alex Certify ʼನವರಾತ್ರಿʼಯಲ್ಲಿ 16 ಶೃಂಗಾರಕ್ಕಿದೆ ಮಹತ್ವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼನವರಾತ್ರಿʼಯಲ್ಲಿ 16 ಶೃಂಗಾರಕ್ಕಿದೆ ಮಹತ್ವ

ಶೃಂಗಾರಕ್ಕೆ ಇನ್ನೊಂದು ಹೆಸರು ಮಹಿಳೆ. ನವರಾತ್ರಿಯಲ್ಲಿ ದೇವಿ ದುರ್ಗೆ ಆರಾಧನೆ ನಡೆಯುತ್ತದೆ. ಈ ವೇಳೆ ಮಹಿಳೆಯರಿಗೂ ಹಿಂದೂ ಧರ್ಮದಲ್ಲಿ ಮಹತ್ವ ನೀಡಲಾಗುತ್ತದೆ. ಪ್ರತಿ ದಿನ ದೇವಿಯ ಒಂದೊಂದು ರೂಪವನ್ನು ಆರಾಧನೆ ಮಾಡುವ ಜೊತೆಗೆ ಮನೆಯಲ್ಲಿರುವ ಮಹಿಳೆಯರಿಗೆ ಗೌರವ ನೀಡಿ, ಕನ್ಯೆಯರ ಪೂಜೆ ಮಾಡಿದ್ರೆ ಫಲ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.

ನವರಾತ್ರಿಯಲ್ಲಿ ಮಾ ದುರ್ಗೆಯ 16 ಅಲಂಕಾರಕ್ಕೂ ಹೆಚ್ಚಿನ ಮಹತ್ವವಿದೆ. 16 ಶೃಂಗಾರ ಮನೆಯಲ್ಲಿ ಶಾಂತಿ, ಸಂತೋಷ ತರುತ್ತದೆ ಎಂದು ನಂಬಲಾಗಿದೆ. ಮಾ ಭಗವತಿಯನ್ನು ಮೆಚ್ಚಿಸಲು ಮಹಿಳೆಯರು ಈ ಶುಭ ಹಬ್ಬದಲ್ಲಿ ಈ ಮೇಕಪ್ ಮಾಡುತ್ತಾರೆ. ಕುಂಕುಮ ಅಥವಾ ಬಿಂದಿಯನ್ನು ಹಣೆಗೆ ಹಚ್ಚಿಕೊಳ್ಳುವುದು ಪವಿತ್ರ. ಕುಂಕುಮವನ್ನು ಸೌಭಾಗ್ಯದ ಸಂಕೇತ ಎನ್ನಲಾಗಿದೆ. ಸಿಂಧೂರವನ್ನು ಹಚ್ಚಿಕೊಳ್ಳುವುದ್ರಿಂದ ಗಂಡನ ಆಯಸ್ಸು ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ.

ಮಹಿಳೆಯನ್ನು ಸೆಳೆಯುವುದು ಕಣ್ಣು. ಹಾಗಾಗಿ ಕಣ್ಣಿಗೆ ಕಾಡಿಗೆ ಹಚ್ಚಬೇಕು. ಮೆಹಂದಿಯಿಲ್ಲದೆ ಸಿಂಗಾರ ಪೂರ್ಣಗೊಳ್ಳುವುದಿಲ್ಲ. ಕೆಂಪು ಬಣ್ಣ ತಾಯಿಗೆ ಪ್ರಿಯ. ಹಾಗಾಗಿ ಆದಷ್ಟು ನವರಾತ್ರಿಯಲ್ಲಿ ಕೆಂಪು ಬಣ್ಣದ ಬಟ್ಟೆ ಧರಿಸಿ. ನವರಾತ್ರಿಯಲ್ಲಿ ಮಾತ್ರವಲ್ಲ ಯಾವುದೇ ಶುಭ ಸಂದರ್ಭದಲ್ಲಿ, ದೇವರ ಪೂಜೆ ವೇಳೆ ಕಪ್ಪು ಬಣ್ಣದ ಉಡುಪನ್ನು ಧರಿಸಬೇಡಿ. ಇದು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.

ನವರಾತ್ರಿಯಲ್ಲಿ ಬಳೆ, ಕಿವಿಯೋಲೆ, ಕಾಲಿನ ಗಜ್ಜೆ ಸೇರಿದಂತೆ ಮಹಿಳೆ 16 ಶೃಂಗಾರಗಳನ್ನು ಮಾಡಿಕೊಂಡು ಮನೆ ತುಂಬ ಓಡಾಡುತ್ತಿದ್ದರೆ ತಾಯಿ ದುರ್ಗೆ ಒಲಿಯುತ್ತಾಳೆಂಬ ನಂಬಿಕೆಯಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...