ಕೋವಿಡ್ ನಿರ್ಬಂಧಗಳ ನಡುವೆ ವಿದೇಶಗಳಿಗೆ ತೆರಳಲು ಬಯಸುವ ಮಂದಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆ ಅಥವಾ ಕೋವಿಡ್ ಲಸಿಕೆ ಪಡೆದ ಪ್ರಮಾಣ ಪತ್ರ ಕಡ್ಡಾಯವಾಗಿದೆ.
ಭಾರತದ ಕೋವಿಡ್ ನಿರ್ವಹಣಾ ಪೋರ್ಟಲ್ ಕೋ-ವಿನ್ ಮೂಲಕ ಕೋವಿಡ್ ಲಸಿಕೆ ಪಡೆದ ಪ್ರಮಾಣ ಪತ್ರಗಳ ವಿತರಣೆ ಮಾಡಲಾಗುತ್ತಿದೆ. ಈ ಪ್ರಮಾಣಪತ್ರದೊಂದಿಗೆ ಪಾಸ್‌ಪೋರ್ಟ್ ಸಂಖ್ಯೆಯನ್ನು ಲಗತ್ತಿಸಲು ಕೋವಿನ್ ಪೋರ್ಟಲ್‌ನಲ್ಲಿ ಅವಕಾಶ ಮಾಡಿಕೊಡಲಾಗಿದೆ.
ಶಿಕ್ಷಣ, ಉದ್ಯೋಗ ಅಥವಾ ಟೋಕಿಯೋ ಒಲಿಂಪಿಕ್ಸ್‌ಗೆ ಭಾರತ ತಂಡದ ಭಾಗವಾಗಿ ವಿದೇಶಗಳಿಗೆ ಹೋಗುತ್ತಿರುವವರ ಪಾಸ್‌ಪೋರ್ಟ್‌ಗಳಲ್ಲಿ ಲಸಿಕೆ ಪಡೆದ ಪ್ರಮಾಣಪತ್ರ ಲಗತ್ತಿಸಲಾಗುವುದು ಎಂದು ಕೇಂದ್ರ ಸರ್ಕಾರ ಇದೇ ತಿಂಗಳ ಆರಂಭದಲ್ಲಿ ತಿಳಿಸಿತ್ತು.
ಅದರಂತೆ ಕೋವಿಡ್-19 ಲಸಿಕೆ ಪ್ರಮಾಣಪತ್ರವನ್ನು ಪಾಸ್‌ಪೋರ್ಟ್‌ನೊಂದಿಗೆ ಲಿಂಕ್ ಮಾಡಲು ಈ ಕೆಳಗಿನಂತೆ ಮಾಡಿ.
1. ಕೋವಿನ್‌ನ ಅಧಿಕೃತ ಪೋರ್ಟಲ್ cowin.gov.inಗೆ ಭೇಟಿ ಕೊಡಿ.
2. ಅಲ್ಲಿ ‘Raise an issue’ ಆಯ್ಕೆ ಮೇಲೆ ಟ್ಯಾಪ್ ಮಾಡಿ.
3. ಈಗ “passport” ಆಯ್ಕೆ ಟ್ಯಾಪ್ ಮಾಡಿ, ಡ್ರಾಪ್‌ಡೌನ್ ಮೆನುವಿನಲ್ಲಿ ವ್ಯಕ್ತಿಯನ್ನು ಆಯ್ಕೆ ಮಾಡಿ.
4. ನಿಮ್ಮ ಪಾಸ್‌ಪೋರ್ಟ್ ಸಂಖ್ಯೆ ಎಂಟರ್ ಮಾಡಿ ವಿವರಗಳನ್ನು ಸಲ್ಲಿಸಿ.
5. ನಿಮಗೆ ಹೊಸ ಪ್ರಮಾಣ ಪತ್ರವು ಸೆಕೆಂಡ್‌ಗಳಲ್ಲಿ ಸಿಗಲಿದೆ.