alex Certify ಪೋಷಕಾಂಶಗಳ ಗಣಿ ʼಪೇರಳೆ ಹಣ್ಣುʼ ತಿನ್ನೋದ್ರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ..…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೋಷಕಾಂಶಗಳ ಗಣಿ ʼಪೇರಳೆ ಹಣ್ಣುʼ ತಿನ್ನೋದ್ರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ..…?

ಚಿಕ್ಕವರಿದ್ದಾಗ ಹೆಚ್ಚಾಗಿ ತಿಂದ ಹಣ್ಣುಗಳಲ್ಲಿ ಒಂದು ಸೀಬೆ. ಇದನ್ನು ಚೇಪೆಕಾಯಿ, ಪೇರಳೆ ಕಾಯಿ ಅಂತ ಕೂಡ ಕರೆಯಲಾಗುತ್ತೆ. ವಿಟಮಿನ್ ಸಿ ಭರಿತ ಸೀಬೆಯು ಪೋಷಕಾಂಶಗಳ ಗಣಿಯಾಗಿದೆ. ಸೀಬೆಯ ಇನ್ನಷ್ಟು ಆರೋಗ್ಯ ಪ್ರಯೋಜನಗಳ ಮಾಹಿತಿ ಇಲ್ಲಿದೆ.

* ಪೇರಳೆಯಲ್ಲಿರುವ ಸಿ ವಿಟಮಿನ್ ನಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಮಳೆಗಾಲದಲ್ಲಿ ಬರುವ ಶೀತ, ನೆಗಡಿ, ಕೆಮ್ಮುಗಳನ್ನು ದೂರಮಾಡುತ್ತದೆ. ಸಿ ವಿಟಮಿನ್ ಗೆ ಕ್ಯಾನ್ಸರ್ ಕಾರಕಗಳನ್ನು ದೂರ ಮಾಡುವ ಶಕ್ತಿಯೂ ಇದೆ.

* ಸೀಬೆ ಹಣ್ಣಿನ ಬೀಜದ ಸತ್ವವು ಥೈರಾಯಿಡ್ ಗ್ರಂಥಿಗೆ ಆರೋಗ್ಯಕಾರಿ.

* ಜೀರ್ಣಶಕ್ತಿಯನ್ನು ಹೆಚ್ಚು ಮಾಡುವ ಶಕ್ತಿ ಸೀಬೆಕಾಯಿಗೆ ಇದೆ. ಇದರಲ್ಲಿರುವ ಆಂಟಿ ಬ್ಯಾಕ್ಟೀರಿಯಲ್ ಗುಣವೂ ಜೀರ್ಣಾಶಯವನ್ನು ಆರೋಗ್ಯದಿಂದಿಡುತ್ತದೆ.

* ಪೇರಳೆಯನ್ನು ತಿನ್ನುವುದರಿಂದ ದೇಹದಲ್ಲಿ ಪೊಟಾಶಿಯಂ, ಸೋಡಿಯಂ ಸಮತೋಲನದಲ್ಲಿ ಇರುತ್ತದೆ. ಅಧಿಕ ರಕ್ತದೊತ್ತಡ, ಕೆಟ್ಟ ಕೊಲೆಸ್ಟ್ರಾಲ್ ತಗ್ಗುತ್ತದೆ.

* ಸೀಬೆಯಲ್ಲಿನ ಆಂಟಿ ಆಕ್ಸಿಡೆಂಟ್ ಗಳು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಪ್ರತಿದಿನ ಒಂದು ಸೀಬೆ ತಿಂದರೆ ಚರ್ಮವೂ ಆರೋಗ್ಯವಾಗಿರುತ್ತದೆ. ಸುಕ್ಕು ಬೀಳುವುದು ಇಲ್ಲವಾಗುತ್ತದೆ.

* ವಿಟಮಿನ್ ಎ ಕೂಡ ಇದರಲ್ಲಿ ಹೆಚ್ಚಿರುವುದರಿಂದ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.

* ಬಾಯಿಯಲ್ಲಿನ ಅಲ್ಸರ್, ಹುಣ್ಣುಗಳಂತಹ ಅನಾರೋಗ್ಯಗಳನ್ನು ದೂರ ಇಡುವಲ್ಲಿ ಸೀಬೆ ಸಹಕಾರಿ. ಹಲ್ಲುಗಳ ನಡುವೆ ಕಾಡುವ ಇನ್ಫೆಕ್ಷನ್ ಅನ್ನು ಪರಿಹರಿಸುತ್ತದೆ.

* ಸೀಬೆಯಲ್ಲಿ ನಾರು ಸತ್ವ ಹೆಚ್ಚು. ಹಿಟ್ಟು ಸತ್ವ ತುಂಬಾ ಕಡಿಮೆ. ಹೀಗಾಗಿ ಒಂದು ಹಣ್ಣು ತಿಂದರೆ ಹೊಟ್ಟೆ ತುಂಬಿದಂತೆ ಇರುತ್ತದೆ.

* ಅಜೀರ್ಣವಿದ್ದಾಗ, ವಾಂತಿ ಇರುವಾಗ ನಾಲ್ಕು ಸೀಬೆ ಮರದ ಎಲೆಗಳನ್ನು ಒಂದು ಗ್ಲಾಸ್ ನೀರಿಗೆ ಹಾಕಿ ಕುದಿಸಿ ಬಿಸಿಬಿಸಿಯಾಗಿ ಕುಡಿದರೆ ಫಲವಿದೆ.

* ಸೀಬೆ ಮರದ ಎಲೆಗಳಿಂದ ತಯಾರಿಸುವ ಟೀ ಕುಡಿದರೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಒಂದೇ ಹದದಲ್ಲಿ ಇರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...