ತೆಲಂಗಾಣದಲ್ಲಿರೋ ವಿಶಿಷ್ಟ ರೆಸ್ಟೋರೆಂಟ್ ಒಂದು ಈಗ ಎಲ್ಲರ ಗಮನ ಸೆಳೆಯುತ್ತಿದೆ. ಖಾಜಗುಡ ಏರಿಯಾದಲ್ಲಿರೋ ಈ ರೆಸ್ಟೋರೆಂಟ್ ಹೆಸರು ದಕ್ಷಿಣ್ -5. ಇಲ್ಲಿ ನೀವು ಎಷ್ಟು ಸೌಜನ್ಯಯುತವಾಗಿ ನಡೆದುಕೊಳ್ತಿರೋ ಅಷ್ಟು ನಿಮಗೆ ಡಿಸ್ಕೌಂಟ್ ಸಿಗುತ್ತೆ.
ಒಂದು ವೆಜ್ ಥಾಲಿಯ ಬೆಲೆ 165 ರೂಪಾಯಿ, ಪ್ಲಸ್ ಟ್ಯಾಕ್ಸ್. ಆದ್ರೆ ನೀವು ಥಾಲಿ ಪ್ಲೀಸ್ ಅಂತ ಕೇಳಿದ್ರೆ ನೀವು ಜಸ್ಟ್ 150 ರೂಪಾಯಿ ಪಾವತಿಸಬೇಕು. ಸಿಬ್ಬಂದಿಗೆ ಗುಡ್ ಆಫ್ಟರ್ ನೂನ್ ಎಂದು ವಿಶ್ ಮಾಡಿದ್ರೆ, ನಿಮ್ಮ ಬಿಲ್ ನಲ್ಲಿ 30 ರೂಪಾಯಿ ರಿಯಾಯಿತಿ ಸಿಗುತ್ತದೆ.
ರೆಸ್ಟೋರೆಂಟ್ ನ ಮಾಂಸಾಹಾರಿ ಖಾದ್ಯಗಳಿಗೂ ಈ ಡಿಸ್ಕೌಂಟ್ ಅನ್ವಯವಾಗುತ್ತದೆ. ಈ ರೀತಿ ಮಾಡುವುದರಿಂದ ಗ್ರಾಹಕರು ಶಾಂತ ರೀತಿಯಿಂದ ವರ್ತಿಸ್ತಾರೆ, ಜೊತೆಗೆ ಅವರನ್ನು ಖುಷಿ ಪಡಿಸಬಹುದು ಅನ್ನೋದು ರೆಸ್ಟೋರೆಂಟ್ ನ ಮ್ಯಾನೇಜಿಂಗ್ ಪಾರ್ಟನರ್ ಗಳಾದ ಸಂಜೀವ್ ಕುಮಾರ್ ಹಾಗೂ ಎ.ಕೆ. ಸೋಲಂಕಿ ಅವರ ಅಭಿಪ್ರಾಯ.
ವೃದ್ಧರಿಗೆ ಇಲ್ಲಿ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ವಿಶೇಷ ತಿನಿಸುಗಳು ಇಲ್ಲಿ ಸಿಗುತ್ತವೆ. ಇವರದ್ದೇ ಒಡೆತನದ ಇನ್ನೊಂದು ರೆಸ್ಟೋರೆಂಟ್ ದಿ ವೋಕ್ ನೇಶನ್ ನಲ್ಲಿ ಡೆಲಿವರಿ ಬಾಯ್ಸ್ ಗೆ ಸನ್ಮಾನ ಮಾಡಿರೋದು ವಿಶೇಷ.