ಸಂಗೊಳ್ಳಿ ರಾಯಣ್ಣನವರ ಮೂರ್ತಿಗೆ ಅವಮಾನ ಮಾಡಿ, ಕನ್ನಡ ಧ್ವಜವನ್ನ ಸುಟ್ಟು ಹಾಕಿದ ಎಂ.ಇ.ಎಸ್ ಪುಂಡರ ನಿಷೇಧದ ದಿನೇ ದಿನೇ ಜೋರಾಗ್ತಿದೆ. ಡಿಸೆಂಬರ್ 30ರ ಒಳಗೆ ಎಂ.ಇ.ಎಸ್ ಬ್ಯಾನ್ ಮಾಡಿಲ್ಲ ಅಂದ್ರೆ ಕರ್ನಾಟಕ ಬಂದ್ ಮಾಡುವುದಾಗಿ ಹಲವಾರು ಕನ್ನಡ ಪರ ಸಂಘಟನೆಗಳು ಘೋಷಣೆ ಮಾಡಿವೆ.
ಈ ಹೋರಾಟಕ್ಕೆಸಾರ್ವಜನಿಕರ ಬೆಂಬಲ ಕೇಳಿರುವ ವಾಟಾಳ್ ನಾಗರಾಜ್ ದಿನಕ್ಕೊಂದು ರೀತಿ ಪ್ರತಿಭಟನೆ ಮಾಡುತ್ತಿದ್ದಾರೆ. ಮೊನ್ನೆ ಮಲೇಶ್ವರಂ ಸರ್ಕಲ್ ನಿಂದ ಗೊರಗುಂಟೆ ಪಾಳ್ಯದವರೆಗೆ ತೆರೆದ ಜೀಪಿನಲ್ಲಿ ರೌಂಡ್ಸ್ ಹಾಕಿ ಸಾರ್ವಜನಿಕರಿಗೆ, ಅಂಗಡಿ ಮಾಲೀಕರಿಗೆ ಕರ್ನಾಟಕ ಬಂದ್ ಗೆ ಬೆಂಬಲ ನೀಡಿ ಎಂದು ಮನವಿ ಮಾಡಿಕೊಂಡ್ರು. ಅದರಂತೆ ನಿನ್ನೆ ಸಹ ಬಸವನಗುಡಿ, ಗಾಂಧಿ ಬಜಾರ್ ವೃತ್ತದಲ್ಲಿ ವಾಟಳ್ ನಾಗರಾಜ್ ವಿಭಿನ್ನ ಪ್ರೊಟೆಸ್ಟ್ ಮಾಡಿದ್ರು. ರಸ್ತೆ ಮಧ್ಯ ಕುರ್ಚಿಗಳ ಸಮ್ಮೇಳನ ಮಾಡಿ ಹೋರಾಟ ನಡೆಸಿದರು.ಪ್ರತಿಭಟನೆಯಲ್ಲಿ ಸಾರಾ ಗೋವಿಂದ್ ಹಾಗೂ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಭಾಗಿಯಾಗಿದ್ದರು.
ರೋಪ್ ಮೇಲೇರಿ 72 ವರ್ಷದ ಮಹಿಳೆಯ ಸಾಹಸ: ವಿಡಿಯೋ ವೈರಲ್
ಈ ಬಗ್ಗೆ ಮಾತನಾಡಿರುವ ವಾಟಾಳ್ ನಾಗರಾಜ್, ಖಾಲಿ ಕುರ್ಚಿಗಳ ಸಮ್ಮೆಳನ ಉದ್ದೇಶ ಏನು ಅಂದ್ರೆ, ಮನೆಯಲ್ಲಿ ಯಾರು ಸಹ ಕೂರದೆ ಬಂದ್ ಗೆ ಭಾಗವಹಿಸಬೇಕು.
ಎಂಇಎಸ್ ಪುಡಂರನ್ನ ರಾಜ್ಯದಿಂದ ಹೊರಹಾಕಲು ಕನ್ನಡಿಗರು ಒಂದಾಗಬೇಕು. ಕನ್ನಡ ಬಾವುಟವನ್ನ ಸುಟ್ಟಿದ್ದಾರೆ. ಸಂಗೊಳ್ಳಿ ರಾಯಣ್ಣನ ಪ್ರತಿಮೆಗಳನ್ನ ಧ್ವಂಸ ಮಾಡಿದ್ದಾರೆ. ಇಂತಹ ಪುಂಡರನ್ನ ಏನು ಮಾಡಬೇಕು. ಯಾರು ಏನೇ ಹೇಳಿದ್ರು ಡಿಸೆಂಬರ್ 31 ರಂದು ಬಂದ್ ಆಗುತ್ತೆ. ಬಹಳ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಯುತ್ತೆ. ಬೆಳಗ್ಗೆ 11 ಗಂಟೆಯಿಂದ ಟೌನ್ ಹಾಲ್ ನಿಂದ ಮೆಜೆಸ್ಟಿಕ್ ವರೆಗೂ ಮೆರವಣಿಗೆ ನಡೆಸುತ್ತೇವೆ ಎಂದ್ರು. ಬೆಳಗಾವಿ ಒಂದೇ ಅಲ್ಲ ಇಡೀ ಕರ್ನಾಟಕವೇ ಈ ಬಂದ್ ಗೆ ಬೆಂಬಲ ನೀಡಬೇಕು ಮನವಿ ಮಾಡಿಕೊಂಡ್ರು.