
ಈ ಬೇಸಿಗೆಯಲ್ಲಿ ಕೂಲ್ ಆಗಿ ಇರಲು ವ್ಯಕ್ತಿಯೊಬ್ಬ ಒಂದೊಳ್ಳೆ ಐಡಿಯಾ ಹೂಡಿದ್ದಾನೆ. ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಧೋತಿ ಧರಿಸಿದ ವ್ಯಕ್ತಿಯೊಬ್ಬ ಫ್ಯಾನ್ ಅನ್ನು ಜೋರಾಗಿ ಕೈಯಿಂದ ತಿರುಗಿಸಿ ಹಾಸಿಗೆಯ ಮೇಲೆ ಮಲಗಿದ್ದಾರೆ.
ಫ್ಯಾನ್‌ನ ತಂಪಾದ ಗಾಳಿಗೆ ನೇರವಾಗಿ ತನ್ನ ಹಾಸಿಗೆಯ ಮೇಲೆ ಹಾರುವ ಮುನ್ನ ವ್ಯಕ್ತಿಯು ಪೆಡೆಸ್ಟಲ್ ಫ್ಯಾನ್‌ನ ಬ್ಲೇಡ್ ಅನ್ನು ಗಟ್ಟಿಯಾಗಿ ತಿರುಗಿಸುವುದನ್ನು ವಿಡಿಯೋದಲ್ಲಿ ನೋಡಬಹುದು. ಫ್ಯಾನ್ ನಿಂತ ನಂತರ, ವ್ಯಕ್ತಿ ಮತ್ತೆ ಎದ್ದು ಅದರ ಬ್ಲೇಡ್ ಅನ್ನು ತಿರುಗಿಸುತ್ತಾನೆ.
ಈ ವಿಡಿಯೋವನ್ನು ಹಂಚಿಕೊಂಡ ಅಧಿಕಾರಿ, ಈ ತಂತ್ರವು ಭಾರತದ ಹೊರಗೆ ಹೋಗಬಾರದು ಎಂದು ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ. ಟ್ವಿಟ್ಟರ್ ನಲ್ಲಿ ಹಂಚಿಕೊಂಡ ನಂತರ, ಈ ವಿಡಿಯೋ 4.36 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಹಾಗೂ ಸಾವಿರಾರು ಲೈಕ್ಸ್ ಗಳೊಂದಿಗೆ ವೈರಲ್ ಆಗಿದೆ.