alex Certify ʼನವರಾತ್ರಿʼ ಸಂದರ್ಭದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಜೊತೆ ಇದನ್ನು ಸೇವಿಸಬೇಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼನವರಾತ್ರಿʼ ಸಂದರ್ಭದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಜೊತೆ ಇದನ್ನು ಸೇವಿಸಬೇಡಿ

ತಾಯಿ ದುರ್ಗೆ ಆರಾಧನೆಗೆ ಜನರು ಸಜ್ಜಾಗ್ತಿದ್ದಾರೆ. ಅಕ್ಟೋಬರ್ 17ರಿಂದ ನವರಾತ್ರಿ ಶುರುವಾಗ್ತಿದೆ. ನವರಾತ್ರಿ ವೇಳೆಯಲ್ಲಿ ಉಪವಾಸ, ವೃತ ಮಾಡುವ ಭಕ್ತರು ಸಾತ್ವಿಕ ಆಹಾರ ಸೇವನೆ ಮಾಡಬೇಕು.

ಸಾಮಾನ್ಯವಾಗಿ ನವರಾತ್ರಿ ವೃತ ಮಾಡುವವರು ಮಾಂಸ ಆಹಾರ ಸೇವನೆ ಮಾಡುವುದಿಲ್ಲ. ಇದ್ರ ಜೊತೆಗೆ ಈರುಳ್ಳಿ, ಬೆಳ್ಳುಳ್ಳಿ ಸೇವನೆ ಮಾಡುವುದಿಲ್ಲ. ಆದ್ರೆ ವೃತ ಮಾಡುವವರು ಇದನ್ನು ಮಾತ್ರವಲ್ಲ ಇನ್ನೂ ಕೆಲ ಸಾತ್ವಿಕವಲ್ಲದ ಆಹಾರವನ್ನು ನವರಾತ್ರಿ ವೃತದಲ್ಲಿ ಸೇವಿಸಬಾರದು.

ವೃತ ಮಾಡುವವರು ಸಾಸಿವೆ ಸೊಪ್ಪು, ಅಣಬೆಯನ್ನು ಸೇವಿಸಬಾರದು. ಹಾಗೆ ಪ್ಯಾಕ್ ಮಾಡಿದ ಆಹಾರವನ್ನು ಸೇವಿಸಬಾರದು. ಹಳೆಯ, ನಿನ್ನೆಯ ಆಹಾರವನ್ನು ಸೇವಿಸಬಾರದು.

ಎಲ್ಲ ರೀತಿಯ ಧಾನ್ಯಗಳು ಸಾತ್ವಿಕ ಆಹಾರವಾಗಿದ್ದು, ಅದನ್ನು ಸೇವಿಸಬಹುದು. ಹಾಲು ಹಾಗೂ ಹಾಲಿನಿಂದ ತಯಾರಿಸಿದ ಆಹಾರ ಸೇವನೆ ಮಾಡಬಹುದು. ಎಲ್ಲ ರೀತಿಯ ತರಕಾರಿ ಸೇವಿಸಬೇಕು. ಹಣ್ಣು ಹಾಗೂ ಒಣ ಹಣ್ಣುಗಳನ್ನು ವೃತದಲ್ಲಿ ಬಳಸಬಹುದು.

ಸತ್ವಿಕ್ ಎಂಬ ಪದವು ‘ಸತ್ವ’ ಎಂಬ ಪದದಿಂದ ಬಂದಿದೆ. ಇದರರ್ಥ ಶುದ್ಧ, ನೈಸರ್ಗಿಕ ಮತ್ತು ಶಕ್ತಿಯುತ. ಸಾತ್ವಿಕ ಆಹಾರವು ದೇಹವನ್ನು ಶುದ್ಧೀಕರಿಸುತ್ತದೆ ಮತ್ತು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಶುದ್ಧ ಸಸ್ಯಾಹಾರಿ ತರಕಾರಿಗಳು, ಹಣ್ಣುಗಳು, ಕಲ್ಲು ಉಪ್ಪು, ಕೊತ್ತಂಬರಿ, ಕರಿಮೆಣಸಿನಂತಹ ಮಸಾಲೆ ಪದಾರ್ಥಗಳನ್ನು ಇದರಲ್ಲಿ ಬಳಸಲಾಗುತ್ತದೆ.

ನವರಾತ್ರಿ ಸಮಯದಲ್ಲಿ ಜನರು ಸಾತ್ವಿಕ ಆಹಾರವನ್ನು ತಿನ್ನುತ್ತಾರೆ. ಧಾರ್ಮಿಕ ನಂಬಿಕೆಗಳ ಜೊತೆಗೆ ಇದರ ಹಿಂದೆ ಕೆಲವು ವೈಜ್ಞಾನಿಕ ಕಾರಣಗಳಿವೆ. ನವರಾತ್ರಿಯ ಹಬ್ಬ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಬರುತ್ತದೆ. ಹವಾಮಾನದ ಹಠಾತ್ ಬದಲಾವಣೆಯಿಂದಾಗಿ, ನಮ್ಮ ಆಹಾರವು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸಾತ್ವಿಕ ಆಹಾರ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...