ಸಂಭೋಗದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಲು ದಂಪತಿ ಬಯಸ್ತಾರೆ. ಹೊಸ ಹೊಸ ಜಾಗಗಳಲ್ಲಿ ಶಾರೀರಿಕ ಸಂಬಂಧ ಬೆಳೆಸಿದ್ರೆ ಹೊಸ ಅನುಭವ ಸಿಗುತ್ತದೆ. ಬೆಡ್ ಸೆಕ್ಸ್ ಬೇಸರವೆನ್ನಿಸಿದವರಿಗೆ ಬದಲಾವಣೆ ಸಿಗುತ್ತದೆ. ಮನಸ್ಸು ಉತ್ಸಾಹಗೊಳ್ಳುತ್ತದೆ.
ಹಾಗಾಗಿ ಬೇರೆ ಬೇರೆ ಜಾಗಗಳಲ್ಲಿ ಶಾರೀರಿಕ ಸಂಬಂಧ ಬೆಳೆಸಬೇಕೆಂದು ತಜ್ಞರು ಸಲಹೆ ನೀಡ್ತಾರೆ. ಅನೇಕರು ಬಾತ್ ಟಬ್ ಸೆಕ್ಸ್ ಇಷ್ಟಪಡ್ತಾರೆ. ಆದ್ರೆ ಬಾತ್ ಟಬ್ ಸೆಕ್ಸ್ ಎಷ್ಟು ಸುರಕ್ಷಿತ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕಾಗುತ್ತದೆ.
ಬಾತ್ ಟಬ್ ಸೆಕ್ಸ್ ನಲ್ಲಿ ಯುಟಿಐ ಅಪಾಯ ಹೆಚ್ಚಿರುತ್ತದೆ. ಮೂತ್ರದಲ್ಲಿರುವ ಬ್ಯಾಕ್ಟೀರಿಯಾಗಳು ಬಾತ್ ಟಬ್ ನಲ್ಲಿ ಜಮೆಯಾಗಿರುತ್ತವೆ. ಸೆಕ್ಸ್ ವೇಳೆ ಅವು ನಮ್ಮ ದೇಹ ಪ್ರವೇಶ ಮಾಡುವುದ್ರಿಂದ ಮೂತ್ರದ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.
ನೀರು ತೇವವಾಗಿರುತ್ತದೆ ನಿಜ. ಆದ್ರೆ ಅದು ಲೂಬ್ರಿಕಂಟ್ ಅಲ್ಲ. ನಿಮ್ಮ ದೇಹದಿಂದ ಬಿಡುಗಡೆಯಾಗುವ ಲೂಬ್ರಿಕಂಟನ್ನು ಕೂಡ ಅದು ಎಳೆದುಕೊಂಡು ಶುಷ್ಕಗೊಳಿಸುತ್ತದೆ. ಯೋನಿ ಶುಷ್ಕವಾದ್ರೆ ಸೆಕ್ಸ್ ಕಷ್ಟವಾಗುತ್ತದೆ. ನೋವಾಗುವ ಸಾಧ್ಯತೆ ಹೆಚ್ಚಿರುತ್ತದೆ.
ನೀರಿನಲ್ಲಿರುವ ಗುಣ ಹಾಗೂ ಬಿಸಿ ನೀರು ಅಥವಾ ತಣ್ಣನೆಯ ನೀರು ಕಾಂಡೋಮ್ ನಲ್ಲಿ ರಂಧ್ರ ಉಂಟುಮಾಡುವ ಸಾಧ್ಯತೆಯಿರುತ್ತದೆ. ಕಾಂಡೋಮ್ ಇಲ್ಲದೆ ಸಂಭೋಗ ಬೆಳೆಸಬೇಕಾಗುತ್ತದೆ. ಇದು ಸುರಕ್ಷಿತ ಸೆಕ್ಸ್ ಅಲ್ಲ. ಗರ್ಭಧಾರಣೆ ಸಾಧ್ಯತೆ ಈ ವೇಳೆ ಹೆಚ್ಚಿರುತ್ತದೆ.