ಒಣಗಿದ ತುಟಿಗಳು ಮುಖದ ಸೌಂದರ್ಯವನ್ನು ಕೆಡಿಸಿಬಿಡುತ್ತವೆ. ಹಾಗಾದರೆ ಈ ಒಣಗಿದ ತುಟಿಗಳ ಸಮಸ್ಯೆಯಿಂದ ಮುಕ್ತಿ ಹೊಂದಲು ಈ ಸಲಹೆಗಳನ್ನು ಪಾಲಿಸಿ.
* 1 ಚಮಚ ಸಕ್ಕರೆಗೆ ಅರ್ಧ ಚಮಚ ಜೇನನ್ನು ಸೇರಿಸಿ ಆ ಮಿಶ್ರಣವನ್ನು ತುಟಿಗಳಿಗೆ ಹಚ್ಚಿಕೊಳ್ಳಿ. ನಂತರ ತುದಿ ಬೆರಳುಗಳಿಂದ ನಿಧಾನವಾಗಿ ರಬ್ ಮಾಡಿ. ಇದು ತುಟಿಯ ಮೇಲಿನ ಸತ್ತ ಜೀವಕೋಶಗಳನ್ನು ಹೋಗಲಾಡಿಸಿ ಮೃದುವಾಗಿಸುತ್ತದೆ.
* ಜೇನು ನೈಸರ್ಗಿಕವಾದ ಮಾಯಿಶ್ಚರೈಸರ್ ಆಗಿರುವುದರಿಂದ ದಿನವೂ ಹಲವು ಬಾರಿ ಅದನ್ನು ತುಟಿಗೆ ಸವರುವುದರಿಂದ ಒಣಗಿದ ತುಟಿಗಳಿಂದ ಮುಕ್ತಿ ಹೊಂದಬಹುದು.
* ದಿನವೂ ತುಟಿಗೆ ಮಿಲ್ಕ್ ಕ್ರೀಮ್ ಹಚ್ಚಿ 10-15 ನಿಮಿಷಗಳ ಕಾಲ ಬಿಡುವುದರಿಂದ ಒಣ ತುಟಿಗಳಿಂದ ಮುಕ್ತರಾಗಬಹುದು.
* ಜೇನು ಮತ್ತು ಗ್ಲಿಸರಿನ್ ಸೇರಿಸಿ ದಿನ ಮಲಗುವ ಮುನ್ನ ತುಟಿಗೆ ಹಚ್ಚುವ ಮೂಲಕ ಮೃದುವಾದ ತುಟಿಯನ್ನು ಹೊಂದಬಹುದು.
* ಗುಲಾಬಿ ಎಸಳುಗಳನ್ನು ಹಾಲಿನಲ್ಲಿ ಸ್ವಲ್ಪ ಸಮಯ ನೆನೆಸಿ ಅದನ್ನು ನುಣ್ಣಗೆ ರುಬ್ಬಿ ದಿನವೂ 2-3 ಬಾರಿ ತುಟಿಗೆ ಹಚ್ಚುವುದರಿಂದ ತುಟಿಯ ರಂಗನ್ನು ಹೆಚ್ಚಿಸಿಕೊಳ್ಳಬಹುದು ಮತ್ತು ತುಟಿಗೆ ಮಾಯಿಶ್ಚರೈಸರ್ ಕೂಡ ದೊರಕುತ್ತದೆ.
* ತೆಂಗಿನೆಣ್ಣೆ ಅಥವಾ ಆಲಿವ್ ಎಣ್ಣೆಯನ್ನು ದಿನ 3-4 ಬಾರಿ ಹಚ್ಚುವುದರಿಂದ ಒಣಗಿದ ತುಟಿಗಳಿಂದ ಮುಕ್ತಿ ಹೊಂದಬಹುದು. ತೆಂಗಿನೆಣ್ಣೆ ನೈಸರ್ಗಿಕವಾದ ಮಾಯಿಶ್ಚರೈಸರ್‌ನ ಅಂಶವನ್ನು ಹೊಂದಿದೆ.
* ರಾತ್ರಿ ಮಲಗುವ ಮುನ್ನ ಅಲೋವೆರಾದ ಎಲೆಯಿಂದ ಸ್ವಲ್ಪ ಜೆಲ್ ಅನ್ನು ತೆಗೆದುಕೊಂಡು ಅದನ್ನು ತುಟಿಗಳಿಗೆ ಹಚ್ಚಿದರೆ ಮೃದುವಾಗುತ್ತದೆ.
* ದಿನ ರಾತ್ರಿ ಮಲಗುವ ಮುನ್ನ ತುಟಿಗಳಿಗೆ ತುಪ್ಪವನ್ನು ಸವರುವುದರಿಂದ ಒಣಗಿದ ತುಟಿಯ ಸಮಸ್ಯೆಯನ್ನು ಹೋಗಲಾಡಿಸಬಹುದು.