ಬಾಳೆಹಣ್ಣಿನಂತೆ ಬಾಳೆಕಾಯಿಯಲ್ಲೂ ಹಲವು ಬಗೆಯ ಆರೋಗ್ಯಕರ ಅಂಶಗಳಿವೆ.
ಬಾಳೆಕಾಯಿಯನ್ನು ಬೇಯಿಸಿ ಪಲ್ಯ, ಚಿಪ್ಸ್, ಬಜ್ಜಿ, ಸಾಂಬಾರ್ ತಯಾರಿಸುತ್ತಾರೆ. ಮಧುಮೇಹ ನಿಯಂತ್ರಣಕ್ಕೆ ಬಾಳೆಕಾಯಿ ಸಹಕಾರಿ ಎಂಬುದನ್ನು ಸಂಶೋಧನೆಗಳೂ ದೃಢಪಡಿಸಿವೆ.
ಜೀರ್ಣಕ್ರಿಯೆಗೂ ಇದು ಸಹಕಾರಿ. ತೂಕ ಇಳಿಸಲು ನೆರವಾಗುತ್ತದೆ. ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ರಕ್ತ ಶುದ್ಧೀಕರಣ ಕ್ರಿಯೆಯಲ್ಲಿ ಸಹಕರಿಸುತ್ತದೆ. ಬಾಳೆಕಾಯಿಯಲ್ಲಿ ಪೊಟ್ಯಾಶಿಯಂ ಅಧಿಕವಾಗಿದ್ದು ನರಗಳ ಕಾರ್ಯಕ್ಷಮತೆಯನ್ನು ವೃದ್ಧಿಸುತ್ತದೆ. ಎರಡನೇ ಹಂತದ ಮಧುಮೇಹ ನಿಯಂತ್ರಿಸಲು ಹಸಿರು ಬಾಳೆಕಾಯಿ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ. ಇದರಲ್ಲಿ ಕಡಿಮೆ ಪ್ರಮಾಣದಲ್ಲಿ ಸಕ್ಕರೆ ಅಂಶವಿರುತ್ತದೆ.
ಉಚ್ಚಾಟನೆ ಮಾಡಿರುವುದಾಗಿ ಹೇಳಿದ ಮೇಲೆ ನನ್ನ ಮತದಾನದ ಕುರಿತು ಕೇಳಲು ಅವರ್ಯಾರು…..? ಜೆಡಿಎಸ್ ನಾಯಕರಿಗೆ ಶಾಸಕ ಶ್ರೀನಿವಾಸ್ ಗೌಡ ಪ್ರಶ್ನೆ
ಹಸಿರು ಬಾಳೆಕಾಯಿಯಲ್ಲಿ ವಿಟಮಿನ್ ಬಿ 6 ಅಂಶಗಳು ಹೇರಳವಾಗಿ ಸಿಗುತ್ತದೆ ವಿಟಮಿನ್ ಬಿ 6, ಹಿಮೋಗ್ಲೋಬಿನ್ ಉತ್ಪಾದನೆ ಮಾಡುತ್ತದೆ. ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಇದು ನಿಯಂತ್ರಿಸುತ್ತದೆ.