ಅಡುಗೆ ಮನೆಯಲ್ಲಿ ನಿತ್ಯ ಬಳಸುವ ಪ್ಯಾನ್ ಗಳು ಕ್ರಮೇಣ ಬಣ್ಣ ಕಳೆದುಕೊಂಡು ಹಳತರಂತಾಗಿ ಬಿಡುತ್ತವೆ. ಇದರ ಮೇಲಿರುವ ಕೋಟಿಂಗ್ ಗೆ ಶೈನಿಂಗ್ ಗುಣವಿರುತ್ತದೆ. ಇದು ಹಾಳಾಗದಂತೆ ನೋಡಿಕೊಂಡರೆ ನಿಮ್ಮ ಪ್ಯಾನ್ ಬಹುಬೇಗ ಹಳತಾಗುವುದಿಲ್ಲ.
ಪ್ಯಾನ್ ನಲ್ಲಿ ಪಲ್ಯ ಅಥವಾ ಸಾಂಬಾರು ತಯಾರಿಸಿದ ಬಳಿಕ ಅದನ್ನು ಒತ್ತಿ ಒತ್ತಿ ತಿಕ್ಕಿ ತೊಳೆಯದಿರಿ. ಅದರ ಮೇಲೆ ನಿಮ್ಮ ಬ್ರಶ್ ನ ಗೆರೆಗಳು ಮೂಡದಂತೆ ನೋಡಿಕೊಳ್ಳಿ. ಪ್ಯಾನ್ ಗಳಲ್ಲಿ ಆಹಾರ ತಯಾರಿಸುವಾಗ ಮರದ ಸೌಟಿನಲ್ಲೇ ಮಗುಚಿ. ಸ್ಟೀಲ್ ಅಥವಾ ಕಬ್ಬಿಣದ ಸೌಟಿನಿಂದ ಮಗುಚದಿರಿ.
ಪ್ಯಾನ್ ತೊಳೆಯಲು ಸ್ಟೀಲ್ ಸ್ಕ್ರಬ್ ಬಳಕೆ ಮಾಡುವುದು ಸಲ್ಲ. ಪ್ಯಾನ್ ತಳ ಹಿಡಿಯದು ಎಂಬ ಕಾರಣಕ್ಕೆ ಅದಕ್ಕೆ ಎಣ್ಣೆ ಹಾಕದೆ ನೇರವಾಗಿ ಬಿಸಿಗಿಡದಿರಿ. ಅದರಿಂದಲೂ ಪ್ಯಾನ್ ನ ತಳ ಭಾಗ ಬಹುಬೇಗ ಹಾಳಾಗುತ್ತದೆ.