ಸಾಮಾಜಿಕ ಜಾಲತಾಣದಲ್ಲಿ ಮದುವೆ ವಿಡಿಯೋಗಳು ಸಖತ್ ವೈರಲ್ ಆಗುವುದು ಸಹಜ. ಅದರಲ್ಲೂ ದೇಶೀ ಮದುವೆಗಳ ಝಲಕ್‌ಗಳು ನೆಟ್ಟಿಗರಿಗೆ ಭಾರೀ ಇಷ್ಟವಾಗುತ್ತವೆ.
ಬಾಂಗ್ಲಾದೇಶೀ ವಧು ಒಬ್ಬಳು ಮಾಧುರಿ ದೀಕ್ಷಿತ್‌ರ ಕಾಹೇ ಚ್ಛೇಡ್ ಮೋಗೆ ಹಾಡಿಗೆ ಅರಿಶಿನ ಶಾಸ್ತ್ರದ ವೇಳೆ ನೃತ್ಯ ಮಾಡುತ್ತಿರುವ ವಿಡಿಯೋ ಒಂದು ಇದೀಗ ವೈರಲ್ ಆಗಿದೆ. ಆಲಿಯಾ ಹೆಸರಿನ ಬಳಕೆದಾರಿಣಿಯೊಬ್ಬರು ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, ಇದುವರೆಗೂ 1.6 ಲಕ್ಷ ವೀಕ್ಷಣೆಗಳನ್ನು ಕಂಡಿದೆ.
2002ರ ಚಿತ್ರ ದೇವದಾಸ್‌ನ ಹಾಡಿಗೆ ಮದುಮಗಳು ಹಾಗೂ ಮದುಮಗ ಹೆಜ್ಜೆ ಹಾಕುತ್ತಿದ್ದಾರೆ. ವೃತ್ತಿಪರ ನೃತ್ಯಗಾರರಾದ ಇಬ್ಬರೂ, ಚಿತ್ರದಲ್ಲಿ ನಟರು ಹಾಕಿದ ಸ್ಟೆಪ್‌ನಂತೆಯೇ ಹೆಜ್ಜೆ ಹಾಕಿದ್ದಾರೆ. ಇದಕ್ಕೆ ತಕ್ಕಂತೆ ಅತಿಥಿಗಳು ಇಬ್ಬರಿಗೂ ಚಿಯರ್ ಮಾಡುತ್ತಾ ಚಪ್ಪಾಳೆ ತಟ್ಟುತ್ತಿರುವುದನ್ನು ಸಹ ನೋಡಬಹುದಾಗಿದೆ.
https://youtu.be/iWbylv85z-8