ಇದು ಪ್ರೇಮಿಗಳ ಸೀಸನ್. ಇನ್ನೇನು ವ್ಯಾಲಂಟೈನ್ ಡೇ ಬಂದೇಬಿಡ್ತು. ಆ ದಿನ ಮನ ಮೆಚ್ಚಿದವರ ಜೊತೆ ಕಳೆಯಬೇಕು ಅನ್ನೋದು ಪ್ರತಿಯೊಬ್ಬರ ಆಸೆ. ಆದ್ರೆ ರೋಮ್ಯಾಂಟಿಕ್ ಡೇಟ್ ಗೆ ಎಲ್ಲಿಗೆ ಪ್ಲಾನ್ ಮಾಡೋದು? ಎಲ್ಲೆಲ್ಲಿ ಸಂಗಾತಿ ಜೊತೆ ವಿಸಿಟ್ ಮಾಡ್ಬಹುದು ಅನ್ನೋ ಗೊಂದಲ ಎಲ್ರಿಗೂ ಇದ್ದೇ ಇರುತ್ತೆ. ವ್ಯಾಲಂಟೈನ್ ಡೇಗೆ ಎಲ್ಲೆಲ್ಲಿ ಹೋಗ್ಬಹುದು ಅನ್ನೋದಕ್ಕೆ ನಾವ್ ನಿಮ್ಗೆ ಐಡಿಯಾ ಕೊಡ್ತೀವಿ.
ಸ್ಮಾರಕಕ್ಕೆ ಭೇಟಿ : ಪ್ರೇಮಿಗಳ ದಿನವನ್ನು ವಿಶಿಷ್ಟವಾಗಿ ಆಚರಿಸಬೇಕು ಅಂದ್ಕೊಂಡಿರೋರು ಯಾವುದಾದ್ರೂ ಐತಿಹಾಸಿಕ ಸ್ಮಾರಕ ವೀಕ್ಷಣೆಗೆ ತೆರಳಬಹುದು. ಪ್ರೀತಿಪಾತ್ರರ ಕೈಯಲ್ಲಿ ಕೈಬೆಸೆದು ಹೆಜ್ಜೆ ಹಾಕುತ್ತ, ಇತಿಹಾಸದ ಪುಟಗಳನ್ನು ತಿರುವಿ ಹಾಕಬಹುದು.
ಸೂರ್ಯಾಸ್ತಮಾನ ವೀಕ್ಷಣೆ : ವ್ಯಾಲಂಟೈನ್ ಡೇ ದಿನ ಪ್ರತಿ ವರ್ಷ ಲವರ್ ಜೊತೆಗೆ ಸಿನಿಮಾ ನೋಡಿರ್ತೀರಾ. ಈ ಬಾರಿ ಸ್ವಲ್ಪ ಡಿಫರೆಂಟ್ ಆಗಿ ಸನ್ ಸೆಟ್ ನೋಡ್ಕೊಂಡ್ ಬನ್ನಿ. ಅದಕ್ಕಾಗಿ ಎಲ್ಲೋ ದೂರಕ್ಕೆ ಹೋಗಬೇಕೆಂದೇನಿಲ್ಲ. ನಿಮ್ಮ ಮನೆಯ ಗಾರ್ಡನ್ ನಲ್ಲೋ, ಟೆರೆಸ್ ಮೇಲೋ ಕುಳಿತು ಸೂರ್ಯಾಸ್ತಮಾನವನ್ನು ಜೊತೆಯಾಗಿ ಕಣ್ತುಂಬಿಕೊಳ್ಳಬಹುದು.
ಸಿನಿಮಾ ಡೇಟ್ : ಪ್ರೀತಿಪಾತ್ರರ ಜೊತೆಜೊತೆಗೆ, ಸ್ನೇಹಿತರನ್ನೂ ಕೂಡಿಕೊಂಡು ವ್ಯಾಲಂಟೈನ್ ಡೇ ದಿನ ಸಿನಿಮಾ ನೋಡಬಹುದು. ಯಾಕಂದ್ರೆ ಸ್ನೇಹಿತರು ನಿಮಗೆ ಒಳ್ಳೆ ಕಂಪೆನಿ ಕೊಡ್ತಾರೆ.
ನಾಟಕ ವೀಕ್ಷಣೆ : ಸಿನಿಮಾಗಳ ಅಬ್ಬರದಲ್ಲಿ ನಾವು ನಾಟಕಗಳನ್ನು ವೀಕ್ಷಿಸದೆ ಎಷ್ಟೋ ಕಾಲವಾಗಿರುತ್ತೆ. ಸುಂದರವಾದ ರೋಮ್ಯಾಂಟಿಕ್ ನಾಟಕ ನೋಡಲು ವ್ಯಾಲಂಟೈನ್ ಡೇ ಬೆಸ್ಟ್ ಟೈಮ್. ನಾಟಕದ ಒಳಾರ್ಥವನ್ನು ತಿಳಿದುಕೊಂಡು ಪ್ರೇಮಿಗಳ ದಿನವನ್ನು ಎಂಜಾಯ್ ಮಾಡ್ಬಹುದು.
ಮನರಂಜನಾ ಪಾರ್ಕ್ ಗೆ ಭೇಟಿ : ಕೆಲವೊಂದು ಕುತೂಹಲಕರ ಅದ್ಭುತ ಗೇಮ್ ಗಳನ್ನು ಸಂಗಾತಿಯ ಜೊತೆಗೆ ಆಡೋ ಮಜಾನೇ ಬೇರೆ. ಈ ಮೂಲಕ ಅಮ್ಯೂಸ್ಮೆಂಟ್ ಪಾರ್ಕ್ ನಲ್ಲಿ ವ್ಯಾಲಂಟೈನ್ ಡೇಯನ್ನು ಥ್ರಿಲ್ಲಿಂಗ್ ಆಗಿ ಆಚರಿಸಬಹುದು. ರೋಲರ್ ಕೋಸ್ಟರ್ ಸವಾರಿ, ವಾಟರ್ ಗೇಮ್ಸ್ ಆಡ್ತಾ ಎಂಜಾಯ್ ಮಾಡ್ಬಹುದು.