ದೇಶಾದ್ಯಂತ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಮನೆಯಲ್ಲಿ ಗೊಂಬೆಗಳನ್ನ ಕೂರಿಸಿ ಅದ್ಧೂರಿಯಾಗಿ ಈ ಹಬ್ಬವನ್ನ ಆಚರಿಸಲಾಗುತ್ತೆ. ಅಲ್ಲದೇ ಗೃಹಿಣಿಯರು ನಿತ್ಯ ಉಪವಾಸ ಮಾಡಿ ದೇವಿಯ ಆರಾಧನೆ ಮಾಡ್ತಾರೆ. ಆದರೆ 9 ದಿನಗಳ ಕಾಲ ಉಪವಾಸ ಮಾಡೋದು ಅಂದ್ರೆ ಸುಮ್ಮನೇ ಅಲ್ಲ. ನಾವು ತೆಗೆದುಕೊಳ್ಳುವ ಲಘು ಆಹಾರಗಳು ನಮಗೆ ಇಡೀ ದಿನಕ್ಕೆ ಸಾಕಾಗೋವಷ್ಟು ಶಕ್ತಿ ಕೊಡುವಂತೆ ಇರಬೇಕು.
ಶೇಂಗಾ ಯಾರ ಮನೆಯಲ್ಲಿ ಇರಲ್ಲ ಹೇಳಿ. ಇದಕ್ಕೆ ಪೇಟೆಯಲ್ಲಿ ಸಿಗುವ ಫಾಕ್ಸ್ ನಟ್ಸ್ನ್ನ ಮಿಕ್ಸ್ ಮಾಡಿ. ಇವೆರಡನ್ನ ಸ್ವಲ್ಪ ಉಪ್ಪು ಹಾಗೂ ತುಪ್ಪದಲ್ಲಿ ಹುರಿದುಕೊಳ್ಳಿ. ಇದನ್ನ ನೀವು ಆಗಾಗ ಬಾಯಿಗೆ ಹಾಕ್ತಾ ಇದ್ರೆ ನಿಮಗೆ ಟೇಸ್ಟ್ ಜೊತೆಗೆ ಶಕ್ತಿನೂ ನಿಮ್ಮದಾಗುತ್ತೆ.
600 ರ ಸಂಭ್ರಮದಲ್ಲಿ ‘ಇಂತಿ ನಿಮ್ಮ ಆಶಾ’
ನೀವು ಸಿಹಿ ತಿಂಡಿ ಪ್ರಿಯರಾದ್ರೆ ಈ ಫಾಕ್ಸ್ ನಟ್ಸ್ಗಳನ್ನ ಕತ್ತರಿಸಿ ಅದನ್ನ ಹಾಲಿಗೆ ಹಾಕಿ 10ರಿಂದ 15 ನಿಮಿಷ ಬೇಯಿಸಿ. ಇದಕ್ಕೆ ಗೋಡಂಬಿ, ಆಲ್ಮಂಡ್ ಕೂಡ ಸೇರಿಸಿಕೊಳ್ಳಬಹುದು. ರುಚಿಗೆ ತಕ್ಕಷ್ಟು ಸಕ್ಕರೆ ಬೆರೆಸಿ ತಿನ್ನಬಹುದು.
ಎಳನೀರು ಕೂಡ ನಿಮ್ಮನ್ನ ಇಡೀ ದಿನ ಹೈಡ್ರೇಟ್ ಆಗಿ ಇಡಬಲ್ಲದು. ಹೀಗಾಗಿ ವೃತ ಕೈಗೊಳ್ಳುವ ಟೈಂನಲ್ಲಿ ದಿನಕ್ಕೆ ಒಂದು ಲೋಟ ಎಳನೀರು ಕುಡಿಯೋದನ್ನ ಅಭ್ಯಾಸ ಮಾಡಿಕೊಳ್ಳಿ.
ಬಾಳೆಹಣ್ಣು ಕೂಡ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದನ್ನ ನೀವು ಮೊಸರಿನ ಜೊತೆ ಹಾಕಿ ತಿಂದ್ರೆ ಯಾವ ಐಸ್ಕ್ರೀಂಗೂ ಕಡಿಮೆ ಇರಲ್ಲ. ದಿನ ಬೆಳಗ್ಗೆ ಮೊಸರು, ಬಾಳೆ ಹಣ್ಣು ಹಾಗೂ ಸಕ್ಕರೆ ಬೆರೆಸಿ ತಿಂದ್ರೆ ನಾಲಗೆ ಚಪ್ಪರಿಸೋದು ಗ್ಯಾರಂಟಿ.
ನಟಿ ಕಂಗನಾ ಪೋಸ್ಟ್ ನೋಡಿ ಶಾರುಖ್ ಅಭಿಮಾನಿಗಳು ಕೆಂಡಾಮಂಡಲ
ದೋಸೆ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ..? ಆದರೆ ಅದಕ್ಕೆ ಅಕ್ಕಿ ಬಳಕೆ ಮಾಡ್ತಾರೆ ಅನ್ನೋ ಕಾರಣಕ್ಕೆ ವೃತ ಕೈಗೊಳ್ಳೋರು ತಾವು ದೋಸೆ ತಿನ್ನಬಾರದು ಅಂತಾ ಭಾವಿಸಿಕೊಳ್ತಾರೆ. ಅಕ್ಕಿ ಜಾಗದಲ್ಲಿ ನೀವು ಗೋಧಿಯನ್ನ ಬಳಸಿಕೊಳ್ಳಬಹುದು. ಗೋಧಿಹಿಟ್ಟು, ಬೆಲ್ಲ, ಕಾಯಿತುರಿಯನ್ನ ಬೆರೆಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿ ಅದಕ್ಕೆ ಚಿಟಿಕೆ ಉಪ್ಪನ್ನ ಹಾಕಿ ದೋಸೆ ರೂಪದಲ್ಲಿ ತಿಂದರೆ ಆ ಮಜಾನೆ ಬೇರೆ.