ಪರಿಸರ ಮಾಲಿನ್ಯಕ್ಕೆ ಪ್ರಮುಖ ಕಾರಣ ಪಾಲಿಥಿನ್. ಹೀಗಾಗಿ ಹಲವು ರಾಜ್ಯಗಳಲ್ಲಿ ಪಾಲಿಥಿನ್ ರದ್ದು ಮಾಡಲಾಗಿದೆ. ಇದ್ರಿಂದಾಗಿ ಕಾಗದದ ಚೀಲಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ.
ಪೇಪರ್ ಬ್ಯಾಗ್ ಪರಿಸರ ಸುರಕ್ಷಿತ. ವ್ಯಾಪಾರ ಶುರುಮಾಡಲು ಬಯಸುವವರು ಪೇಪರ್ ಬ್ಯಾಗ್ ತಯಾರಿಕೆ ಶುರು ಮಾಡಬಹುದು. ಹೆಚ್ಚು ಲಾಭ ಗಳಿಸುವ ಉದ್ಯೋಗಗಳಲ್ಲಿ ಇದೂ ಒಂದು.
ಪೇಪರ್ ಬ್ಯಾಗ್ ತಯಾರಿಕಾ ಘಟಕ ಶುರು ಮಾಡಲು ಬಯಸಿದ್ದರೆ ನಿಮಗೆ ಸರ್ಕಾರ 1 ಕೋಟಿಯವರೆಗೆ ಸಾಲ ನೀಡುತ್ತದೆ. ಉದ್ಯಮಿ ಮಿತ್ರ ಸರ್ಕಾರಿ ಯೋಜನೆಯಡಿ ನಿಮಗೆ ಸಾಲ ಸಿಗಲಿದೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪ್ಯಾಕೇಜಿಂಗ್ ಮುಂಬೈ ಸೇರಿದಂತೆ ಅದ್ರ ಶಾಖೆಗಳಲ್ಲಿ ಪೇಪರ್ ಬ್ಯಾಗ್ ತಯಾರಿಸುವ ಬಗ್ಗೆ ತರಬೇತಿ ನೀಡುತ್ತದೆ.
www.udyamimitra.in ನಲ್ಲಿ ನಿಮಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ. ಒಮ್ಮೆ ಈ ಉದ್ಯಮಕ್ಕಿಳಿದ್ರೆ ನಿರಂತರ ಲಾಭ ಪಡೆಯಬಹುದು. ಈಗ ಮಾಲ್ ಸೇರಿದಂತೆ ಸಣ್ಣ ಸಣ್ಣ ಅಂಗಡಿಗಳಲ್ಲೂ ಪೇಪರ್ ಬ್ಯಾಗ್ ಬಳಸುತ್ತಿರುವುದ್ರಿಂದ ಹೆಚ್ಚೆಚ್ಚು ಲಾಭ ಪಡೆಯಬಹುದು.