ʼಪರಿಸರ ಸ್ನೇಹಿʼ ಫೋಟೋ ಹಂಚಿಕೊಂಡ ಉದ್ಯಮಿ ಗೋಯೆಂಕಾ: ನೆಟ್ಟಿಗರಿಂದ ಶ್ಲಾಘನೆ 31-03-2022 9:58AM IST / No Comments / Posted In: Latest News, India, Live News ಉದ್ಯಮಿ ಹರ್ಷ್ ಗೋಯೆಂಕಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಆಗಾಗ್ಗೆ ವೈರಲ್ ಆಗಿರುವ ಹಾಸ್ಯದ ಮತ್ತು ಸ್ಪೂರ್ತಿದಾಯಕ ಫೋಟೋ ಅಥವಾ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅವರು, ಸೂಪರ್ ಮಾರ್ಕೆಟ್‌ನಲ್ಲಿ ಬಾಳೆಎಲೆಗಳಲ್ಲಿ ಸುತ್ತಿದ ತರಕಾರಿಗಳ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಉದ್ಯಮಿಯ ಈ ಪೋಸ್ಟ್ ನಿಸ್ಸಂಶಯವಾಗಿ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಉದ್ಯಮಿಗಿರುವ ಪರಿಸರ ಸ್ನೇಹಿ ಕಾಳಜಿಯನ್ನು ಶ್ಲಾಘಿಸಿದ್ದಾರೆ. ಇದೀಗ ವೈರಲ್ ಆಗಿರುವ ಚಿತ್ರದಲ್ಲಿ, ಸೂಪರ್ ಮಾರ್ಕೆಟ್‌ನಲ್ಲಿ ಸೌತೆಕಾಯಿಗಳ ಗೊಂಚಲು ಬಾಳೆ ಎಲೆಯಲ್ಲಿ ಸುತ್ತಿರುವುದನ್ನು ಕಾಣಬಹುದು. ಪರಿಸರ ಸ್ನೇಹಿ ಕಾಳಜಿಯು ಗೊಯೆಂಕಾ ಮತ್ತು ಟ್ವಿಟ್ಟರ್ ಬಳಕೆದಾರರನ್ನು ಆಕರ್ಷಿಸಿದೆ. ಇದು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿರುವುದು ಹರ್ಷ ತಂದಿದೆ. ಸೂಪರ್ ಮಾರ್ಕೆಟ್‌ಗಳು ಪ್ಲಾಸ್ಟಿಕ್ ಪ್ಯಾಕೇಜಿಂಗ್ ಬದಲಿಗೆ ಬಾಳೆ ಎಲೆಗಳನ್ನು ಬಳಸುತ್ತಿವೆ. ಇದು ಉತ್ತಮ ಉಪಾಯವಾಗಿದೆ. ಭವಿಷ್ಯಕ್ಕೆ ಇಂತಹ ಯೋಜನೆಗಳು ಅವಶ್ಯಕತೆ ಇದೆ ಎಂದು ಹರ್ಷ್ ಗೋಯೆಂಕಾ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಈ ಪೋಸ್ಟ್ ಇದೀಗ ಭಾರಿ ಸದ್ದು ಮಾಡುತ್ತಿದೆ. ಅದೊಂದು ಕಾಲವೊಂದಿತ್ತು. ಮದುವೆಗಳಲ್ಲಿಯೂ ಸಹ ನಾವು ಬಾಳೆಎಲೆಗಳಲ್ಲಿ ಊಟ ಮಾಡುತ್ತಿದ್ದೆವು. ಹಳೆಯ ಸಮಯ ಹಿಂತಿರುಗುತ್ತಿದೆ ಎಂಬುದನ್ನು ನೋಡಲು ಸಂತೋಷವಾಗಿದೆ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಪ್ಯಾಕೇಜಿಂಗ್‌ಗೆ ಪ್ಲಾಸ್ಟಿಕ್‌ಗೆ ಬದಲಾಗಿ ಬಾಳೆ ಎಲೆಗಳನ್ನು ಬಳಸುವುದರಿಂದ ಪ್ಲಾಸ್ಟಿಕ್ ಅನ್ನು ಕಡಿಮೆ ಮಾಡಲು ಉತ್ತಮ ಮಾರ್ಗವಾಗಿದೆ. ಇದು ಪ್ಲಾಸ್ಟಿಕ್ ಬಳಕೆಗೆ ಜೈವಿಕ ವಿಘಟನೀಯ ಪರ್ಯಾಯವಾಗಿದೆ. ಬಾಳೆ ಎಲೆಗಳು ಉತ್ಪನ್ನವನ್ನು ತಾಜಾವಾಗಿಡಲು ಉಪಯುಕ್ತವಾಗಿದೆ ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ. Supermarkets are using banana leaves instead of plastic packaging. Great idea! Need for the future! pic.twitter.com/BjFka3v2WP — Harsh Goenka (@hvgoenka) March 28, 2022 The use of banana leaves instead of plastic for packaging is a great way to reduce single use plastic. It's a biodegradable alternative to plastic use. It's a eco-friendly packaging technique. Banana leaves help to keep the product fresh, readily available and r antibacterial — Raj (@Raj_bhy) March 29, 2022 We need to encourage such activities. Hats off to you sir.You try yo reach where it matters most. — Shashiprakash(vu3ksp) (@vu3ksp) March 28, 2022