ಬೀಚ್ ಗೆ ಪ್ರವಾಸ ಹೋಗುವುದೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಭೋರ್ಗರೆಯುವ ಅಲೆಗಳ ಮಡಿಲಲ್ಲಿ ಮಲಗಿ ನೀಲ ಜಲರಾಶಿಯನ್ನು ಕಣ್ತುಂಬಿಕೊಳ್ಳುವುದು ಎಲ್ಲರಿಗೂ ಪ್ರಿಯವಾದುದೇ. ಮಕ್ಕಳಂತೂ ಬೀಚ್ ಎಂಬ ಪದ ಕಿವಿಗೆ ಬಿದ್ದರೆ ಸಾಕು, ಕುಣಿದು ಕುಪ್ಪಳಿಸುತ್ತಾರೆ.
ಬೀಚ್ ಗೆ ಹೋಗುವಾಗ ಧರಿಸುವ ಬಟ್ಟೆಯ ಜೊತೆ ಸನ್ ಗ್ಲಾಸ್, ಸನ್ಸ್ಕ್ರೀನ್ ಲೋಷನ್ ಕೂಡಾ ನೀವು ಬಳಸುತ್ತಿದ್ದೀರಾ? ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ ಬೀಚ್ ಪ್ರವಾಸದ ವೇಳೆ ನೀವು ಸನ್ ಸ್ಕ್ರೀನ್ ಲೋಷನ್ ಬಳಸಲೇಬಾರದು. ಸೌಂದರ್ಯ ತಜ್ಞರೂ ಇದನ್ನು ದೃಢಪಡಿಸಿದ್ದಾರೆ.
ಕಾರಣವಿಷ್ಟೇ ಹೆಚ್ಚಿನ ಸನ್ ಸ್ಕ್ರೀನ್ ಉತ್ಪನ್ನಗಳು ಸಮುದ್ರದ ಹವಳದ ಬಂಡೆಗಳು ಹಾಗೂ ಇತರ ಸಮುದ್ರ ಜೀವಿಗಳಿಗೂ ಅಪಾಯ ತಂದೊಡ್ಡುತ್ತದೆ. ಇದನ್ನು ಹಚ್ಚುವುದನ್ನು ಕಡ್ಡಾಯವಾಗಿ ನಿಷೇಧಿಸದಿದ್ದರೂ ಸಮುದ್ರಕ್ಕೆ ಇಳಿಯುವ ಮುನ್ನ ಬಾಟಲಿಯ ಮೇಲಿರುವ ರಾಸಾಯನಿಕಗಳ ವಿವರಗಳನ್ನು ಪರಿಶೀಲಿಸಬೇಕು. ಹೀಗಾಗಿ ಬೀಚ್ ನಲ್ಲಿ ಸಾಹಸ ಕ್ರೀಡೆ ಆಡಲು ಹೋಗುವ ಮುನ್ನ ಸನ್ ಸ್ಕ್ರೀನ್ ಲೋಷನ್ ಹಚ್ಚಿಕೊಳ್ಳದಿರಿ ಅಥವಾ ರಾಸಾಯನಿಕಗಳಿಲ್ಲದ ಮೇಕಪ್ ಬ್ರಾಂಡ್ ಗಳ ವಿವರ ತಿಳಿದು ಬಳಸಿ.