ಬೊಜ್ಜು ಕಡಿಮೆ ಮಾಡಲು ಸಕ್ಕರೆ ಇಲ್ಲದೆ ಶುಗರ್ ಫ್ರೀ ಬೆರೆತ ಸಿಹಿ ಪದಾರ್ಥಗಳನ್ನು ಬಳಸುತ್ತಿದ್ದರೆ ತಕ್ಷಣವೇ ಎಚ್ಚೆತ್ತುಕೊಳ್ಳಿ. ಸಕ್ಕರೆ ಮುಕ್ತ ಸಿಹಿತಿಂಡಿಗಳ ಸೇವನೆಯಿಂದ ಮಧುಮೇಹಕ್ಕೆ ತುತ್ತಾಗಬಹುದೆಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಇದಲ್ಲದೆ ಶುಗರ್ ಫ್ರೀ ಸೇವನೆಯಿಂದ ಹೃದ್ರೋಗ ಕೂಡ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸಕ್ಕರೆ ಮುಕ್ತ ಸಿಹಿತಿಂಡಿಗಳನ್ನು ತಿನ್ನುವುದರಿಂದ ತೂಕ ಕೂಡ ಹೆಚ್ಚಾಗಬಹುದು.
ಇತ್ತೀಚಿನ ಸಂಶೋಧನೆಯ ನಂತರ ವಿಶ್ವ ಆರೋಗ್ಯ ಸಂಸ್ಥೆಯು ಸಕ್ಕರೆ ರಹಿತ ಸಿಹಿಕಾರಕಗಳ ಬಗ್ಗೆ ಹೊಸ ಮಾರ್ಗಸೂಚಿಗಳನ್ನು ನೀಡಿದೆ. ಇದರ ಪ್ರಕಾರ, ಕೃತಕ ಸಿಹಿಕಾರಕವನ್ನು ದೀರ್ಘಕಾಲದವರೆಗೆ ಬಳಸುವುದರಿಂದ ಜೀವಕ್ಕೆ ಅಪಾಯವಿದೆ. ಸಂಶೋಧನೆಯ ಪ್ರಕಾರ, ಸಕ್ಕರೆಯೇತರ ಸಿಹಿಕಾರಕಗಳು ಅಥವಾ ಕೃತಕ ಸಿಹಿಕಾರಕಗಳು ತೂಕ ನಷ್ಟ ಮತ್ತು ಜೀವನಶೈಲಿ ಸಂಬಂಧಿತ ರೋಗಗಳಿಗೆ ಕಾರಣವಾಗುತ್ತವೆ.
WHO ಪ್ರಕಾರ ಜನರು ಹಣ್ಣುಗಳು, ಕಬ್ಬು ಅಥವಾ ಜೇನುತುಪ್ಪದಂತಹ ನೈಸರ್ಗಿಕ ಸಿಹಿ ಪದಾರ್ಥಗಳನ್ನು ಸೇವನೆ ಮಾಡಬೇಕು. ಆಹಾರದಲ್ಲಿ ಸಿಹಿಯನ್ನು ಕಡಿಮೆ ಮಾಡುವ ಅಭ್ಯಾಸವನ್ನು ಬಾಲ್ಯದಿಂದಲೇ ರೂಢಿಸಿಕೊಳ್ಳಬೇಕು. ಸಕ್ಕರೆ ರಹಿತ ಸಿಹಿಕಾರಕ ಅಥವಾ ಕೃತಕ ಸಿಹಿಕಾರಕದಲ್ಲಿ ಯಾವುದೇ ಪೋಷಕಾಂಶಗಳಿರುವುದಿಲ್ಲ. ಈ ವಸ್ತುಗಳನ್ನು ದೀರ್ಘಕಾಲದವರೆಗೆ ಬಳಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಬೊಜ್ಜು ಕೂಡ ಸ್ವಲ್ಪವೂ ಕಡಿಮೆಯಾಗುವುದಿಲ್ಲ.
