ಪ್ರೀತಿಸಿದವರನ್ನು ಸದಾ ಖುಷಿಯಾಗಿಡಲು ಸಂಗಾತಿಗಳು ಬಯಸುತ್ತಾರೆ. ಆದ್ರೆ ನಮಗೆ ತಿಳಿಯದೇ ಕೆಲವೊಂದು ತಪ್ಪುಗಳು ಆಗಿ ಬಿಡುತ್ವೆ. ಏನು ತಪ್ಪಾಗಿದೆ ಎಂಬುದೂ ನಮಗೆ ನೆನಪಿರುವುದಿಲ್ಲ. ಸಂಗಾತಿಗೆ ಮಾತ್ರ ಅದು ನೋವು ನೀಡಿರುವುದಲ್ಲದೇ, ಕೆಲವೊಮ್ಮೆ ಸಂಬಂಧ ಮುರಿದು ಬೀಳಲು ಅದೇ ವಿಚಾರ ಕಾರಣವಾಗುತ್ತದೆ.
ಪ್ರೀತಿಯನ್ನು ಉಳಿಸಿಕೊಂಡು ಹೋಗಬಯಸುವರು ಕೆಲವೊಂದು ಅಂಶದ ಬಗ್ಗೆ ಗಮನ ನೀಡಬೇಕಾಗುತ್ತದೆ.
ಸಂಗಾತಿಗೆ ಏನು ಹೇಳಬೇಕೆಂದುಕೊಂಡಿದ್ದೀರಿ ಅದನ್ನು ಅವರಿಗೆ ಅರ್ಥವಾಗುವಂತೆ ಹೇಳಬೇಕು. ಅದಕ್ಕೆ ಸೂಕ್ತವಾದ ಶಬ್ದ ಸಿಗಲಿಲ್ಲ ಎಂಬ ಕಾರಣಕ್ಕೆ ಬೇರೊಂದು ಪದ ಬಳಸಿ, ಅರ್ಥ ಕೆಡಿಸಿ ಸಂಬಂಧ ಹಾಳು ಮಾಡಿಕೊಳ್ಳುವುದು ಸಮಂಜಸವಲ್ಲ.
ಭಾವನೆಗಳನ್ನು ನಿಯಂತ್ರಣದಲ್ಲಿಡುವುದು ಅವಶ್ಯಕ. ನಮ್ಮ ಮುಂದಿರುವ ವ್ಯಕ್ತಿ ಪೂರ್ತಿ ಹೇಳುವ ಮುನ್ನ ಓವರ್ ರಿಯಾಕ್ಟ್ ಮಾಡುವುದು ಸರಿಯಲ್ಲ. ಆತ ಅಥವಾ ಆಕೆ ಹೇಳುವುದನ್ನು ಸರಿಯಾಗಿ ಕೇಳಿಸಿಕೊಂಡು ನಂತರ ಪ್ರತಿಕ್ರಿಯೆ ನೀಡಿ. ಒಂದೇ ಬಾರಿ ರೇಗುವುದು ಸರಿಯಲ್ಲ.
ನೀವು ಅವರನ್ನು ಪ್ರೀತಿಸುತ್ತೀರಾ ನಿಜ. ಹಾಗಂತ ಅವರು ನಿಮ್ಮ ಮುಂದೆ ಬಂದಾಗ ಅವರನ್ನು ನೋಡುತ್ತಲೇ ಇರಬೇಕೆಂದೇನು ಇಲ್ಲ. ಇದು ನಿಮ್ಮ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರಬಹುದು. ನೀವು ಇಷ್ಟಪಡುವವರನ್ನು ಸ್ನೇಹಿತರಂತೆ ನೋಡುವುದು ಒಳಿತು.