ಅಮೆರಿಕದ ಹೃದಯ ತಜ್ಞರೊಬ್ಬರು ಆಘಾತಕಾರಿ ಅಂಶವನ್ನು ಬಹಿರಂಗಪಡಿಸಿದ್ದಾರೆ. ಡಾ.ಸ್ಟೀಫನ್ ಗಂಡ್ರಿ ನಡೆಸಿದ್ದ ಸಂಶೋಧನೆ ಪ್ರಕಾರ ಕೆಲವೊಂದು ತರಕಾರಿ ಮತ್ತು ಧಾನ್ಯಗಳಲ್ಲಿರುವ ಪೋಷಕಾಂಶವೇ ನಮ್ಮ ದೇಹಕ್ಕೆ ಮಾರಕವಾಗುತ್ತಿದೆಯಂತೆ.
‘ದಿ ಪ್ಲಾಂಟ್ ಪ್ಯಾರಡೊಕ್ಸ್’ ಅನ್ನೋ ಪುಸ್ತಕದಲ್ಲಿ ಡಾ. ಸ್ಟೀಫನ್ ಈ ಬಗ್ಗೆ ಬರೆದಿದ್ದಾರೆ. ಕೆಲವೊಂದು ಸಸ್ಯಗಳಲ್ಲಿ ಲೆಕ್ಟಿನ್ ಅನ್ನೋ ಜಿಗುಟಾದ ಫೋಷಕಾಂಶವಿದೆಯಂತೆ. ಡೆವಲಪ್ಡ್ ಲೆಕ್ಟಿನ್ ಗಳನ್ನು ತಿನ್ನಲು ಯತ್ನಿಸಿದ ಕೀಟಗಳಿಗೆ ಪಾರ್ಶ್ವವಾಯು ಉಂಟಾಗುತ್ತದೆ.
ಆದ್ರೆ ಮಾನವರ ದೇಹದಲ್ಲಿ ಜೀವಕೋಶಗಳು ಹೆಚ್ಚಾಗಿರುವುದರಿಂದ ಅಷ್ಟು ಬೇಗ ಪರಿಣಾಮ ಗೋಚರಿಸುವುದಿಲ್ಲ. ಲೆಕ್ಟಿನ್ ದೇಹ ಸೇರಿ ಹಲವು ವರ್ಷಗಳ ಬಳಿಕ ಅದರ ದುಷ್ಪರಿಣಾಮ ನಮ್ಮ ಮೇಲಾಗುತ್ತದೆ. ಅಲರ್ಜಿ, ಆಯಾಸ, ಮೆದುಳು ಗಟ್ಟಿಯಾಗುವಿಕೆ, ಹೊಟ್ಟೆ ತೊಳಸುವುದು ಹಾಗೂ ಆಟೋ ಇಮ್ಯೂನ್ ಡಿಸೀಸ್ ಗೆ ತುತ್ತಾಗುವ ಸಾಧ್ಯತೆ ಇರುತ್ತದೆ.
ಅಂತಹ ಅಪಾಯಕಾರಿ ಪ್ರೋಟೀನ್ ಇರುವ ಧಾನ್ಯ ಮತ್ತು ತರಕಾರಿಗಳನ್ನು ಕೂಡ ವೈದ್ಯರು ಪಟ್ಟಿ ಮಾಡಿದ್ದಾನೆ. ಬಟಾಣಿ, ಕಿಡ್ನಿ ಬೀನ್ಸ್, ಸೋಯಾ ಬೀನ್ಸ್, ಗೋಡಂಬಿ, ಶೇಂಗಾ, ಟೊಮೆಟೋ, ಸೌತೇಕಾಯಿ, ಕೆಂಪು ಕ್ಯಾಪ್ಸಿಕಂ ಮತ್ತು ಬದನೆಕಾಯಿಯಲ್ಲಿ ಇಂತಹ ಪೋಷಕಾಂಶಗಳಿವೆಯಂತೆ.