ಸಮಸ್ಯೆಯಿಂದ ಹೊರ ಬರಲು ಜನರು ದೇವರ ಮೊರೆ ಹೋಗ್ತಾರೆ. ಪೂಜೆ, ಆರಾಧನೆ ಜೊತೆ ದಾನವನ್ನು ಮಾಡ್ತಾರೆ. ದಾನ ಮಾಡುವುದ್ರಿಂದ ಜಾತಕದಲ್ಲಿರುವ ದೋಷ ನಿವಾರಣೆಯಾಗುತ್ತದೆ. ಆದ್ರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವೊಂದು ವಸ್ತುಗಳು ದಾನಕ್ಕೆ ಯೋಗ್ಯವಾಗಿರುವುದಿಲ್ಲ. ಮರೆತು ನಾವು ಆ ವಸ್ತುಗಳನ್ನು ದಾನ ಮಾಡಿದ್ರೆ ಅಶುಭ ಫಲ ಪ್ರಾಪ್ತಿಯಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪೊರಕೆ ಲಕ್ಷ್ಮಿ ರೂಪ. ಹಾಗಾಗಿ ಪೊರಕೆಯನ್ನು ಎಂದೂ ದಾನ ಮಾಡಬಾರದು. ಪೊರಕೆ ದಾನ ಮಾಡಿದ್ರೆ ಲಕ್ಷ್ಮಿ ಮುನಿಸಿಕೊಂಡು ಮನೆ ಬಿಡುತ್ತಾಳೆಂಬ ನಂಬಿಕೆಯಿದೆ.
ಶಾಸ್ತ್ರದ ಪ್ರಕಾರ ಪಾತ್ರೆಗಳನ್ನು ದಾನ ಮಾಡಬಾರದು. ಅದ್ರಲ್ಲೂ ಸ್ಟೀಲ್ ಪಾತ್ರೆಗಳ ದಾನ ಮಾಡಿದ್ರೆ ಮನೆಯ-ಸುಖ ಸಮೃದ್ಧಿ ಕಡಿಮೆಯಾಗುತ್ತದೆ.
ಎಣ್ಣೆ ದಾನ ಮಾಡುವುದ್ರಿಂದ ಶನಿದೇವನ ಕೃಪೆ ಪ್ರಾಪ್ತಿಯಾಗುತ್ತದೆ. ಆದ್ರೆ ಹಾಳಾದ ಹಾಗೂ ಉಪಯೋಗಿಸಿದ ಎಣ್ಣೆಯನ್ನು ದಾನ ಮಾಡಬಾರದು.
ಬೇರೆಯವರಿಗೆ ಭೋಜನ ನೀಡುವುದು ಶುಭ ಕೆಲಸ. ಆದ್ರೆ ಹಾಳಾದ ಆಹಾರವನ್ನು ಎಂದೂ ದಾನ ಮಾಡಬಾರದು.
ಮನೆಯಲ್ಲಿ ಪ್ಲಾಸ್ಟಿಕ್ ಹೆಚ್ಚಾಗಿ ಬಳಸ್ತಾರೆ. ಆದ್ರೆ ಎಂದೂ ಪ್ಲಾಸ್ಟಿಕ್ ವಸ್ತುಗಳನ್ನು ದಾನ ಮಾಡಬಾರದು.
ಹರಿದ ಹಾಗೂ ಹಾಳಾದ ಬಟ್ಟೆಯನ್ನು ದಾನ ಮಾಡಬಾರದು. ಇದ್ರಿಂದ ಲಕ್ಷ್ಮಿ ಮುನಿಸಿಕೊಂಡು ಹಣದ ಸಮಸ್ಯೆ ಕಾಡುತ್ತದೆ.