಡ್ಯಾನ್ಸ್ ಟ್ರೆಂಡ್‌ಗೆ ಸೇರುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ಸಿಂಧು, ಲವ್ ನ್ವಂತಿತಿ, ಕಚ್ಚಾ ಬಾದಮ್ ಮತ್ತು ತಮಿಳು ಹಾಡು ಮಾಯಾಕಿರ್ರಿಯೆಗೆ ನೃತ್ಯ ಮಾಡಿದ್ದು, ತಮ್ಮ ಇನ್ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಂಡಿದ್ದರು.
ಅರೇಬಿಕ್ ಕುತ್ತು ತಮಿಳಿನ ಬೀಸ್ಟ್ ಸಿನಿಮಾದ ಜನಪ್ರಿಯ ಹಾಡಾಗಿದೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನವಿರುವ ಚಿತ್ರದಲ್ಲಿ ವಿಜಯ್ ಮತ್ತು ಪೂಜಾ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.