ಮನೆಯ ಸಭಾಂಗಣ, ಕೋಣೆ, ಅಡುಗೆ ಮನೆ, ಶೌಚಾಲಯ ಎಲ್ಲವೂ ನಮ್ಮ ಹಣಕಾಸಿನ ಮೇಲೆ ಪರಿಣಾಮ ಬೀರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಪ್ರತಿಯೊಂದು ಕೊಠಡಿ ಹಾಗೂ ಮನೆಯಲ್ಲಿರುವ ಪ್ರತಿಯೊಂದು ವಸ್ತು ಮನೆಯ ಸುಖ-ಶಾಂತಿ, ಆರ್ಥಿಕ ಪರಿಸ್ಥಿತಿ ಮೇಲೆ ಪ್ರಭಾವ ಬೀರುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ನೀಲಿ ಬಣ್ಣದ ಬಕೆಟ್ ಇಡಬೇಕು. ಇದು ಬಡತನ ಮನೆ ಪ್ರವೇಶ ಮಾಡದಂತೆ ತಡೆಯುತ್ತದೆ. ಬಾತ್ ರೂಮಿನಲ್ಲಿ ಬಕೆಟ್ ಇಟ್ಟಲ್ಲಿ ನಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುವುದಿಲ್ಲ.
ಮನೆಯ ನಳದಿಂದ ನೀರು ತೊಟ್ಟಿಕ್ಕುತ್ತಿದ್ದರೆ ಅಥವಾ ವಿನಾ ಕಾರಣ ನೀರು ಹಾಳಾಗುತ್ತಿದ್ದರೆ ಇದನ್ನು ವಾಸ್ತು ಶಾಸ್ತ್ರದಲ್ಲಿ ಗಂಭೀರ ದೋಷವೆಂದು ಪರಿಗಣಿಸಲಾಗಿದೆ. ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿ ಪ್ರವೇಶಕ್ಕೆ ದಾರಿ ಮಾಡಿಕೊಡುತ್ತದೆ. ಮನೆಯಲ್ಲಿ ಆರ್ಥಿಕ ಸಮಸ್ಯೆ ಎದುರಾಗುತ್ತದೆ.
ನೀರಿನ ಟ್ಯಾಂಕ್ ಕೊಳಕಾಗಿದ್ದು, ಸರಿಯಾಗಿ ನೀರು ಬರ್ತಿಲ್ಲವೆಂದಾದ್ರೆ ಶೀಘ್ರ ಟ್ಯಾಂಕ್ ಸ್ವಚ್ಛಗೊಳಿಸಿ. ಇದು ಕೂಡ ವಾಸ್ತು ಶಾಸ್ತ್ರದ ಪ್ರಕಾರ ಅಶುಭ.
ಬಾತ್ ರೂಂ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ಕೊಳಕು ಬಾತ್ ರೂಂ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ. ಹಾಗೆ ಬಾತ್ ರೂಮಿನಲ್ಲಿರುವ ನೀಲಿ ಬಕೆಟ್ ಕೂಡ ಸ್ವಚ್ಛವಾಗಿರಬೇಕು. ರಾತ್ರಿ ಬಾತ್ ರೂಮಿನಲ್ಲಿರುವ ಬಕೆಟ್ ನಲ್ಲಿ ನೀರು ತುಂಬಿಡಿ. ಬೆಳಿಗ್ಗೆ ಬಾತ್ ರೂಂ ಸ್ವಚ್ಛತೆಗೆ ಆ ನೀರನ್ನು ಬಳಸಿ. ಈ ನೀರನ್ನು ಎಂದೂ ಸ್ನಾನಕ್ಕೆ ಬಳಸಬೇಡಿ.