alex Certify ʼನೈಟ್​ ಕರ್ಫ್ಯೂ ಹಿಂದೆ ಯಾವುದೇ ವಿಜ್ಞಾನ ಇಲ್ಲ, ಸೋಂಕು ನಿಯಂತ್ರಿಸಲು ಮಾಸ್ಕ್‌ ಪ್ರಮುಖ ಮಾರ್ಗʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼನೈಟ್​ ಕರ್ಫ್ಯೂ ಹಿಂದೆ ಯಾವುದೇ ವಿಜ್ಞಾನ ಇಲ್ಲ, ಸೋಂಕು ನಿಯಂತ್ರಿಸಲು ಮಾಸ್ಕ್‌ ಪ್ರಮುಖ ಮಾರ್ಗʼ

ದೇಶದಲ್ಲಿ ಕೊರೊನಾ ವೈರಸ್​ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನೈಟ್​ ಕರ್ಫ್ಯೂ ಜಾರಿಯಲ್ಲಿದೆ. ಈ ನೈಟ್​ ಕರ್ಫ್ಯೂ ವಿಚಾರವಾಗಿ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್​, ಭಾರತದಲ್ಲಿ ಜಾರಿಯಲ್ಲಿರುವ ನೈಟ್​ ಕರ್ಫ್ಯೂವಿನ ಹಿಂದೆ ಯಾವುದೇ ವಿಜ್ಞಾನ ಅಡಗಿಲ್ಲ ಎಂದು ಹೇಳಿದರು.

ಸಂದರ್ಶನವೊಂದರಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ನೈಟ್​ ಕರ್ಫ್ಯೂ ಆದೇಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ನೈಟ್​ ಕರ್ಫ್ಯೂಗಳ ಹಿಂದೆ ಯಾವುದೇ ವಿಜ್ಞಾನವು ಅಡಗಿಲ್ಲ. ಸಾರ್ವಜನಿಕ ಆರೋಗ್ಯಕ್ಕೆ ಸೂಕ್ತವಾಗುವಂತಹ ಕ್ರಮಗಳನ್ನು ಕೈಗೊಳ್ಳಬೇಕು. ನಮ್ಮ ಬಳಿ ಕಳೆದ 2 ವರ್ಷಗಳಿಂದ ಸಾಕಷ್ಟು ಡೇಟಾ ಇದೆ ಎಂದು ಹೇಳಿದರು.

ಹೆಚ್ಚುತ್ತಿರುವ ಓಮಿಕ್ರಾನ್​ ವಿರುದ್ಧ ಸರ್ಕಾರ ಕ್ರಮಗಳ ಬಗ್ಗೆಯೂ ಇದೇ ವೇಳೆ ಮಾತನಾಡಿದ ಅವರು, ರಾಜಕಾರಣಿಗಳು ಹಾಗೂ ಕೋವಿಡ್​ ಸಮಿತಿಯ ಸದಸ್ಯರು ಕೊರೊನಾ ಸೋಂಕನ್ನು ನಿಯಂತ್ರಿಸಲು ವೈಜ್ಞಾನಿಕ ಪುರಾವೆ ಆಧರಿತ ಕ್ರಮಗಳನ್ನು ಕೈಗೊಳ್ಳಬೇಕು. ಸೋಂಕನ್ನು ಹರಡುವುದನ್ನು ತಡೆಯಲು, ಕೊರೊನಾ ಸಾವುಗಳನ್ನು ಕಡಿಮೆ ಮಾಡಲು ಹಾಗೂ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಗಳನ್ನು ನಿಯಂತ್ರಿಸಲು ಬೇಕಾದ ಕ್ರಮಗಳನ್ನು ಸರ್ಕಾರಗಳು ಕೈಗೊಳ್ಳಬೇಕಿದೆ ಎಂದು ಹೇಳಿದರು.

ಸೋಂಕನ್ನು ತಡೆಯಲು ಮಾಸ್ಕ್​ಗಳ ಬಳಕೆ ಅತ್ಯಂತ ಸರಳ ಹಾಗೂ ಪ್ರಮುಖವಾದ ಒಂದು ಕ್ರಮವಾಗಿದೆ. ಆದರೆ ಇದನ್ನು ಪೂರ್ಣ ಮಟ್ಟದಲ್ಲಿ ಜಾರಿಗೆ ತರುವುದು ಮಾತ್ರ ಒಂದು ದೊಡ್ಡ ಚಾಲೆಂಜ್​ ಆಗಿದೆ. ಏಕೆಂದರೆ ಇದಕ್ಕಾಗಿ ಜನರ ಮನೋಭಾವನೆಯನ್ನೇ ಬದಲಿಸಬೇಕಿದೆ ಎಂದು ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...