ಕಲಬೆರಕೆ ದೇಸಿ ತುಪ್ಪವನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ ಎಂದು ದೆಹಲಿಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಅನ್ಶುಲ್ ಬನ್ಸಾಲ್ (22) ಮತ್ತು ಅರ್ಜುನ್ ಕುಮಾರ್ (30)ರನ್ನು ಬಂಧಿಸಲಾಗಿದ್ದು, ಬಂಧಿತರಿಂದ ವಿವಿಧ ಬ್ರಾಂಡ್‌ಗಳ 1,259 ಲೀಟರ್ ಕಲಬೆರಕೆ ದೇಸಿ ತುಪ್ಪವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಂಚನೆ ಮತ್ತು ದೇಸಿ ತುಪ್ಪದ ಕಲಬೆರಕೆ ಬಗ್ಗೆ ಎಸ್‌ಎಂಸಿ ಫುಡ್ ಲಿಮಿಟೆಡ್ ಮತ್ತು ವಿಆರ್‌ಎಸ್ ಫುಡ್ ಲಿಮಿಟೆಡ್ ಮಾರ್ಕೆಟಿಂಗ್ ಇಂಟೆಲಿಜೆನ್ಸ್ ಅಧಿಕಾರಿ ಜಿತೇಂದರ್ ಸಿಂಗ್ ದೂರಿನ ಮೇರೆಗೆ ಖದೀಮರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿ ಹೊರವಲಯದಲ್ಲಿ ನಕಲಿ ಮತ್ತು ಕಲಬೆರಕೆ ದೇಸಿ ತುಪ್ಪವನ್ನು ಮಾರಾಟ ಮಾಡುವ ಮೂಲಕ ಸಾರ್ವಜನಿಕರ ಆರೋಗ್ಯದೊಂದಿಗೆ ಕೆಲವರು ಆಟವಾಡುತ್ತಿದ್ದಾರೆ ಮತ್ತು ಕಂಪನಿಯ ಮೂಲ ದೇಸಿ ತುಪ್ಪದ ಪ್ಯಾಕೆಟ್‌ಗಳಿಗೆ ನಕಲಿ ತುಪ್ಪ ಸೇರಿಸಿ ಮತ್ತು ಅದನ್ನು ನಿಜವಾದ ತುಪ್ಪ ಎಂದು ಮಾರಾಟ ಮಾಡುತ್ತಿದ್ದಾರೆ ಎಂದು ಜಿತೇಂದರ್ ಸಿಂಗ್ ಆರೋಪಿಸಿದ್ದರು.
ಈ ಸಂಬಂಧ ಪುಷ್ಪಾಂಜಿ ಎನ್‌ಕ್ಲೇವ್‌ನಲ್ಲಿರುವ ಪುನೀತ್ ಚಿಲ್ಲರೆ ಅಂಗಡಿಯಲ್ಲಿ ದೂರುದಾರ ಮತ್ತು ಎಫ್‌ಎಸ್‌ಒ ತಂಡದೊಂದಿಗೆ ಜಂಟಿ ದಾಳಿ ನಡೆಸಲಾಗಿದ್ದು, ರೋಹಿಣಿ ನಿವಾಸಿಗಳಾದ ಇಬ್ಬರನ್ನು ಬಂಧಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಸಮೀರ್ ಶರ್ಮಾ ತಿಳಿಸಿದ್ದಾರೆ.