ಮಧುಮೇಹ ರೋಗಿಗಳಿಗೆ ಪ್ರಮುಖ ಮಾಹಿತಿ
ಮಧುಮೇಹ ರೋಗಿಗಳಿಗೆ ಅವರ ದೈನಂದಿನ ಕೃತಕ ಸಿಹಿಕಾರಕದ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಆದರೆ ಶೂನ್ಯ ಕ್ಯಾಲೊರಿ ಹೊಂದಿರುವ ಪದಾರ್ಥಗಳು ಮಾರುಕಟ್ಟೆಯಲ್ಲಿ ಅಪರೂಪ. ಶುಗರ್ ಫ್ರೀಯನ್ನು ಪ್ರತಿದಿನ ಸೇವಿಸುವುದರಿಂದ ಹಾನಿ ಉಂಟಾಗಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಶುಗರ್ ಫ್ರೀ ಸೇವನೆ ನಿಷ್ಪ್ರಯೋಜಕವಾಗಿದೆ. ಮೂರು ತಿಂಗಳ ಕಾಲ ಇಂತಹ ಸಿಹಿಕಾರಕವನ್ನು ಬಳಸುವುದರಿಂದ ತೂಕ ಮತ್ತು ಕ್ಯಾಲೊರಿ ಕಡಿಮೆ ಆದಂತೆ ಎನಿಸಿದರೂ ಇದು ದೇಹದಲ್ಲಿ ಗ್ಲೂಕೋಸ್ ಪ್ರಮಾಣವನ್ನು ಕಡಿಮೆ ಮಾಡುವುದಿಲ್ಲ.
ಹೃದ್ರೋಗವನ್ನೂ ಕಡಿಮೆ ಮಾಡುವುದಿಲ್ಲ
ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡದೇ ಇರುವುದು ಸಂಶೋಧನೆಯಲ್ಲಿ ಬಹಿರಂಗವಾಗಿದೆ. 6-18 ತಿಂಗಳ ಕಾಲ ಈ ಶುಗರ್ ಫ್ರೀ ಸೇವನೆ ಮಾಡಿದವರಲ್ಲಿ ತೂಕ ಕೂಡ ಕಡಿಮೆಯಾಗಲಿಲ್ಲ. ಅಧ್ಯಯನದಲ್ಲಿ ಒಂದು ಗುಂಪಿಗೆ ಕೃತಕ ಸಿಹಿಕಾರಕವನ್ನು ನೀಡಲಾಯಿತು ಮತ್ತು ಇನ್ನೊಂದು ಗುಂಪಿಗೆ ನೀರನ್ನು ನೀಡಲಾಯಿತು. ಎರಡೂ ಗುಂಪಿನಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ಹತ್ತು ವರ್ಷಗಳ ಕಾಲ ನಾನ್ ಶುಗರ್ ಸ್ವೀಟ್ನರ್ ಅಥವಾ ಆರ್ಟಿಫಿಶಿಯಲ್ ಸ್ವೀಟ್ನರ್ಗಳನ್ನು ಸೇವಿಸಿದವರು ಇದಕ್ಕೆ ವಿರುದ್ಧವಾಗಿ ಸ್ಥೂಲಕಾಯಕ್ಕೆ ಒಳಗಾಗುತ್ತಾರೆ.
ಸಂಶೋಧನೆಯ ಪ್ರಕಾರ ಕಳೆದ 13 ವರ್ಷಗಳ ಅನುಸರಣೆಯಲ್ಲಿ ಮಧುಮೇಹ ಮತ್ತು ಹೃದ್ರೋಗದ ಅಪಾಯವು ಹೆಚ್ಚಾಗಿದೆ. ಸ್ಯಾಕ್ರಿನ್ ಮಿಶ್ರಿತ ಸಿಹಿತಿಂಡಿಗಳನ್ನು ಸೇವಿಸುವ ಜನರು ಸಹ ಮೂತ್ರಕೋಶದ ಕ್ಯಾನ್ಸರ್ ಅಪಾಯವನ್ನು ಎದುರಿಸುತ್ತಿದ್ದಾರೆ. ಕೃತಕ ಸಿಹಿಕಾರಕಗಳನ್ನು ಬಳಸುವ ಗರ್ಭಿಣಿಯರಲ್ಲಿ ಅಕಾಲಿಕ ಹೆರಿಗೆಯ ಅಪಾಯ ಕಂಡುಬಂದಿವೆ. ಶಿಶುಗಳಲ್ಲಿ ಆಸ್ತಮಾ ಮತ್ತು ಅಲರ್ಜಿಯ ಸಮಸ್ಯೆ ಕೂಡ ಕಾಣಿಸಿಕೊಂಡಿದೆ. ಆದಾಗ್ಯೂ ಗರ್ಭಾವಸ್ಥೆಯ ಮಧುಮೇಹ ಮತ್ತು ಕೃತಕ ಸಿಹಿಕಾರಕಗಳ ಬಳಕೆಯ ನಡುವೆ ಯಾವುದೇ ಸಂಬಂಧ ಕಂಡುಬಂದಿಲ್ಲ.