ಕರ್ನಾಟಕಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಸ್ಯಾಂಡಲ್ ವುಡ್ ನ ಬಾಕ್ಸಾಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು 45ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಈಗಾಗಲೇ ದರ್ಶನ್ ಅವರ ಕಾಮನ್ ಡಿಪಿ ಹೊಸ ದಾಖಲೆ ಬರೆದಿದೆ. ಕನ್ನಡ ಚಿತ್ರರಂಗದ ಹಲವರು ಕಲಾವಿದರು ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅವರಿಗೆ ವಿಶ್ ಮಾಡಿದ್ದಾರೆ.
ಚರ್ಮದ ಹೊಳಪಿಗೆ ಕಿವಿ ಹಣ್ಣಿನ ʼಫೇಸ್ ಪ್ಯಾಕ್ʼ
ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ತೆರೆಕಂಡು ಭರ್ಜರಿ ಯಶಸ್ಸು ಕಂಡಿತ್ತು. ಇತ್ತೀಚೆಗೆ ಯುವ ಪ್ರತಿಭೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ ದರ್ಶನ್. ಅವರ ನಟನೆಯ ಚೊಚ್ಚಲ ಸಿನಿಮಾ ಮೆಜೆಸ್ಟಿಕ್ ಇತ್ತೀಚೆಗೆ 20 ವರ್ಷ ಪೂರೈಸಿದ್ದು, ಇಂದು ಅವರ ಹುಟ್ಟುಹಬ್ಬದ ಪ್ರಯುಕ್ತ ಮರು ಬಿಡುಗಡೆಯಾಗಲಿದೆ. ದರ್ಶನ್ ಅಭಿಮಾನಿಗಳು ಇದಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಮತ್ತೊಂದೆಡೆ ದರ್ಶನ್ ಹಾಗೂ ವಿ. ಹರಿಕೃಷ್ಣ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ‘ಕ್ರಾಂತಿ’ ಚಿತ್ರದ ಫಸ್ಟ್ ಲುಕ್ ಈಗಾಗಲೇ ಡಿ ಬೀಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದ್ದು, ಸಾಕಷ್ಟು ವೀಕ್ಷಣೆ ಪಡೆದಿದೆ.