ಪ್ರಧಾನಮಂತ್ರಿ ಕೌಶಲ್ ವಿಕಾಸ್ ಯೋಜನೆಯು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಜಾರಿಗೊಳಿಸಲಾದ ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ ಪ್ರಮುಖ ಯೋಜನೆಯಾಗಿದೆ.
ಪ್ರಧಾನ ಮಂತ್ರಿ ಕೌಶಲ ವಿಕಾಸ್ ಯೋಜನೆ (PMKVY) ಯೋಜನೆಯ ಮೊದಲ ಆವೃತ್ತಿಯನ್ನು 2015 ರಲ್ಲಿ ಪ್ರಾರಂಭಿಸಲಾಯಿತು, ಇದು ದೇಶದಲ್ಲಿ ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜಿಸಲು ಮತ್ತು ಉಚಿತ ಅಲ್ಪಾವಧಿಯ ಕೌಶಲ್ಯ ತರಬೇತಿಯನ್ನು ನೀಡುತ್ತದೆ ಮತ್ತು ಕೌಶಲ್ಯ ಪ್ರಮಾಣೀಕರಣಕ್ಕಾಗಿ ಯುವಕರಿಗೆ ಹಣಕಾಸಿನ ಸಹಾಯ ನೀಡುವ ಮೂಲಕ ಪ್ರೋತ್ಸಾಹಿಸುತ್ತದೆ.
ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ 3.0 ಅನ್ನು ಕಳೆದ ವರ್ಷ ಜನವರಿ 15ರಿಂದ ದೇಶದ ಎಲ್ಲಾ ರಾಜ್ಯಗಳ 600 ಜಿಲ್ಲೆಗಳಲ್ಲಿ ಆರಂಭಿಸಲಾಗಿದೆ.
ಈ ಕೌಶಲ್ಯ ಯೋಜನೆಯ ಉದ್ದೇಶವು ಹೆಚ್ಚಿನ ಸಂಖ್ಯೆಯ ಭಾರತೀಯ ಯುವಜನರು ಉದ್ಯಮ ಸಂಬಂಧಿತ ಕೌಶಲ್ಯ ತರಬೇತಿಯನ್ನು ಪಡೆಯಲು ಅನುವು ಮಾಡಿಕೊಡುತ್ತದೆ.ಇದರಿಂದ ಯುವಜನತೆಗೆ ಉತ್ತಮ ಜೀವನೋಪಾಯ ಸಿಗಲಿದೆ.
ಪ್ರಧಾನ್ ಮಥ್ರಿ ಕೌಶಲ್ ವಿಕಾಸ್ ಯೋಜನೆಗೆ ರಿಜಿಸ್ಟರ್ ಆಗಲು ಇಲ್ಲಿದೆ ಮಾರ್ಗ :
ಪ್ರಧಾನ್ ಮಂತ್ರಿ ಕೌಶಲ್ ವಿಕಾಸ್ ಯೋಜನೆಯ ಅಧಿಕೃತ ವೆಬ್ಸೈಟ್ pmkvyofficial.org. ಗೆ ಭೇಟಿ ನೀಡಿ.
ಇಲ್ಲಿ Quick Links ಎಂದು ಕ್ಲಿಕ್ ಮಾಡಿ ಬಳಿಕ Skill India ಲಿಂಕ್ ಮೇಲೆ ಕ್ಲಿಕ್ ಮಾಡಿ.
ಬಳಿಕ ರಿಜಿಸ್ಟರ್ ಆ್ಯಸ್ ಎ ಕ್ಯಾಂಡಿಡೇಟ್ ಮೇಲೆ ಕ್ಲಿಕ್ ಮಾಡಿ ಬಳಿಕ ಅರ್ಜಿಯನ್ನು ತುಂಬಿರಿ.
ಇಲ್ಲಿ ನಿಮಗೆ ಕೇಳಲಾಗುವ ವಿವರ, ವಿಳಾಸ ಸೇರಿದಂತೆ ವಿವಿಧ ಮಾಹಿತಿಗಳನ್ನು ತುಂಬಿರಿ.
ಬಳಿಕ ಸಬ್ಮಿಟ್ ಕೊಟ್ಟರೆ ಈ ಯೋಜನೆಗೆ ನಿಮ್ಮ ರಿಜಿಸ್ಟ್ರೇಷನ್ ಆಗಲಿದೆ.