ʼಡ್ರೋನ್ʼ ಮೂಲಕ ಸೆರೆಯಾಗಿದೆ ಲಕ್ಷಾಂತರ ಮೀನುಗಳ ನಡುವೆ ಸಾಗಿದ ಶಾರ್ಕ್ ಗಳ ಮನಮೋಹಕ ದೃಶ್ಯ 22-04-2022 8:04AM IST / No Comments / Posted In: Latest News, Live News, International ಉದ್ಯಮಿ ಹರ್ಷ್ ಗೋಯೆಂಕಾ ಅವರು ಟ್ವಿಟ್ಟರ್ ನಲ್ಲಿ ಸಕ್ರಿಯರಾಗಿದ್ದಾರೆ. ಅವರು ಆಗಾಗ ಆಸಕ್ತಿದಾಯಕ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ಹಳೆ ವಿಡಿಯೋವನ್ನು ಅವರು ಹಂಚಿಕೊಂಡಿದ್ದು, ಇದು ನಿಮ್ಮನ್ನು ಬೆರಗಾಗಿಸುತ್ತದೆ. 64 ವರ್ಷದ ಉದ್ಯಮಿ ಹರ್ಷ್ ಗೋಯೆಂಕಾ ಅವರು ಬೆರಗುಗೊಳಿಸುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸಮುದ್ರದ ಮಧ್ಯದಲ್ಲಿ ಶಾರ್ಕ್ ಮೀನುಗಳು ಈಜು ಹೊಡೆಯುತ್ತಿರುವ ದೃಶ್ಯ ಇದಾಗಿದೆ. ಮೊದಲಿಗೆ ಈ ವಿಡಿಯೋವನ್ನು ಮೈಕ್ ಹುಡೆಮಾ ಎಂಬುವವರು ಹಂಚಿಕೊಂಡಿದ್ದು, 2 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಇದೀಗ ಈ ವಿಡಿಯೋವನ್ನು ಹರ್ಷ್ ಗೋಯೆಂಕಾ ಅವರು ಹಂಚಿಕೊಂಡಿದ್ದಾರೆ. ಸಮುದ್ರದದಲ್ಲಿ ಬೃಹತ್ ಮೀನುಗಳ ಗುಂಪಿನ ಮಧ್ಯೆ ನಾಲ್ಕು ಶಾರ್ಕ್ ಮೀನುಗಳು ಚಲಿಸಿವೆ. ಕುತೂಹಲಕಾರಿಯಾದ ಈ ದೃಶ್ಯವು ಡ್ರೋನ್ ಕ್ಯಾಮರಾದಲ್ಲಿ ಸೆರೆ ಹಿಡಿಯಲ್ಪಟ್ಟಿದೆ. ಸಮುದ್ರದ ಮಧ್ಯದಲ್ಲಿರುವ ಶಾರ್ಕ್‌ಗಳಿಗೆ ಅಸಂಖ್ಯಾತ ಮೀನುಗಳು ಹೇಗೆ ದಾರಿ ಮಾಡಿಕೊಟ್ಟವು ಎಂಬುದನ್ನು ವಿಡಿಯೋದಲ್ಲಿ ನೋಡಬಹುದು. ತಮಗಿಂತ ದೊಡ್ಡ ವ್ಯಕ್ತಿಗಳು (ಪ್ರಭಾವಿಗಳು) ಬಂದಾಗ ಜನರು ಅವರಿಗೆ ಹೇಗೆ ದಾರಿಮಾಡಿಕೊಡುತ್ತಾರೋ ಅದೇ ರೀತಿ ಭೀತಿಯಿಂದ ಈ ಅಸಂಖ್ಯಾತ ಮೀನುಗಳು ಶಾರ್ಕ್ ಮೀನುಗಳಿಗೆ ದಾರಿ ಮಾಡಿಕೊಟ್ಟಂತಿದೆ. ಈ ವಿಡಿಯೋ ನೋಡಿ ನೆಟ್ಟಿಗರು ಕೂಡ ಬೆಚ್ಚಿ ಬಿದ್ದಿದ್ದಾರೆ. ಈ ವಿಡಿಯೋಗೆ ಕೆಲವರು ಹಾಸ್ಯಾಸ್ಪದ ಕಾಮೆಂಟ್‌ಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ. ದೊಡ್ಡವರಿಗೆ, ಬೃಹತ್ ಸಮೂಹವೂ ಹೆದರುತ್ತದೆ ಎಂದು ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. Interesting drone footage of sharks swimming through a massive group of fish near New York. pic.twitter.com/81b1G9tEK8 — Harsh Goenka (@hvgoenka) April 20, 2022