ಷೇರು ಮಾರುಕಟ್ಟೆ ಹೂಡಿಕೆದಾರರಾಗಿ ಮಹತ್ವದ ಸುದ್ದಿಯಿದೆ. ಸೆಬಿ ಹೂಡಿಕೆದಾರರಿಗಾಗಿಯೇ ಘೋಷಣೆಯೊಂದನ್ನು ಮಾಡಿದೆ. PAN ಕಾರ್ಡ್ ಮತ್ತು ಆಧಾರ್ ಲಿಂಕ್ನಿಂದ ಟ್ರೇಡಿಂಗ್-ಡಿಮ್ಯಾಟ್ ಖಾತೆಗೆ ನಾಮಿನಿಯ ಹೆಸರನ್ನು ನಮೂದಿಸುವುದು ಕಡ್ಡಾಯವಾಗಿದೆ.
ಈ ಹಿಂದೆ SEBI 2022ರ ಮಾರ್ಚ್ 31ನ್ನು ನಾಮನಿರ್ದೇಶನಕ್ಕೆ ಅಂತಿಮ ದಿನಾಂಕವೆಂದು ಘೋಷಿಸಿತ್ತು. ಆದರೆ ಈಗ SEBI ಅದನ್ನು ಒಂದು ವರ್ಷಕ್ಕೆ ವಿಸ್ತರಿಸಿದೆ.
ಡಿಮ್ಯಾಟ್ ಅಥವಾ ಟ್ರೇಡಿಂಗ್ ಖಾತೆಯಲ್ಲಿ ಇನ್ನೂ ನಾಮನಿರ್ದೇಶನ ಮಾಡದಿರುವವರು 2023ರ ಮಾರ್ಚ್ 31 ರೊಳಗೆ ಅದನ್ನು ಪೂರ್ಣಗೊಳಿಸಬೇಕಿದೆ. ಇದಕ್ಕಾಗಿ ಭಾರತೀಯ ಭದ್ರತಾ ವಿನಿಮಯ ಮಂಡಳಿ ಸುತ್ತೋಲೆ ಹೊರಡಿಸಿದೆ. ಇದರಲ್ಲಿ ಸೆಬಿ, ‘ನಾಮಿನಿ ಮಾಡಲು ಯಾವುದೇ ಸಾಕ್ಷಿ ಅಗತ್ಯವಿಲ್ಲ. ಖಾತೆದಾರರು ನಾಮನಿರ್ದೇಶನ ನಮೂನೆಗೆ ಸಹಿ ಮಾಡುವುದು ಅವಶ್ಯಕ. ಇದಲ್ಲದೆ, ಇ-ಸೈನ್ ಸೌಲಭ್ಯವನ್ನು ಬಳಸಿಕೊಂಡು ಆನ್ಲೈನ್ನಲ್ಲಿ ಸಲ್ಲಿಸಲಾದ ನಾಮನಿರ್ದೇಶನ/ಘೋಷಣಾ ನಮೂನೆಗೆ ಸಾಕ್ಷಿಯ ಅಗತ್ಯವಿರುವುದಿಲ್ಲ. ಆದಾಗ್ಯೂ, ಖಾತೆದಾರರು ಸಹಿಯ ಬದಲಿಗೆ ಹೆಬ್ಬೆರಳಿನ ಗುರುತನ್ನು ಬಳಸಿದರೆ, ಫಾರ್ಮ್ ಅನ್ನು ಸಹ ಸಾಕ್ಷಿಯಿಂದ ಸಹಿ ಮಾಡಬೇಕು” ಎಂದು ಸ್ಪಷ್ಟಪಡಿಸಿದೆ.
ಡಿಮ್ಯಾಟ್ನಲ್ಲಿ ನಾಮನಿರ್ದೇಶನ ಮಾಡುವುದು ಹೇಗೆ ?
– ನೀವು ಸಹ ನಿಮ್ಮ ಖಾತೆಯಲ್ಲಿ ನಾಮಿನಿಯ ಹೆಸರನ್ನು ಸೇರಿಸಲು ಬಯಸಿದರೆ, ಮೊದಲು ನೀವು ನಾಮ ನಿರ್ದೇಶನ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಸಹಿ ಮಾಡಬೇಕು. ನಂತರ ಅದನ್ನು ಕೇಂದ್ರ ಕಚೇರಿಯ (ಡಿಮ್ಯಾಟ್ ಖಾತೆಯನ್ನು ತೆರೆದಿರುವ ಬ್ರೋಕರ್ ಕಂಪನಿ, ಉದಾಹರಣೆಗೆ zerodha) ವಿಳಾಸಕ್ಕೆ ಕೊರಿಯರ್ ಮಾಡಬಹುದು.
– ನಾಮನಿರ್ದೇಶನವು ನಿಮ್ಮ ಟ್ರೇಡಿಂಗ್ ಮತ್ತು ಡಿಮ್ಯಾಟ್ ಖಾತೆಗೆ ಅನ್ವಯಿಸುತ್ತದೆ, ಈ ನಾಮಿನಿಯನ್ನು ನಿಮ್ಮ ಡಿಮ್ಯಾಟ್ ಖಾತೆಗೆ ಸೇರಿಸಲಾಗುತ್ತದೆ. ಅದೇ ನಾಮನಿರ್ದೇಶನವು ನಿಮ್ಮ ಮ್ಯೂಚುವಲ್ ಫಂಡ್ ಹೋಲ್ಡಿಂಗ್ಗಳಿಗೂ ಅನ್ವಯಿಸುತ್ತದೆ. ನಾಮನಿರ್ದೇಶನ ನಮೂನೆಯ ಜೊತೆಗೆ ನಾಮಿನಿಯ ಗುರುತಿನ ಚೀಟಿಯನ್ನು ನೀವು ಕಳುಹಿಸಬೇಕು. ಇದಕ್ಕಾಗಿ ಆಧಾರ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಮುಂತಾದ ಯಾವುದೇ ಐಡಿ ಪುರಾವೆಗಳನ್ನು ಕಳುಹಿಸಬಹುದು.
ನಿಮ್ಮ ಖಾತೆಯನ್ನು ತೆರೆದ ನಂತರ ಮತ್ತು ಯಾರನ್ನಾದರೂ ನಾಮಿನಿ ಮಾಡಿದ ನಂತರ ನೀವು ನಾಮಿನಿಯನ್ನು ಬದಲಾಯಿಸಲು ಬಯಸಿದರೆ, ನೀವು ಶೇ.25+18 GST ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ. ಇದಕ್ಕಾಗಿ ನೀವು ನಾಮನಿರ್ದೇಶನ ಫಾರ್ಮ್ನ ಹಾರ್ಡ್ ಕಾಪಿಯನ್ನು ಖಾತೆ ಮಾರ್ಪಾಡು ಫಾರ್ಮ್ನೊಂದಿಗೆ ಕಳುಹಿಸಬೇಕು.