ಪ್ರೀತಿ ಹಾಗೂ ಸಂಬಂಧದ ಬಗ್ಗೆ ಎಲ್ಲರ ಸಿದ್ಧಾಂತವೂ ಭಿನ್ನವಾಗಿರುತ್ತದೆ. ಪ್ರೀತಿಗೆ ಬಿದ್ದ ಆರಂಭದಲ್ಲಿ ಪ್ರತಿಯೊಂದು ಖುಷಿ ಕೊಡುತ್ತದೆ. ಇಷ್ಟವಾದ ತಕ್ಷಣ ಅದನ್ನು ಪ್ರೀತಿ ಎಂದು ಭಾವಿಸುತ್ತಾರೆ. ಇದೇ ನಿಜವಾದ ಪ್ರೀತಿ ಎಂದುಕೊಳ್ಳುತ್ತಾರೆ. ಆದ್ರೆ ಎಲ್ಲವೂ ನಿಜವಾದ ಪ್ರೀತಿಯಲ್ಲ. ಪ್ರೀತಿ, ಸಂಬಂಧದಲ್ಲಿ ಸಾಕಷ್ಟು ಬಣ್ಣಗಳಿವೆ ಎಂಬುದು ತಿಳಿದಿರಲಿ.
ಒನ್ ಸೈಡ್ ಲವ್ : ಸಾಮಾನ್ಯವಾಗಿ ಈ ರೀತಿಯ ಪ್ರೀತಿಗೆ ಬಿದ್ದ ವ್ಯಕ್ತಿಗೆ ತಾನು ಪ್ರೀತಿ ಮಾಡುವ ವ್ಯಕ್ತಿ ತನ್ನನ್ನು ಪ್ರೀತಿಸ್ತಾನಾ ಇಲ್ಲವಾ ಎಂಬುದು ಬೇಕಾಗಿರುವುದಿಲ್ಲ. ಅವರು ಹುಚ್ಚರಂತೆ ಪ್ರೀತಿ ಮಾಡ್ತಾರೆ. ತಾವು ಪ್ರೀತಿ ಮಾಡುವ ವ್ಯಕ್ತಿಯ ಸಣ್ಣ ಸಣ್ಣ ಆಸೆ, ಬಯಕೆಗಳನ್ನು ಈಡೇರಿಸುತ್ತಾರೆ.
ತನು, ಮನ, ಧನ : ಈ ಪ್ರೀತಿ ಬಗ್ಗೆ ನೀವು ಕೇಳಿರುತ್ತೀರಾ. ಕೆಲವರು ನಿನ್ನನ್ನು ತನು, ಮನ, ಧನದಿಂದ ಪ್ರೀತಿ ಮಾಡ್ತೇನೆ ಎನ್ನುತ್ತಾರೆ. ಅಂದ್ರೆ ನಿಮ್ಮ ಸಂಗಾತಿಯನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಪ್ರೀತಿ ಮಾಡುತ್ತೀರಿ ಎಂದರ್ಥ. ಈ ಪ್ರೀತಿ ಮುರಿದು ಬೀಳುವುದು ಬಹಳ ಅಪರೂಪ.
ದೈಹಿಕ ಪ್ರೀತಿ : ಇತ್ತೀಚಿನ ದಿನಗಳಲ್ಲಿ ಇದು ಸಾಮಾನ್ಯ ಎನ್ನುವಂತಾಗಿದೆ. ಲೈಂಗಿಕ ಬಯಕೆ ತೀರಿಸಿಕೊಳ್ಳುವುದು ಮಾತ್ರ ಸಂಗಾತಿಯ ಉದ್ದೇಶವಾಗಿರುತ್ತದೆ. ನಿಜವಾದ ಪ್ರೀತಿ ಹಾಗೂ ದೈಹಿಕ ಪ್ರೀತಿಗೆ ಅಜಗಜಾಂತರ ವ್ಯತ್ಯಾಸವಿದೆ. ನಿಜವಾದ ಪ್ರೀತಿ ಬಿಟ್ಟು ಬೇರೆಯವರ ಜೊತೆ ಈ ಪ್ರೀತಿ ಹುಟ್ಟಿಕೊಳ್ಳುತ್ತದೆ.
ಭಾವನಾತ್ಮಕ ಪ್ರೀತಿ : ಭಾವನಾತ್ಮಕ ಪ್ರೀತಿ ಬಹಳ ಪ್ರಬಲವಾದ ಪ್ರೀತಿ. ಇದ್ರಲ್ಲಿ ಸಂಗಾತಿ ದೈಹಿಕ ವ್ಯವಹಾರ ನಡೆಸುವಲ್ಲಿ ಆಸಕ್ತಿ ಹೊಂದಿರುವುದಿಲ್ಲ. ಸದಾ ಒಬ್ಬರೊಬ್ಬರ ಬಗ್ಗೆ ಯೋಚನೆ ಮಾಡುತ್ತಿರುತ್ತಾರೆ. ಸದಾ ಸಂಗಾತಿ ಜೊತೆ ಮಾತನಾಡಲು ಕಾರಣ ಹುಡುಕುತ್ತಾರೆ.
ಸೇಡಿನ ಪ್ರೀತಿ : ಈ ಹೆಸರು ಕೇಳಿದ್ರೆ ನಿಮಗೆ ವಿಚಿತ್ರವೆನಿಸಬಹುದು. ಆದ್ರೆ ವಿಶ್ವದಲ್ಲಿ ಇಂತ ಪ್ರೀತಿ ಕೂಡ ಇದೆ. ಸಂಗಾತಿಗೆ ಬುದ್ದಿ ಕಲಿಸಲು ಇಲ್ಲ ಪ್ರತೀಕಾರ ತೀರಿಸಿಕೊಳ್ಳಲು ಈ ರೀತಿಯ ಪ್ರೀತಿ ಮಾಡ್ತಾರೆ.