ನವರಾತ್ರಿ ವೈಭವ ಆರಂಭವಾಗಿದೆ. ಈ ಪವಿತ್ರ ಹಬ್ಬದಲ್ಲಿ ಅನೇಕ ಜನರು ಒಂಬತ್ತು ದಿನಗಳ ಕಾಲ ಉಪವಾಸ ಮಾಡುತ್ತಾರೆ. ಇನ್ನು ಕೆಲವರು ಎರಡು ದಿನ ಉಪವಾಸವಿರುತ್ತಾರೆ. ಉಪವಾಸದಲ್ಲಿ ಹಣ್ಣುಗಳು ಮತ್ತು ಕೆಲವು ಪಾನೀಯಗಳನ್ನು ಮಾತ್ರ ಸೇವಿಸುವುದು ವಾಡಿಕೆ.
ಇದರಿಂದ ಅನೇಕ ಬಾರಿ ದೇಹದಲ್ಲಿ ದೌರ್ಬಲ್ಯ ಮತ್ತು ನೀರಿನ ಕೊರತೆ ಕಾಣಿಸಿಕೊಳ್ಳಬಹುದು. ಕೆಲವು ಸಾತ್ವಿಕ ಪಾನೀಯಗಳನ್ನು ಸೇವನೆ ಮಾಡುವುದರಿಂದ ಈ ಸಮಸ್ಯೆ ಆಗುವುದಿಲ್ಲ. ಕುಡಿಯಲು ರುಚಿಕರವಾಗಿರುವ ಈ ಪಾನೀಯಗಳು ದಿನವಿಡೀ ಹೈಡ್ರೇಟ್ ಆಗಿರಿಸುತ್ತವೆ.
ಮೊದಲನೆಯದು ನಿಂಬೆ ಮತ್ತು ಕಿತ್ತಳೆಯ ಜ್ಯೂಸ್. ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಈ ಪಾನೀಯವು ಕುಡಿಯಲು ತುಂಬಾ ಟೇಸ್ಟಿಯಾಗಿರುತ್ತದೆ.
ಎರಡನೆಯದಾಗಿ ಬಾಳೆಹಣ್ಣಿನ ಮಿಲ್ಕ್ ಶೇಕ್. ಇದನ್ನು ಮಾಡುವುದು ತುಂಬಾ ಸುಲಭ. ಬಾಳೆಹಣ್ಣು, ಹಾಲು ಮತ್ತು ಸಕ್ಕರೆಯನ್ನು ಬ್ಲೆಂಡರ್‌ನಲ್ಲಿ ಹಾಕಿ ಸರಿಯಾಗಿ ರುಬ್ಬಿಕೊಳ್ಳಿ. ಮೇಲೆ ಡ್ರೈಫ್ರೂಟ್ಸ್‌ನಿಂದ ಗಾರ್ನಿಶ್ ಮಾಡಿಕೊಂಡು ಸೇವಿಸಿ.
ಉಪವಾಸದ ಸಮಯದಲ್ಲಿ ತಣ್ಣನೆಯ ಲಸ್ಸಿಯನ್ನು ಸೇವಿಸುವ ಮೂಲಕ ನೀವು ದಿನವಿಡೀ ಚಟುವಟಿಕೆಯಿಂದ ಇರಬಹುದು. ಲಸ್ಸಿ ಮಾಡಲು ಮೊಸರಿಗೆ ಸಕ್ಕರೆ ಸೇರಿಸಿ ಚೆನ್ನಾಗಿ ಕಲಕಿದರೆ ಆಯ್ತು, ಲಸ್ಸಿ ಸಿದ್ಧವಾಗುತ್ತದೆ.
ವಿಶಿಷ್ಟ ಚಹಾ ಕೂಡ ಉಪವಾಸದಲ್ಲೂ ನಮ್ಮನ್ನು ಉಲ್ಲಾಸದಿಂದಿರಿಸುತ್ತದೆ. ಗ್ರೀನ್ ಟೀ ತಯಾರಿಸಿಕೊಂಡು ಅದಕ್ಕೆ ಸ್ವಲ್ಪ ನಿಂಬೆ ರಸ, ಜೇನುತುಪ್ಪ ಮತ್ತು ಶುಂಠಿ ರಸವನ್ನು ಸೇರಿಸಿಕೊಂಡು ಕುಡಿಯಿರಿ.
ಮಚ್ಚಾ ಎಂಬ ಪುಡಿಯಿಂದಲೂ ಪಾನೀಯ ಮಾಡಬಹುದು. ಇದರಲ್ಲಿ ಎಂಟಿಒಕ್ಸಿಡೆಂಟ್‌ಗಳು ಹೇರಳವಾಗಿ ಕಂಡುಬರುತ್ತವೆ. ಒಂದು ಕಪ್‌ನಲ್ಲಿ ಒಂದು ಚಮಚ ಮಚ್ಚಾ ಹಾಕಿ ಮತ್ತು ಅದಕ್ಕೆ ಸ್ವಲ್ಪ ಬಿಸಿನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ತೆಂಗಿನ ಹಾಲು ಮತ್ತು ಸಕ್ಕರೆ ಸೇರಿಸಿದ್ರೆ ಪಾನೀಯ ಸಿದ್ಧ. ಈ ವಿಶಿಷ್ಟ ಪಾನೀಯಗಳನ್ನು ನವರಾತ್ರಿಯಲ್ಲಿ ಟ್ರೈ ಮಾಡಿ ನೋಡಿ.