10 ಸಂಖ್ಯೆಗಳ ಆಲ್ಪಾನ್ಯೂಮೆರಿಕ್ ಗುರುತು ಹೊಂದಿರುವ ಪರ್ಮನೆಂಟ್ ಅಕೌಂಟ್ ನಂಬರ್ ಅಥವಾ ಪಾನ್ ಕಾರ್ಡ ಅನ್ನು ಆದಾಯ ತೆರಿಗೆ ಇಲಾಖೆ ಪ್ರತಿಯೊಬ್ಬ ತೆರಿಗೆ ಪಾವತಿದಾರನಿಗೂ ನೀಡುತ್ತದೆ.
ಇದನ್ನು NSDL ಮತ್ತು UTITSL ವೆಬ್ ಸೈಟ್ ಗಳ ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಪಾನ್ ಕಾಡ್೯ ಪಡೆಯಬಹುದು. ಇದೊಂದು ಶಾಶ್ವತ ಅಕೌಂಟ್ ನಂಬರ್ ಆಗಿದ್ದು ಈ ನಂಬರ್ ಬದಲಾಯಿಸಲು ಸಾಧ್ಯವಿಲ್ಲ. ಇನ್ನು ಸಲ್ಲಿಸುವ ಅರ್ಜಿಯಲ್ಲಿ ಇ-ಮೇಲ್ ಐಡಿ ನಮೂದಿಸುವುದು ಕಡ್ಡಾಯವಾಗಿದೆ.
ಈ ಐದು ಅಂಶಗಳ ಬಗ್ಗೆ ಗಮನ ಇರಲಿ
1. ತೆರಿಗೆ ಪಾವತಿದಾರರು ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು. ಒಂದೊಮ್ಮೆ ಪಾನ್ ಕಾಡ್೯ ಇಲ್ಲದೇ ಹೋದವರು ಆದಾಯ ತೆರಿಗೆ ಪಾವತಿ ಅರ್ಜಿಯಲ್ಲಿ ಆಧಾರ್ ನಂಬರ್ ನಮೂದಿಸಿ.
2. ಹಣಕಾಸು ವರ್ಗಾವಣೆ ಮಾಡಬಯಸುವವರು ಕಡ್ಡಾಯವಾಗಿ ಪಾನ್ ಕಾಡ್೯ ಸಂಖ್ಯೆ ನಮೂದಿಸಬೇಕು. ರಿರ್ಟನ್ಸ್ ಸಲ್ಲಿಸದ ವ್ಯಕ್ತಿಗಳು ಸ್ವಯಂ ಪ್ರೇರಣೆಯಿಂದ ಪಾನ್ ಗೆ ಅರ್ಜಿ ಸಲ್ಲಿಸಬಹುದು.
3. ಒಂದಕ್ಕಿಂತ ಹೆಚ್ಚು ಪಾನ್ ಕಾಡ್೯ ಹೊಂದುವುದು ಕಾನೂನುಬಾಹಿರ. ಒಂದೊಮ್ಮೆ ಇಲಾಖೆಗೆ ಗೊತ್ತಾದ್ರೆ 10 ಸಾವಿರ ರೂಪಾಯಿ ತನಕ ದಂಡ ವಿಧಿಸಬಹುದು.
4. ಒಂದಕ್ಕಿಂತ ಹೆಚ್ಚು ಪಾನ್ ಹೊಂದಿದವರು, ಪ್ರಸ್ತುತ ಬಳಕೆಯಲ್ಲಿರುವ ಪಾನ್ ನಮೂದಿಸಿ ಬದಲಾವಣೆಗೆ ಅರ್ಜಿ ಸಲ್ಲಿಸಬಹುದು.
5. ಆದಾಯ ತೆರಿಗೆ ಇಲಾಖೆ ನಿಗದಿಪಡಿಸಿದ ಕಾರ್ಯವಿಧಾನದ ಪ್ರಕಾರ, ಪಾನ್ ಅರ್ಜಿದಾರರ ಗುರುತು, ವಿಳಾಸ ಪರಿಶೀಲಿಸಲಾಗುತ್ತದೆ. ಈ ಕೆಲಸವನ್ನು ಮೂರನೇ ವ್ಯಕ್ತಿಗೆ ವಹಿಸಿದ್ದು, ಅರ್ಜಿ ಸಲ್ಲಿಸುವಾಗ ನೀಡಿರುವ ದಾಖಲೆಗಳು ಪಕ್ಕಾ ಇರುವಂತೆ ನೋಡಿಕೊಳ್ಳಿ. ಇಲ್ಲವಾದ್ರೆ ಕ್ರಮ ಎದುರಿಸಬೇಕಾಗುತ್ತದೆ.