ಪ್ಲಾಸ್ಟಿಕ್ ಬಾಟಲ್ ಗಳಲ್ಲಿ ನೀರು ಕುಡಿಯುವುದು ಇಂದಿನ ಫ್ಯಾಶನ್ ಗಳಲ್ಲಿ ಒಂದು. ಇದರಿಂದ ಪರಿಸರಕ್ಕೂ ಹಾನಿ, ಆರೋಗ್ಯಕ್ಕೂ ಅಪಾಯಕಾರಿ. ಏನಿದರ ಮರ್ಮ…?
ಸಂಶೋಧನೆಗಳ ಪ್ರಕಾರ ಪ್ಲಾಸ್ಟಿಕ್ ಅನ್ನು ಗಟ್ಟಿಯಾಗಿಸಲು ಬಳಸುವ ರಾಸಾಯನಿಕ ಬಿಪಿಎ (ಬಿಸ್ಟೆನಾಲ್ ಎ) ಯನ್ನು ಆಹಾರದ ಪಾತ್ರೆಗಳು, ಬಾಟಲಿಗಳು, ಫಲಕಗಳು ಮತ್ತು ಮಗ್ ಗಳ ತಯಾರಿಯಲ್ಲಿ ಬಳಸಲಾಗುತ್ತದೆ. ಕ್ಯಾನ್ ಮತ್ತು ಬಾಟಲಿಗಳಿಗೆ ಲೈನಿಂಗ್ ತಯಾರಿಸಲೂ ಇದನ್ನು ಉಪಯೋಗಿಸುತ್ತಾರೆ.
ಬಿಪಿಎ ಅವಲಂಬನೆಯಿಂದ ಆರೋಗ್ಯಕ್ಕೆ ಅಪಾಯವಿದೆ. ಬಿಪಿಎ ಬಳಕೆ ಹೆಚ್ಚಿದಂತೆ ಸ್ತನ ಕ್ಯಾನ್ಸರ್ ಕಾಡುತ್ತದೆ ಎಂಬ ಅಪಾಯಕಾರಿ ಅಂಶವನ್ನು ಅಮೆರಿಕಾ ಅಧ್ಯಯನದಿಂದ ಹೊರಗೆಡವಿದೆ.
ಭಾರತದಲ್ಲಿ ಶಿಶುಗಳಿಗೆ ಬಳಸುವ ಬಾಟಲಿಗಳಲ್ಲಿ ಬಿಪಿಎ ಬಳಕೆಯನ್ನು ಬಿಐಎಸ್ 2015ರಲ್ಲೇ ನಿಷೇಧಿಸಿದೆ. ಇದರಲ್ಲಿ ಮಕ್ಕಳ ಅನಾರೋಗ್ಯಕ್ಕೆ ಕಾರಣವಾಗುವ ಅಂಶಗಳಿದ್ದವು.
ನೀರನ್ನು ಸಂಗ್ರಹಿಸಲು ಪ್ಲಾಸ್ಟಿಕ್ ಬಾಟಲಿಗಳ ಬದಲು ಸ್ಟೀಲ್ ಅಥವಾ ಗಾಜಿನ ಪಾತ್ರೆ ಬಳಸಿ. ಬಿಸಿ ನೀರನ್ನು ಪಾಲಿ ಕಾರ್ಬೊರೇಟ್ ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಸಂಗ್ರಹಿಸಿಡದಿರಿ. ಗಾಜು ಅಥವಾ ಸ್ಟೀಲ್ ಪಾತ್ರೆಗಳನ್ನೇ ಬಳಸಿ. ಪೂರ್ವ ಸಿದ್ಧ ಆಹಾರಗಳ ಸೇವನೆಯನ್ನೂ ಕಡಿಮೆ ಮಾಡಿ. ಆಹಾರವನ್ನು ಪ್ಲಾಸ್ಟಿಕ್ ನಲ್ಲಿ ಕವರ್ ಮಾಡುವ ಬದಲು ಕ್ಯಾಂಡಲ್ ಪೇಪರ್ ಬಳಸಿ.