
ಹೊಸ ವರ್ಷ 2023ಕ್ಕಾಗಿ ಎಲ್ಲರೂ ಕಾತರದಿಂದ ಕಾಯ್ತಿದ್ದಾರೆ. 2022ನ್ನು ಅದ್ಧೂರಿಯಾಗಿ ಬೀಳ್ಕೊಟ್ಟು ಹೊಸ ವರ್ಷವನ್ನು ವೆಲ್ಕಮ್ ಮಾಡಲು ತುದಿಗಾಲಲ್ಲಿದ್ದಾರೆ. ದಂಪತಿಗಳು, ನವ ವಿವಾಹಿತ ಜೋಡಿಗಳು, ಪ್ರೇಮಿಗಳು ಹೊಸ ವರ್ಷವನ್ನು ವಿಶಿಷ್ಟವಾಗಿ ಸ್ವಾಗತಿಸುತ್ತಾರೆ.
ಬಹುತೇಕರು ರೊಮ್ಯಾಂಟಿಕ್ ತಾಣಗಳಿಗೆ ಪ್ರವಾಸ ಹೋಗಲು ಇಷ್ಟಪಡ್ತಾರೆ. ಅನೇಕರು ಸಮುದ್ರದ ತೀರದಲ್ಲಿ ಹೊಸ ವರ್ಷವನ್ನು ಆಚರಿಸುತ್ತಾರೆ. ಇಂಥಾ ಜೋಡಿಗಳಿಗೆ ದೆಹಲಿಯ ಸುಂದರ ಸ್ಥಳಗಳು ಹೇಳಿ ಮಾಡಿಸಿದಂತಿವೆ.
ಕಡಿಮೆ ಖರ್ಚಿನಲ್ಲಿ ಹೊಸ ವರ್ಷಾಚರಣೆ ಮಾಡಲು ಈ ತಾಣಗಳು ಬೆಸ್ಟ್. -ಹಳೆಯ ಮತ್ತು ಐತಿಹಾಸಿಕ ಸ್ಥಳಗಳನ್ನು ನೋಡಲು ಬಯಸಿದರೆ ನವದೆಹಲಿಯಲ್ಲಿ ಹಳೆಯ ಕೋಟೆಯನ್ನು ವೀಕ್ಷಣೆ ಮಾಡಬಹುದು. ಸಮೀಪದಲ್ಲಿ ಮೃಗಾಲಯವೂ ಇದೆ. ಝೂ ವೀಕ್ಷಣೆ ಬಳಿಕ ಬೋಟಿಂಗ್ ಅನ್ನು ಆನಂದಿಸಬಹುದು.
ನೀವು ಆಹಾರಪ್ರಿಯರಾಗಿದ್ದರೆ ದಿಲ್ಲಿ ಹಾಟ್ ನಿಮಗೆ ಉತ್ತಮ ಆಯ್ಕೆಯಾಗಿದೆ. ಇಲ್ಲಿ ನೀವು ಭಾರತದ ಮೂಲೆ ಮೂಲೆಯ ಕಲಾಕೃತಿಗಳು, ಆಭರಣಗಳು ಮತ್ತು ವರ್ಣಚಿತ್ರಗಳನ್ನು ಸಹ ನೋಡಬಹುದು. ರೋಮ್ಯಾಂಟಿಕ್ ಡೇಟ್ಗಾಗಿ ಇಲ್ಲಿನ ವಾತಾವರಣವು ಅನುಕೂಲಕರವಾಗಿದೆ. ಹೊಸ ವರ್ಷದಂದು ಕನ್ನಾಟ್ ಪ್ಲೇಸ್ಗೆ ಸಹ ಹೋಗಬಹುದು. ಇಲ್ಲಿ ನೀವು ವಿವಿಧ ರೆಸ್ಟೋರೆಂಟ್ಗಳಲ್ಲಿ ವೆರೈಟಿ ಫುಡ್ ಸವಿಯಲು ಅವಕಾಶವಿದೆ.
ನೀವು ಸ್ಟ್ರೀಟ್ ಫುಡ್ ಪ್ರಿಯರಾಗಿದ್ದರೆ ಈ ಸ್ಥಳವನ್ನು ಇಷ್ಟಪಡುತ್ತೀರಿ. ಹೌಸ್ ಖಾಸ್ ಕೂಡ ದಂಪತಿಗಳಿಗೆ ಹೇಳಿ ಮಾಡಿಸಿದಂತಿದೆ. ಇಲ್ಲಿನ ಕೋಟೆ ಪ್ರವಾಸಿಗರಿಗೆ ತುಂಬಾ ಇಷ್ಟವಾಗುತ್ತದೆ. ಉದ್ಯಾನವನ ಮತ್ತು ಸರೋವರವು ಬಹಳಷ್ಟು ಜನರನ್ನು ಆಕರ್ಷಿಸುತ್ತದೆ.