ನಂಬಿಕೆ, ವಿಶ್ವಾಸ, ಪ್ರೀತಿ ಜೊತೆ ದಾಂಪತ್ಯ ಗಟ್ಟಿಯಾಗಲು ಸೆಕ್ಸ್ ಅತ್ಯಗತ್ಯ. ಸಾಮಾನ್ಯವಾಗಿ ಒಂದು ವಯಸ್ಸಿನ ನಂತ್ರ ಸೆಕ್ಸ್ ನಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಶಾರೀರಿಕ ಸಂಬಂಧಕ್ಕೆ ಸಮಯ ಸಿಗುವುದಿಲ್ಲ.
ದಂಪತಿ ಮಧ್ಯೆ ಬಿರುಕು ಮೂಡಲು ಇದು ಕಾರಣವಾಗುತ್ತದೆ. ಜೀವನದಲ್ಲಿ ಸೆಕ್ಸ್ ಬೋರಾಗದೆ, ದಾಂಪತ್ಯ ಗಟ್ಟಿಯಾಗಿರಬೇಕೆಂದ್ರೆ ನವ ವಿವಾಹಿತರು ಕೆಲವೊಂದು ಟಿಪ್ಸ್ ಪಾಲಿಸಬೇಕಾಗುತ್ತದೆ.
ತಜ್ಞರ ಪ್ರಕಾರ, ಪ್ರೀತಿ ಆರೋಗ್ಯಕರ ಸೆಕ್ಸ್ ಗೆ ಬಹಳ ಒಳ್ಳೆಯದು. ಪ್ರತಿ ದಿನದ ಬ್ಯುಸಿ ಕೆಲಸದಲ್ಲಿ ನಮಗೆ ಸಮಯ ಸಿಗೋದೇ ಕಷ್ಟ. ಹಾಗಿರುವಾಗ ಸಂಗಾತಿಗೆ ಸಮಯ ಹೊಂದಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಸಮಯ ಸಿಕ್ಕಾಗ ಪ್ರೀತಿ ವ್ಯಕ್ತಪಡಿಸುವುದನ್ನು ರೂಢಿಸಿಕೊಳ್ಳಿ. ಬೆಳಿಗ್ಗೆ ಹಾಸಿಗೆಯಿಂದ ಏಳುವ ಮೊದಲು ಅಥವಾ ಮನೆಯಿಂದ ಹೊರ ಹೋಗುವ ಮೊದಲು ಸಂಗಾತಿಗೆ ಒಂದು ಪ್ರೀತಿಯ ಮುತ್ತು ನೀಡಿ.
ದಿನನಿತ್ಯದ ಜೀವನದಲ್ಲಿ ಸೆಕ್ಸ್ ಸ್ಕಿಪ್ ಮಾಡಬೇಡಿ. ಇದು ದಾಂಪತ್ಯಕ್ಕೆ ಒಳ್ಳೆಯದಲ್ಲ. ಪ್ರತಿ ದಿನ ಸೆಕ್ಸ್ ಅಗತ್ಯವಿಲ್ಲ. ವಾರಕ್ಕೆ ಎರಡು ದಿನವಾದ್ರೂ ಸಮಯ ಹೊಂದಿಸಿಕೊಳ್ಳಿ. ಸೆಕ್ಸ್ ಸಂಬಂಧ ಗಟ್ಟಿ ಮಾಡುವ ಜೊತೆ ಆರೋಗ್ಯಕ್ಕೆ ಒಳ್ಳೆಯದು.
ಸೆಕ್ಸ್ ಬಗ್ಗೆ ಮಾತನಾಡುವುದು ಪಾಪವಲ್ಲ. ಮುಜುಗರದ ವಿಷ್ಯವೂ ಅಲ್ಲ. ಸಂಗಾತಿ ಜೊತೆ ಸೆಕ್ಸ್ ಬಗ್ಗೆ ಮನ ಬಿಚ್ಚಿ ಮಾತನಾಡಿದ್ರೆ ಮಾತ್ರ ನಿಮ್ಮ ಮನಸ್ಸಿನ ಭಾವನೆ ಅವರಿಗೆ ಅರ್ಥವಾಗುತ್ತದೆ.
ಸಂಗಾತಿಗಳು ಸೆಕ್ಸ್ ವಿಚಾರದಲ್ಲಿ ಆಲಸ್ಯ ತೋರುವುದು ಒಳ್ಳೆಯದಲ್ಲ. ಸೆಕ್ಸ್ ನಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡ್ತಿದ್ದರೆ ಮಾತ್ರ ಸೆಕ್ಸ್ ಜೀವನ ಉತ್ಸಾಹದಿಂದ ಕೂಡಿರುತ್ತದೆ. ಒಂದೇ ಭಂಗಿಯ ಸಂಭೋಗ ಬಹು ಬೇಗ ಬೇಸರ ತರಿಸುತ್ತದೆ.