ನಿಂಬೆಹಣ್ಣಿನಲ್ಲಿ ‘ಸಿ’ ಜೀವಸತ್ವ ಹೇರಳವಾಗಿ ಸಿಗುತ್ತದೆ. ಇದರಿಂದ ಜೀರ್ಣಶಕ್ತಿ ಹೆಚ್ಚುವುದಲ್ಲದೇ ಪಿತ್ತ ವಿಕಾರಗಳು ಕೂಡ ಗುಣ ಹೊಂದುತ್ತದೆ. ಇದಲ್ಲದೇ ಇದರಲ್ಲಿ ಇನ್ನೂ ಅನೇಕ ಔಷಧೀಯ ಗುಣಗಳಿವೆ.
ಒಂದು ಟೀ ಚಮಚ ನಿಂಬೆರಸವನ್ನು ಚೆನ್ನಾಗಿ ಕಳಿತ ಬಾಳೆಹಣ್ಣು, ಜೇನುತುಪ್ಪದೊಡನೆ ಸೇವಿಸಿದರೆ ಆಮಶಂಕೆ ಗುಣವಾಗುತ್ತದೆ.
ಚೇಳು ಕುಟುಕಿದ ಜಾಗಕ್ಕೆ ಒಂದು ಹರಳು ಪೊಟಾಸಿಯಂ ಪರ್ಮಾಂಗನೇಟ್ ಇಟ್ಟು ಅದರ ಮೇಲೆ ಒಂದು ತೊಟ್ಟು ನಿಂಬೆರಸ ಹಾಕಿದರೆ ಉರಿ ಕಡಿಮೆಯಾಗುತ್ತದೆ.
ಮುಖದ ಕಾಂತಿ ಹೆಚ್ಚಲು ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಮಜ್ಜಿಗೆಗೆ ನಿಂಬೆಹಣ್ಣು ಬೆರೆಸಿ ಕುಡಿಯಬೇಕು.
ನೀರಿಗೆ ನಿಂಬೆಹಣ್ಣು ಬೆರೆಸಿ ಕುಡಿಯುವುದರಿಂದ ಕೊಬ್ಬು ಕರಗುತ್ತದೆ.
ಮೊಡವೆಗಳು ದೂರವಾಗಲು ನಿಂಬೆಹಣ್ಣಿನ ಸಿಪ್ಪೆಯನ್ನು ಅರಿಶಿನದೊಂದಿಗೆ ನುಣ್ಣಗೆ ಅರೆದು ಮುಖಕ್ಕೆ ಹಚ್ಚಿಕೊಳ್ಳಬೇಕು.
ಮಜ್ಜಿಗೆಗೆ ನಿಂಬೆಹಣ್ಣಿನ ರಸ ಮತ್ತು ಜೀರಿಗೆ, ಏಲಕ್ಕಿ (ಪುಡಿ) ಹಾಕಿ ಕುಡಿದರೆ ವಾಂತಿ ನಿಲ್ಲುವುದು
ಸೀಗೆಪುಡಿಯೊಂದಿಗೆ ನಿಂಬೆಹಣ್ಣಿನ ರಸವನ್ನು ಸೇರಿಸಿ ತಲೆಗೆ ಹಚ್ಚಿ ನಂತರ ತಲೆಸ್ನಾನ ಮಾಡುವುದರಿಂದ ಹೊಟ್ಟು ಕಡಿಮೆಯಾಗುವುದು.
ಋತುಸ್ರಾವದ ಸಮಯದಲ್ಲಿ ದಿನಕ್ಕೆ ಮೂರ್ನಾಲ್ಕು ಬಾರಿ ನಿಂಬೆರಸ ಸೇವಿಸಿದರೆ ಹೆಚ್ಚಿನ ಋತುಸ್ರಾವ ಆಗುವುದಿಲ್ಲ.
ಅಜೀರ್ಣವಾದಾಗ ನೀರಿಗೆ ನಿಂಬೆರಸ, ಅಡಿಗೆ ಸೋಡ ಬೆರೆಸಿ ಕುಡಿಯಬೇಕು.