ಹೂಡಿಕೆ ಮಾಡಲು ಇಚ್ಛಿಸುವವರಿಗೆ ಹತ್ತಾರು ಬಗೆಯ ಯೋಜನೆಗಳು ಮಾರುಕಟ್ಟೆಯಲ್ಲಿವೆ. ಸರ್ಕಾರಿ ಹಾಗೂ ಖಾಸಗಿ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು.
ಆದಾಯವನ್ನು ಗರಿಷ್ಠಗೊಳಿಸುವ ಜೊತೆಗೆ ಸುರಕ್ಷಿತವಾಗಿರಿಸಲು ಹೂಡಿಕೆ ಮಾಡುವಾಗ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಿ.
ಸುರಕ್ಷಿತ ಮತ್ತು ಗರಿಷ್ಠ ಲಾಭ ದೊರೆಯುವ ಯೋಜನೆಗಳಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆಯೂ ಒಂದು. ತಿಂಗಳಿಗೆ 1000 ರೂಪಾಯಿ ಹೂಡಿಕೆ ಮಾಡುವ ಸರ್ಕಾರಿ ಯೋಜನೆ ಇದು. ನಿವೃತ್ತಿಯ ನಂತರ ನಿಮಗೆ ತಿಂಗಳಿಗೆ 20 ಸಾವಿರ ರೂಪಾಯಿ ಪಿಂಚಣಿ ದೊರೆಯುತ್ತದೆ.
ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಎಂದರೇನು ?
ರಾಷ್ಟ್ರೀಯ ಪಿಂಚಣಿ ಯೋಜನೆ ಸರ್ಕಾರಿ ಯೋಜನೆಯಾಗಿದ್ದು, ಇದನ್ನು ವಿಶೇಷವಾಗಿ ವೃದ್ಧರಿಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯನ್ನು ಜನವರಿ 2004 ರಲ್ಲಿ ಸರ್ಕಾರಿ ನೌಕರರಿಗಾಗಿ ಪ್ರಾರಂಭಿಸಲಾಯಿತು. ನಂತರ 2009 ರಲ್ಲಿ, ಇದನ್ನು ಎಲ್ಲಾ ವರ್ಗದ ಜನರಿಗೆ ತೆರೆಯಲಾಯಿತು. ಈ ಯೋಜನೆಯಲ್ಲಿ ನೀವು ವರ್ಷಾಶನದಲ್ಲಿ ಶೇ.40 ರಷ್ಟು ಮೊತ್ತವನ್ನು ಹೂಡಿಕೆ ಮಾಡಬೇಕು.
ಪಿಂಚಣಿಯಾಗಿ ತಿಂಗಳಿಗೆ 20,000 ರೂಪಾಯಿ ಪಡೆಯುವುದು ಹೇಗೆ ?
ನೀವು NPS ನಲ್ಲಿ ಕೇವಲ 1000 ರೂಪಾಯಿಗಳ ಹೂಡಿಕೆ ಮಾಡಬಹುದು. 18 ರಿಂದ 70 ವರ್ಷದೊಳಗಿನವರು ಈ ಯೋಜನೆಯ ಲಾಭ ಪಡೆಯಬಹುದು. ನೀವು 20 ವರ್ಷ ವಯಸ್ಸಿನಿಂದ ತಿಂಗಳಿಗೆ 1000 ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ನಿವೃತ್ತಿಯ ತನಕ ಒಟ್ಟು 5.4 ಲಕ್ಷ ರೂಪಾಯಿ ಸಿಗುತ್ತದೆ.
ಇದರ ಮೇಲೆ 10 ಪರ್ಸೆಂಟ್ ರಿಟರ್ನ್ ಇರುತ್ತದೆ. ಇದು ಹೂಡಿಕೆ ಮೊತ್ತವನ್ನು 1.05 ಕೋಟಿಗಳಿಗೆ ಹೆಚ್ಚಿಸುತ್ತದೆ. ಪ್ರತಿ ತಿಂಗಳು 21,140 ರೂಪಾಯಿಯಂತೆ ಸುಮಾರು 63.41 ಲಕ್ಷ ರೂಪಾಯಿ ಒಟ್ಟು ಮೊತ್ತ ನಿಮಗೆ ಸಿಗುತ್ತದೆ.
ನೀವು ಎನ್‌ಪಿಎಸ್‌ನಲ್ಲಿ ಹೂಡಿಕೆ ಮಾಡಿದರೆ, ಅಂತಿಮ ಹಿಂಪಡೆಯುವಿಕೆಯ ಮೊತ್ತದಲ್ಲಿ ಶೇ.60ರಷ್ಟು ತೆರಿಗೆ ಮುಕ್ತವಾಗಿರುತ್ತದೆ. NPS ಖಾತೆಯಲ್ಲಿನ ಕೊಡುಗೆ ಮಿತಿಯು ಶೇ.14ರಷ್ಟಿದೆ.
ವರ್ಷಾಶನವನ್ನು ಖರೀದಿಸಲು ಹೂಡಿಕೆ ಮಾಡಿದ ಮೊತ್ತವು ತೆರಿಗೆಯಿಂದ ಸಂಪೂರ್ಣವಾಗಿ ವಿನಾಯಿತಿ ಪಡೆದಿದೆ. ಯಾವುದೇ NPS ಚಂದಾದಾರರು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80CCD(1) ಅಡಿಯಲ್ಲಿ ಒಟ್ಟು ಆದಾಯದ 10 ಪ್ರತಿಶತದಷ್ಟು ತೆರಿಗೆ ಕಡಿತವನ್ನು ಪಡೆಯಬಹುದು.ಸೆಕ್ಷನ್ 80CCE ಅಡಿಯಲ್ಲಿ ಈ ಮಿತಿ 1.5 ಲಕ್ಷ ಆಗಿರುತ್ತದೆ. ಚಂದಾದಾರರು ಸೆಕ್ಷನ್ 80CCE ಅಡಿಯಲ್ಲಿ ರೂ 50,000 ವರೆಗೆ ಹೆಚ್ಚುವರಿ ಕಡಿತಗಳನ್ನು ಪಡೆಯಬಹುದು.