ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ, ಆರೋಗ್ಯಕ್ಕೂ ಉತ್ತಮವಾದ ಹಣ್ಣು ಬಾಳೆ. ಬಾಳೆಹಣ್ಣು ರುಚಿಯೊಂದೇ ಅಲ್ಲ, ಕಡಿಮೆ ದರದಲ್ಲಿ, ಎಲ್ಲ ಕಾಲದಲ್ಲೂ ಸಿಗುವ ಹಣ್ಣು. ಈ ಹಣ್ಣಿನ ಕೆಲವು ಪ್ರಯೋಜನಗಳು ಇಲ್ಲಿವೆ.
ಹೃದಯಕ್ಕೆ ಒಳ್ಳೆಯದು: ಪೊಟ್ಯಾಸಿಯಮ್ ನಿಂದ ಕೂಡಿರುವ ಈ ಹಣ್ಣು ಹೃದಯಕ್ಕೆ ತುಂಬಾ ಒಳ್ಳೆಯದು. ಹೆಚ್ಚಿನ ಪೊಟ್ಯಾಸಿಯಮ್ ಮತ್ತು ಕಡಿಮೆ ಸೋಡಿಯಂ ಇರುವುದರಿಂದ ರಕ್ತದೊತ್ತಡ ನಿಯಂತ್ರಣ ಮಾಡುತ್ತದೆ.
ಖಿನ್ನತೆ ದೂರ: ಹೌದು, ಇದರಲ್ಲಿ ಖಿನ್ನತೆ ಹೋಗಲಾಡಿಸುವ ಗುಣವಿದೆ. ವಿಟಮಿನ್ ಬಿ ಇದ್ದು, ಇದು ಉತ್ತಮ ನಿದ್ರೆಗೆ ಸಹಕಾರಿ. ಇದರಲ್ಲಿರುವ ಮೆಗ್ನೀಷಿಯಂ, ಸ್ನಾಯುಗಳನ್ನು ಸಡಿಲಗೊಳಿಸಿ, ವಿಶ್ರಾಂತಿ ನೀಡುತ್ತದೆ.
ಕಿಡ್ನಿ ಕ್ಯಾನ್ಸರ್ ನಿಂದ ರಕ್ಷಣೆ: ಬಾಳೆಹಣ್ಣಿನಲ್ಲಿ ಕ್ಯಾನ್ಸರ್ ನಿಂದ ಕಿಡ್ನಿಯನ್ನು ರಕ್ಷಿಸುವ ಗುಣ ಇದೆ. ವಾರದಲ್ಲಿ ನಾಲ್ಕರಿಂದ ಆರು ಬಾಳೆಹಣ್ಣನ್ನು ಸೇವಿಸುವುದರಿಂದ ಮೂತ್ರಪಿಂಡದ ಕ್ಯಾನ್ಸರ್ ತಪ್ಪಿಸಬಹುದು.
ಜೀರ್ಣಕ್ರಿಯೆ ಮತ್ತು ತೂಕ ಇಳಿತ: ಬಾಳೆಹಣ್ಣಿನಲ್ಲಿ ನಾರಿನ ಅಂಶ ಇರುವುದರಿಂದ ಅದು ಜೀರ್ಣಕ್ರಿಯೆಗೆ ಸಹಕಾರಿ. ಅಲ್ಲದೇ ತೂಕವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಜೀವಸತ್ವ ಬಿ 6, ಮಧುಮೇಹ ಬರದಂತೆ ತಡೆಯುತ್ತದೆ.
ಕಣ್ಣಿಗೆ ಒಳ್ಳೆಯದು: ಕ್ಯಾರೆಟ್ ಒಂದೇ ಅಲ್ಲ ಬಾಳೆಹಣ್ಣು ಕೂಡ ಕಣ್ಣಿಗೆ ಒಳ್ಳೆಯದು. ಇದರಲ್ಲಿರುವ ಜೀವಸತ್ವ ಎ, ಕಣ್ಣನ್ನು ರಕ್ಷಿಸುತ್ತದೆ.