ಡೆಹ್ರಾಡೂನ್: ಆದಿಶಂಕರಾಚಾರ್ಯರಿಂದಲೇ ನಿರ್ಮಾಣವಾಗಿದೆ ಎಂದು ಬಣ್ಣಿಸಲ್ಪಟ್ಟಿರುವ ಉತ್ತರಾಖಂಡದಲ್ಲಿರುವ ವಿಶ್ವಪ್ರಸಿದ್ಧ ಕೇದಾರನಾಥ ದೇಗುಲ ಇನ್ಮುಂದೆ ಬಂಗಾರದ ಫಲಕಗಳಿಂದ ಕಂಗೊಳಿಸಲಿದೆ. ಇಂದಿಗೆ ಗರ್ಭಗುಡಿಯಲ್ಲಿ ಬಂಗಾರದ ಫಲಕಗಳಿಂದ ಅಲಂಕರಿಸುವ ಕೆಲಸ ಮುಕ್ತಾಯವಾಗಿದ್ದು ಬರುವ ಭಕ್ತಾಧಿಗಳಿಗೆ ಇದು ಇನ್ಮುಂದೆ ಕಾಣ ಸಿಗಲಿದೆ.
ಈ ದೇಗುಲದ ಗರ್ಭಗುಡಿಗೆ ಒಟ್ಟು 230 ಕೆಜಿ ಬಂಗಾರ ಬಳಸಲಾಗಿದೆ. ಇನ್ನು ಈ ಬಂಗಾರವನ್ನು ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ನೀಡಿದ್ದಾರೆ ಎನ್ನಲಾಗಿದೆ. ಈ ಬಂಗಾರವನ್ನ ಗೌಪ್ಯವಾಗಿ, ವಿಶೇಷ ವಾಹನದಲ್ಲಿ ಕಳಿಸಿಕೊಟ್ಟಿದ್ದಾರಂತೆ. ಕಳೆದ ವಾರ 550 ಫಲಕಗಳನ್ನು ಕೇದಾರನಾಥಕ್ಕೆ ಕಳುಹಿಸಿದ್ದಾರೆ. ಇದನ್ನು ಒಟ್ಟು 19 ಮಂದಿ ಕೆಲಸಗಾರರು ಫಲಕಗಳನ್ನು ಅಳವಡಿಸಿದ್ದಾರೆ.
ಗರ್ಭಗುಡಿಯ ಗೋಡೆಗಳು, ಮೇಲ್ಫಾವಣಿ, ಶಿವಲಿಂಗದ ಆಸುಪಾಸುಗಳಿಗೆ ಬಂಗಾರದ ಫಲಕ ಅಳವಡಿಸಲಾಗಿದೆ. ಇದನ್ನು ಭಾರತೀಯ ಪುರಾತತ್ವ ಇಲಾಖೆ ಜೊತೆಗೆ ರೂರ್ಕಿ ಐಐಟಿ ಎಂಜಿನಿಯರ್ಗಳು ಪರಿಶೀಲನೆ ನಡೆಸಿದ್ದಾರೆ. ಒಟ್ನಲ್ಲಿ ಕೇದಾರನಾಥ ಇನ್ಮುಂದೆ ಬಂಗಾರದಿಂದ ಕಂಗೊಳಿಸೋದ್ರಲ್ಲಿ ಎರಡು ಮಾತಿಲ್ಲ.